Job Description: * ಇದೀಗ ರಿಲಯನ್ಸ್ ಜಿಯೊ ಕಂಪನಿಯು ಕೇಬಲ್ ಮೂಲಕ ಬ್ರಾಡ್‌ಬ್ಯಾಂಡ್ ಸೇವೆ ನೀಡುವದನ್ನು ಪ್ರಾರಂಭಿಸಿದೆ, ಇದೀಗ ಜಿಯೋ ಎರಡು ವರ್ಷಗಳಲ್ಲಿ ಸೇವೆಯನ್ನು ನೀಡುವದರಲ್ಲಿ ಮೊದಲ ಸ್ಥಾನಕ್ಕೆರಿದೆ. ಪ್ರಸ್ತುತ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ (BSNL) ಕಂಪನಿಯ ಸುಮಾರು 20 ವರ್ಷಗಳಿಂದ ಈ ವಲಯದಲ್ಲಿ ಮೊದಲ ಸ್ಥಾನದಲ್ಲಿತ್ತು, ಇದೀಗ ಇದರ ಸ್ಥಾನವನ್ನು ಜಿಯೊ ಪಡೆದುಕೊಂಡಿದೆ, BSNL 2 ನೇ ಸ್ಥಾನಕ್ಕೇರಿದೆ. * ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು ಬಿಡುಗಡೆ ಮಾಡಿರುವ ತಿಂಗಳ ಅಂಕಿ-ಅಂಶಗಳ ವರದಿಯ ಪ್ರಕಾರ, ಕೇಬಲ್ ಮೂಲಕ ಬ್ರಾಡ್‌ಬ್ಯಾಂಡ್ ಸೇವೆ ಕಲ್ಪಿಸುವ ಕ್ಷೇತ್ರದಲ್ಲಿ ಇದೀಗ ಜಿಯೊ ಕಂಪನಿಯು 43.4 ಲಕ್ಷ ಗ್ರಾಹಕರನ್ನು ಹೊಂದಿ ಮೊದಲ ಸ್ಥಾನದಲ್ಲಿದೆ ಎಂದು ತಿಳಿಸಿದೆ. * ಜಿಯೋ ಕಂಪನಿ ಈ ಹಿಂದೆ ಅಕ್ಟೋಬರ್‌ ತಿಂಗಳಿನಲ್ಲಿ ಕೇಬಲ್ ಬ್ರಾಡ್‌ಬ್ಯಾಂಡ್ ವಿಭಾಗದಲ್ಲಿ ಸುಮಾರು 41.6 ಲಕ್ಷ ಗ್ರಾಹಕರನ್ನು ಹೊಂದಿತ್ತು, ಇದು ನವೆಂಬರ್‌ ತಿಗಳಿಗೆ ಒಟ್ಟು 43.4 ಲಕ್ಷ ಗ್ರಹಕರನ್ನು ಹೊಂದಿದೆ. * BSNL ಕಂಪನಿ ಈ ಹಿಂದೆ ಅಕ್ಟೋಬರ್‌ನಲ್ಲಿ 47.2 ಲಕ್ಷ ಗ್ರಾಹಕರ ಸಂಖ್ಯೆಯು, ನವೆಂಬರ್‌ ತಿಂಗಳಿನ ವೇಳೆಗೆ 42 ಲಕ್ಷಕ್ಕೆ ಇಳಿಕೆಯಾಗಿದೆ ಎಂದು ತಿಳಿಸಲಾಗಿದೆ. * ಹಾಗೆಯೇ ಭಾರ್ತಿ ಏರ್‌ಟೆಲ್‌ನ ಗ್ರಾಹಕರ ಸಂಖ್ಯೆಯು ಕೇಬಲ್ ಬ್ರಾಡ್‌ಬ್ಯಾಂಡ್ ವಿಭಾಗದಲ್ಲಿ ನವೆಂಬರ್‌ ವೇಳೆಗೆ 40.8 ಲಕ್ಷ ಆಗಿತ್ತು ಎಂದು ತಿಳಿದು ಬಂದಿದೆ. * ಜಿಯೊ ಕಂಪನಿಯು ಈ ಹಿಂದೆ 2019 ರ ಸೆಪ್ಟೆಂಬರ್‌ನಲ್ಲಿ ಕೇಬಲ್ ಬ್ರಾಡ್‌ಬ್ಯಾಂಡ್ ಸೇವೆಗಳನ್ನು ವಾಣಿಜ್ಯ ಬಳಕೆಗೆ ಅನುಮತಿಸಿದೆ. ಆ ವೇಳೆಯಲ್ಲಿ BSNL ಕಂಪನಿಯು ಒಟ್ಟಾರೆ 86.9 ಲಕ್ಷ ಕೇಬಲ್ ಬ್ರಾಡ್‌ಬ್ಯಾಂಡ್ ಗ್ರಾಹಕರನ್ನು ಒಳಗೊಂಡಿತ್ತು, ಆದರೆ 2021 ರ ನವೆಂಬರ್‌ ವೇಳೆಗೆ ಆ ಸಂಖ್ಯೆಯು ಅರ್ಧದಷ್ಟ ಕುಸಿತವಾಗಿದೆ ಎಂದು ತಿಳಿಸಲಾಗಿದೆ. * * ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ : (ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ) TRAI ನ್ನು ಭಾರತ ಸರ್ಕಾರವು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ಆಕ್ಟ್, 1997 ರ ಸೆಕ್ಷನ್ 3 ರ ಅಡಿಯಲ್ಲಿ 1997 ರ ಫೆಬ್ರವರಿ. 