Job Description: * ಇತೀಚಿಗೆ ಕೇಂದ್ರ ಸರ್ಕಾರವು ಹಿರಿಯ IAS ಅಧಿಕಾರಿ ವಿಕ್ರಮ್ ದೇವ್ ದತ್ ಅವರನ್ನು ಏರ್ ಇಂಡಿಯಾ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕ ಮಾಡಿದೆ. ಇದೀಗ ಏರ್ ಇಂಡಿಯಾ ವಿಮಾನಯಾನವನ್ನು ಟಾಟಾ ಗ್ರೂಪ್‌ಗೆ ಹಸ್ತಾಂತರಿಸುವವರೆಗೆ ಇವರು ಏರ್ ಇಂಡಿಯಾದ ಉಸ್ತುವಾರಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ. * ಪ್ರಸ್ತುತ ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿಯಾಗಿರುವ ರಾಜೀವ್ ಬನ್ಸಾಲ್ ಅವರಿಂದ ವಿಕ್ರಮ್ ದೇವ್ ದತ್ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. * ವಿಕ್ರಮ್ ದತ್ ಅವರು 1993-ಬ್ಯಾಚ್‌ನ IAS ಅಧಿಕಾರಿಯಾಗಿದ್ದಾರೆ. ಇವರು ಅರುಣಾಚಲ ಪ್ರದೇಶ, ಗೋವಾ, ಮಿಜೋರಾಂ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. * ಇತ್ತೀಚಿಗಷ್ಟೇ 'ಟಾಟಾ ಸನ್ಸ್' ಏರ್‌ಇಂಡಿಯಾ ಬಿಡ್'ನ್ನು ಗೆದ್ದುಕೊಂಡಿದೆ, ಸದ್ಯ ವಿಕ್ರಮ್ ದೇವ್ ದತ್ ಅವರನ್ನು ಏರ್ ಇಂಡಿಯಾದ ಹೆಚ್ಚುವರಿ ಕಾರ್ಯದರ್ಶಿಯ ಹಾಗೂ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ ಎಂದು ಸಿಬ್ಬಂದಿ ಸಚಿವಾಲಯ ಆದೇಶ ಹೊರಡಿಸಿದೆ. * ಈ ಮೊದಲು ವಿಕ್ರಮ್ ದೇವ್ ದತ್ ಅವರು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಸರ್ಕಾರದಲ್ಲಿ ಹಣಕಾಸು ಪ್ರಧಾನ ಕಾರ್ಯದರ್ಶಿಯಾಗಿ, ಗೋವಾ ರಾಜ್ಯ ಸರ್ಕಾರದ ಪ್ರವಾಸೋದ್ಯಮ ಕಾರ್ಯದರ್ಶಿಯಾಗಿ, ಹಾಗೂ ಭಾರತದ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ. * IAS ಅಧಿಕಾರಿ ವಿಕ್ರಮ್ ದತ್ ಅವರು ಈ ಮೊದಲು 2020 ರ ಜೂನ್ ನಲ್ಲಿ ದೆಹಲಿ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು. ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರು 2021 ರ ಮಾರ್ಚ್ ನಲ್ಲಿ ವಿಕ್ರಮ್ ದತ್ ಅವರನ್ನು ಸೇವೆಗಳ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ನಿಯೋಜನೆ ಮಾಡಿದರು. * ಏರ್ ಇಂಡಿಯಾ ಇದೊಂದು ಭಾರತದ ಫ್ಲ್ಯಾಗ್ ಕ್ಯಾರಿಯರ್ ಏರ್‌ಲೈನ್ ಆಗಿದೆ, ಏರ್ ಇಂಡಿಯಾ ನವದೆಹಲಿಯಲ್ಲಿ ತನ್ನ ಪ್ರಧಾನ ಕಛೇರಿಯನ್ನು ಹೊಂದಿದೆ. ಏರ್ ಇಂಡಿಯಾ ಲಿಮಿಟೆಡ್'ನ್ನು ಟಾಟಾ ಸನ್ಸ್‌ನ ವಿಶೇಷ-ಉದ್ದೇಶದ ವಾಹನ (SPV) ಟಲೇಸ್ ಪ್ರೈವೇಟ್ ಲಿಮಿಟೆಡ್‌ಗೆ ಮಾರಾಟ ಮಾಡಲು ಅನುಮೋದಿಸಿದೆ. ಪ್ರಸ್ತುತ ಏರ್ ಇಂಡಿಯಾ 102 ದೇಶೀಯ ಹಾಗೂ ಅಂತರಾಷ್ಟ್ರೀಯ ಸ್ಥಳಗಳಿಗೆ ಸೇವೆ ಸಲ್ಲಿಸುವ ಏರ್‌ಬಸ್ ಮತ್ತು ಬೋಯಿಂಗ್ ವಿಮಾನಗಳ ಸಮೂಹವಾಗಿದೆ. ಈ ಏರ್‌ಲೈನ್ ನವದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತನ್ನ ಕೇಂದ್ರವನ್ನು ಹೊಂದಿದೆ. ಏರ್ ಇಂಡಿಯಾ '4' ಖಂಡಗಳಲ್ಲಿ 60 ಕ್ಕೂ ಅಧಿಕ ಅಂತರಾಷ್ಟ್ರೀಯ ಸ್ಥಳಗಳಿಗೆ ಏರ್ ಇಂಡಿಯಾ ಸೇವೆಯನ್ನು ನೀಡುತ್ತದೆ. ಈ ಹಿಂದೆ 2014 ರ ಜುಲೈ. 11 ರಂದು ಏರ್‌ಲೈನ್ ಸ್ಟಾರ್ ಅಲೈಯನ್ಸ್‌ನ 27 ನೇ ಸದಸ್ಯತ್ವವನ್ನು ಪಡೆದುಕೊಂಡಿದೆ. * ಈ ಹಿಂದೆ 1932 ರಲ್ಲಿ ಜೆ.ಆರ್.ಡಿ.ಟಾಟಾ ಅವರು ಈ ವಿಮಾನಯಾನ ಸಂಸ್ಥೆಯನ್ನು ಟಾಟಾ ಏರ್‌ಲೈನ್ಸ್ ಎಂದು ಸ್ಥಾಪಿಸಿದ್ದರು, ಈ ಸಂಸ್ಥೆಯು 2 ನೇ ಮಹಾಯುದ್ಧದ ನಂತರ ಸಾರ್ವಜನಿಕ ಸೀಮಿತ ಕಂಪನಿಯಾಗಿ ಮಾರ್ಪಟ್ಟಿತು, ಆಗ ಇದಕ್ಕೆ ಏರ್ ಇಂಡಿಯಾ ಎಂದು ಮರುನಾಮಕರಣ ಮಾಡಲಾಯಿತು. 2000-01 ರಲ್ಲಿ, ಏರ್ ಇಂಡಿಯಾವನ್ನು ಖಾಸಗೀಕರಣಗೊಳಿಸುವ ಕೆಲಸ ನಡೆಯುತಿತ್ತು, ನಂತರ 2006 ರಿಂದ, ಇಂಡಿಯನ್ ಏರ್‌ಲೈನ್ಸ್‌ನೊಂದಿಗೆ ವಿಲೀನವಾಯಿತು ಆದರೆ ಈ ಸಂಸ್ಥೆಯು ನಷ್ಟವನ್ನು ಅನುಭವಿಸಿತು. ಮತ್ತೇ 2017 ರಲ್ಲಿ ಖಾಸಗೀಕರಣಗೊಳಿಸುವ ಪ್ರಕ್ರಿಯೆ ಆರಂಭಿಸಲಾಯಿತು, ಆದರೆ ಇತ್ತೀಚಿಗೆ ಈ ಏರ್‌ಲೈನ್‌ನ ಮಾಲೀಕತ್ವವು 2021 ರಲ್ಲಿ ಟಾಟಾ ಸಂಸ್ಥೆಗೆ ಹಿಂತಿರುಗುವ, ಹಾಗೂ ಸಂಬಂಧಪಟ್ಟಿರುವ ಆಸ್ತಿಗಳೊಂದಿಗೆ ಮುಕ್ತಾಯಗೊಂಡಿದೆ.