Job Description: * ಪ್ರಸ್ತುತ ಆಗ್ನೇಯ ಏಷ್ಯಾದ ರಾಷ್ಟ್ರ ಕಾಂಬೊಡಿಯಾದಲ್ಲಿ ನೆಲಬಾಂಬ್'ಗಳನ್ನೂ ಪತ್ತೆಹಚ್ಚುತ್ತಿದ್ದ 'ಮಾಗಾವಾ' ಇಲಿ ಮೃತಪಟ್ಟಿದೆ. ಈ ಇಲಿಯು ಸುಮಾರು 5 ವರ್ಷಗಳ ಅವಧಿಯಲ್ಲಿ 100 ಕ್ಕೂ ಹೆಚ್ಚಿನ ನೆಲಬಾಂಬ್‌ಗಳು ಹಾಗೂ ಸ್ಫೋಟಕಗಳನ್ನು ಪತ್ತೆಹಚ್ಚಿದೆ ಎಂದು ತಿಳಿಸಲಾಗಿದೆ. * ಈ 'ಮಾಗಾವಾ' ಇಲಿಯನ್ನು ಅಂತಾರಾಷ್ಟ್ರೀಯ ಸೇವಾಸಂಸ್ಥೆ ಎಪಿಓಪಿಓ ನಿಯೋಜಿಸಿತ್ತು, ಈ ಸಂಸ್ಥೆಯು ನೆಲಬಾಂಬ್ ಹಾಗೂ ಸ್ಫೋಟಕಗಳನ್ನು ಪತ್ತೆಮಾಡಲು ಆಫ್ರಿಕಾ ಮೂಲದ ಹೆಗ್ಗಣಗಳನ್ನು ಬಳಸಿ ಕೊಳ್ಳಲಾಗುತ್ತಿತ್ತು. ಈ 'ಮಾಗಾವಾ' ಇಲಿ'ಯು 'ಹೀರೋ ರ್ಯಾಟ್' ಎಂದು ಪ್ರಖ್ಯಾತಿಯನ್ನು ಪಡೆದಿತ್ತು. * ಇದೀಗ ಕಾಂಬೊಡಿಯಾ ದೇಶವು ಜಗತ್ತಿನಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ನೆಲಬಾಂಬ್ ಹೂತುಹಾಕಲ್ಪಟ್ಟ ದೇಶಗಳಲ್ಲಿ ಒಂದಾಗಿದೆ. ಈ ದೇಶದ 1 ಸಾವಿರ ಚ.ಕಿ.ಮೀ.ಗೂ ಹೆಚ್ಚು ಭೂಪ್ರದೇಶವು ನೆಲಬಾಂಬ್‌ನಿಂದ ಆವೃತವಾಗಿದೆಯೆಂದು ಅಂತಾರಾಷ್ಟ್ರೀಯ ಸೇವಾಸಂಸ್ಥೆ ಎಪಿಓಪಿಓ ವರದಿ ಮಾಡಿದೆ. * ಆಗ್ನೇಯ ಏಷ್ಯಾದ ರಾಷ್ಟ್ರ ಕಾಂಬೋಡಿಯಾ ಸುಮಾರು 181,035 ಚ. ಕಿ.ಮೀ. ಪ್ರದೇಶದಲ್ಲಿ ವಿಸ್ತರಿಸಿದೆ, 'ನಾಮ್ ಪೆನ್' ಎಂಬ ನಗರವು ಕಾಂಬೋಡಿಯಾ ರಾಜಧಾನಿ ಮತ್ತು ದೊಡ್ಡ ನಗರವಾಗಿದೆ. ಪ್ರಸ್ತುತ ಕಾಂಬೋಡಿಯಾದ ಸಾರ್ವಭೌಮ ರಾಜ್ಯವು 15 ದಶಲಕ್ಷಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ಹಾಗೂ ಬೌದ್ಧಧರ್ಮವನ್ನು ಸಂವಿಧಾನದಲ್ಲಿ ಅಧಿಕೃತ ರಾಜ್ಯ ಧರ್ಮವಾಗಿ ಪ್ರತಿಷ್ಠಾಪಿಸಲಾಗಿದೆ. * ಸದ್ಯ ಕಾಂಬೋಡಿಯಾ ಎಂದು ಕರೆಯುವ ಪ್ರದೇಶವು ಇತಿಹಾಸಪೂರ್ವ ಕಾಲದಿಂದ ಅಂದರೆ ಕ್ರಿ.ಶ. 802 ರಲ್ಲಿ, ಜಯವರ್ಮನ್ II ತನ್ನನ್ನು ತಾನೇ ರಾಜನೆಂದು ಘೋಷಿಸಿಕೊಂಡಾಗಿನಿಂದಲೂ ಇದು ಜನವಸತಿಯ ಪ್ರದೇಶವಾಗಿದೆ. * ಕಾಂಬೋಡಿಯಾ ರಾಷ್ಟ್ರವು 1953 ರಲ್ಲಿ ಫ್ರಾನ್ಸ್‌ನಿಂದ ಸ್ವಾತಂತ್ರ್ಯವನ್ನು ಪಡೆದುಕೊಂಡಿತು, ಇದೀಗ ಕಾಂಬೋಡಿಯಾ ವಿಶ್ವಸಂಸ್ಥೆ, ಆಸಿಯಾನ್, ಆರ್‌ಸಿಇಪಿ, ಪೂರ್ವ ಏಷ್ಯಾ ಶೃಂಗಸಭೆ, ಡಬ್ಲ್ಯುಟಿಒ, ಅಲಿಪ್ತ ಚಳವಳಿ ಮತ್ತು ಲಾ ಫ್ರಾಂಕೋಫೋನಿ ಸದಸ್ಯ ರಾಷ್ಟ್ರವಾಗಿದೆ. ಈ ಹಿಂದೆ US ವರ್ಲ್ಡ್ ಜಸ್ಟೀಸ್ ಪ್ರಾಜೆಕ್ಟ್‌ನ 2015 ರ ರೂಲ್ ಆಫ್ ಲಾ ಇಂಡೆಕ್ಸ್ ಕಾಂಬೋಡಿಯಾ ದೇಶವನ್ನು 126 ದೇಶಗಳಲ್ಲಿ 125 ನೇ ಸ್ಥಾನವನ್ನು ನೀಡಿದೆ.