20 ರಂದು ಸ್ಥಾಪಿಸಲಾಗಿರುವ ನಿಯಂತ್ರಕ ಸಂಸ್ಥೆಯಾಗಿದೆ. ಈ ಸಂಸ್ಥೆಯು ಸದ್ಯ ಭಾರತದಲ್ಲಿ ದೂರಸಂಪರ್ಕ ವಲಯದ ನಿಯಂತ್ರಕವಾಗಿದೆ. TRAI ಕಾಯಿದೆಯನ್ನು ಸುಗ್ರೀವಾಜ್ಞೆಯ ಮೂಲಕ ತಿದ್ದುಪಡಿ ಮಾಡಿ 2000 ರ ಜನೆವರಿ. 24 ರಿಂದ ಜಾರಿಗೆ ತರಲಾಗಿದೆ. ಇದೀಗ TRAI ನಿಂದ ತೀರ್ಪು ಹಾಗೂ ವಿವಾದಗಳ ಕಾರ್ಯಗಳನ್ನು ಸ್ವೀಕರಿಸಲು ದೂರಸಂಪರ್ಕ ವಿವಾದಗಳ ಇತ್ಯರ್ಥ ಮತ್ತು ಮೇಲ್ಮನವಿ ನ್ಯಾಯಮಂಡಳಿ (TDSAT)ನ್ನು ಸ್ಥಾಪಿಸಿದೆ. * ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್, ಜಿಯೋ ಆಗಿ ತನ್ನ ವ್ಯವಹಾರ ನಡೆಸುತ್ತಿದೆ, ಇದೊಂದು ಭಾರತೀಯ ದೂರಸಂಪರ್ಕ ಕಂಪನಿ ಮತ್ತು ಜಿಯೋ ಪ್ಲಾಟ್‌ಫಾರ್ಮ್‌ಗಳ ಅಂಗಸಂಸ್ಥೆಯಾಗಿದೆ, ಇದು ಮಹಾರಾಷ್ಟ್ರದ ಮುಂಬೈನಲ್ಲಿ ತನ್ನ ಪ್ರಧಾನ ಕಚೇರಿಯನ್ನು ಹೊಂದಿದೆ. ಹಾಗೂ ಎಲ್ಲಾ 22 ಟೆಲಿಕಾಂ ವಲಯಗಳಲ್ಲಿ ವ್ಯಾಪ್ತಿಸಿಕೊಂಡಿದೆ, ಸದ್ಯ ರಾಷ್ಟ್ರೀಯ LTE ನೆಟ್ವರ್ಕ್ ನ್ನು ನಿರ್ವಹಿಸುತ್ತದೆ. * ಜಿಯೋ ಕಂಪನಿಯನ್ನು ಮುಖೇಶ್ ಅಂಬಾನಿ ಅವರು 2007 ರಲ್ಲಿ ಅಹಮದಾಬಾದ್ ನಲ್ಲಿ ಸ್ಥಾಪಿಸಿದ್ದಾರೆ. LYF, Reliance Jio Infocomm Pte. ಲಿಮಿಟೆಡ್ ಇವೆಲ್ಲವೂ ಜಿಯೋ ಕಂಪನಿಯ ಅಂಗಸಂಸ್ಥೆಗಳಾಗಿವೆ. * ಭಾರತ್ ಸಂಚಾರ್ ನಿಗಮ್ ಲಿಮಿಟೆಡ್(BSNL) ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸೇವಾ ಪೂರೈಕೆದಾರರಾಗಿದೆ, ಇದು ನವದೆಹಲಿಯಲ್ಲಿ ತನ್ನ ಪ್ರಧಾನ ಕಛೇರಿಯನ್ನು ಹೊಂದಿದೆ. ಇದನ್ನು ಭಾರತ ಸರ್ಕಾರವು 2000 ರ ಸೆಪ್ಟೆಂಬರ್. 15 ರಂದು ಸ್ಥಾಪಿಸಿದೆ. ಇದೀಗ BSNL ಕಂಪನಿಯು ಮಹಾನಗರ ಟೆಲಿಫೋನ್ ನಿಗಮ್ ಲಿಮಿಟೆಡ್, BSNL ಟವರ್ ಕಾರ್ಪೊರೇಷನ್ ಲಿಮಿಟೆಡ್ ಎಂಬ ಅಂಗಸಂಸ್ಥೆಗಳನ್ನು ಹೊಂದಿದೆ.