Job Description: * ಇತ್ತೀಚಿಗೆ ಭಾರತವು ರಷ್ಯಾದಿಂದ ಎಸ್-400 ಕ್ಷಿಪಣಿ ತಂತ್ರಜ್ಞಾನ ಪಡೆಯುವ ತೀರ್ಮಾನವನ್ನು ಅಮೇರಿಕ ದೇಶವು ಬೆಂಬಲಿಸುವುದಿಲ್ಲ ಎಂದು ತಿಳಿಸಿದೆ. ಅಷ್ಟೇ ಅಲ್ಲದೇ ಭಾರತದ ಮೇಲೆ ನಿರ್ಬಂಧ ಕ್ರಮಗಳನ್ನುಹೇರುವದಕ್ಕಿಂತ ಮೊದಲು ಪ್ರಮುಖ ಭೌಗೋಳಿಕ ಕಾರ್ಯತಂತ್ರಗಳನ್ನು ಪರಿಗಣಿಸಲಾಗುತ್ತದೆ ಎಂದು ಅಮೇರಿಕ ತಿಳಿಸಿದೆ. * ಭಾರತವು ಈ ಹಿಂದೆ 2018 ರ ಅಕ್ಟೋಬರ್'ನಲ್ಲಿ ರಷ್ಯಾ ರಾಷ್ಟ್ರದಿಂದ '5' ಎಸ್‌-400 ಕ್ಷಿಪಣಿ ಪಡೆಯವ ಒಪ್ಪಂದಕ್ಕೆ ಸಹಿ ಹಾಕಿತ್ತು. ಆ ಸಮಯದಲ್ಲಿನ ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಸರ್ಕಾರವು, ಭಾರತವು ರಷ್ಯಾ ದೇಶದೊಂದಿಗೆ ಕ್ಷಿಪಣಿ ಖರೀದಿ ಒಪ್ಪಂದಕ್ಕೆ ಪ್ರಕ್ರಿಯೆ ಮುಂದುವರಿಸಿದರೆ ಭಾರತಕ್ಕೆ ನಿರ್ಬಂಧ ಹೇರಲಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿತ್ತು. * ಈ ಹಿಂದೆ 2017 ರಲ್ಲಿ ಅಮೇರಿಕ ಸರ್ಕಾರವು ಕಾಸ್ಟಾ(CAATSA) ಕಾಯ್ದೆಯನ್ನು ರೂಪಿಸಿದೆ. ಈ ಕಾಯಿದೆ ಅಡಿಯಲ್ಲಿ ರಷ್ಯಾ ದೇಶದಿಂದ ಪ್ರಮುಖ ರಕ್ಷಣಾ ಪರಿಕರ, ತಂತ್ರಜ್ಞಾನವನ್ನು ಖರೀದಿಸುವ ದೇಶಗಳ ವಿರುದ್ಧ ಕಟ್ಟುನಿಟ್ಟಿನ ನಿರ್ಬಂಧದ ಕ್ರಮಗಳನ್ನು ಹೇರಲಾಗುತ್ತದೆ ಎಂದು ತಿಳಿಸಿತ್ತು. ಇದೀಗ ಅಮೇರಿಕ ಈ ಕಾಯಿದೆ ಅಡಿಯಲ್ಲಿ ಭಾರತದ ವಿರುದ್ಧ ಕ್ರಮಜರುಗಿಸುಲಾಗುತ್ತದೆ ಎಂದು ತಿಳಿಸಿದೆ, ಹಾಗೂ ಯಾವುದೇ ರೀತಿಯ ಬೆಂಬಲವನ್ನು ನೀಡಲಾಗುವದಿಲ್ಲ ಎಂದು ತಿಳಿಸಿದೆ. * ಈಗಾಗಲೇ ಟರ್ಕಿ ದೇಶವು ರಷ್ಯಾ ರಾಷ್ಟ್ರದಿಂದ ಎಸ್‌-400 ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಖರೀದಿಸಿದೆ, ಇದೀಗ ಅಮೇರಿಕ ದೇಶವು ಕಾಸ್ಟಾ ಕಾಯ್ದೆ ಅಡಿಯಲ್ಲಿ ಆ ದೇಶದ ವಿರುದ್ಧ ನಿರ್ಬಂಧವನ್ನು ಹೇರಿದೆ. * ಕಾಸ್ಟಾ(CAATSA) ಕಾಯ್ದೆ: ನಿರ್ಬಂಧಗಳ ಮೂಲಕ ಅಮೇರಿಕ ದೇಶದ ವಿರೋಧಿಗಳನ್ನು ಎದುರಿಸುವ ಕಾಯಿದೆಯಾಗಿದೆ. ಈ ಕಾಯಿದೆ ಅಡಿಯಲ್ಲಿಯುನೈಟೆಡ್ ಸ್ಟೇಟ್ಸ್ ಫೆಡರಲ್ ಕಾನೂನು ಇರಾನ್, ಉತ್ತರ ಕೊರಿಯಾ ಮತ್ತು ರಷ್ಯಾದ ಮೇಲೆ ನಿರ್ಬಂಧಗಳನ್ನು ವಿಧಿಸಿದ. 2017 ರ ಆಗಸ್ಟ್. 02 ರಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ಕಾಯಿದೆಯ ಕಾನೂನಿಗೆ ಸಹಿ ಹಾಕಿದರು. * ಈ ಹಿಂದೆ 2018 ರ ಅಕ್ಟೋಬರ್'ನಲ್ಲಿ CAATSA ಕಾಯಿದೆಯನ್ನು ನಿರ್ಲಕ್ಷಿಸುವಾಗ, '4' S-400 ಟ್ರಯಂಫ್ ಮೇಲ್ಮೈಯಿಂದ ಗಾಳಿಗೆ ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳನ್ನು ಸಂಗ್ರಹಿಸಲು ಭಾರತವು ರಷ್ಯಾ ರಾಷ್ಟ್ರದ ಜೊತೆಗೆ US 5.43 ಬಿಲಿಯನ್ ಒಪ್ಪಂದವನ್ನು ಮಾಡಿಕೊಂಡಿತು. ಆಗ ರಷ್ಯಾದಿಂದ S-400 ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳನ್ನು ಖರೀದಿಸುವ ಭಾರತದ ನಿರ್ಧಾರದ ಮೇಲೆ U.S. ಭಾರತಕ್ಕೆ ನಿರ್ಬಂಧಗಳ ಬೆದರಿಕೆ ಹಾಕಿತು.