Job Description: * ಪ್ರಸ್ತುತ ಹಿರಿಯ ಸಾಹಿತಿ ಡಾ.ಜಿ.ಎಲ್. ಹೆಗಡೆ ಮಣಕಿ ಅವರನ್ನು ಕರ್ನಾಟಕ ರಾಜ್ಯದ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಇದೀಗ ರಾಜ್ಯ ಸರಕಾರ ಆದೇಶ ಹೊರಡಿಸಿದೆ. * ಹಿರಿಯ ಸಾಹಿತಿ ಡಾ.ಜಿ.ಎಲ್. ಹೆಗಡೆ ಮಣಕಿ ಅವರು ಉತ್ತರ ಕನ್ನಡ ಜಿಲ್ಲೆ ಕುಮಟಾದವರು, ಇವರು ಕುಮಟಾದ ಡಾ.ಎ.ವಿ.ಬಾಳಿಗಾ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಯಕ್ಷಗಾನ ವರ್ಣ ವೈಭವ, ನಮ್ಮ ಚಿಟ್ಟಾಣಿ, ಹಾಲಕ್ಕಿ ಅಧ್ಯಯನ ಹೀಗೆ ಹಲವು ಕೃತಿಗಳನ್ನು ರಚಿಸಿದ್ದಾರೆ. * ಈ ಮೊದಲು ಕರ್ನಾಟಕ ರಾಜ್ಯದ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿದ್ದ ಡಾ.ಎಂ.ಎ.ಹೆಗಡೆ ದಂಟ್ಕಲ್ ಅವರು 2021 ರ ಏಪ್ರಿಲ್. 18 ರಂದು ನಿಧನರಾಗಿದ್ದಾರೆ, ಆ ಬಳಿಕ ಅವರ ಸ್ಥಾನಕ್ಕೆ ಜಿ.ಎಲ್.ಹೆಗಡೆ ಮಣಕಿ ಅವರನ್ನು ನೇಮಕ ಮಾಡಲಾಗಿದೆ ಎಂದು ಕನ್ನಡ ಹಾಗೂ ಸಂಸ್ಕ್ರತಿ ಇಲಾಖೆ ಮಾಹಿತಿ ನೀಡಿದೆ. * ಯಕ್ಷಗಾನ (Yakshagana): ಇದೊಂದು ಸಾಂಪ್ರದಾಯಿಕ ರಂಗಭೂಮಿಯಾಗಿದೆ, ಇದನ್ನು ಸಾಮಾನ್ಯವಾಗಿ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಪಶ್ಚಿಮ ಭಾಗಗಳಲ್ಲಿ, ಹಾಗೂ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಗಳಲ್ಲಿ ಈ ಕಲೆಯನ್ನು ಅಭಿವೃದ್ಧಿಪಡಿಸಲಾಗಿದೆ. ಇದು ಪೂರ್ವ ಶಾಸ್ತ್ರೀಯ ಸಂಗೀತ ಹಾಗೂ ಆ ಸಮಯದಲ್ಲಿನ ಭಕ್ತಿ ಚಳುವಳಿಯಿಂದ ವಿಕಸನಗೊಂಡಿದೆ ಎನ್ನಲಾಗಿದೆ. ಇದನ್ನು ಕೆಲವು ಬಾರಿ ಸರಳವಾಗಿ 'ಆಟ' ಎಂದು ಕರೆಯಲಾಗುತ್ತದೆ. * ಈ ರಂಗಭೂಮಿ ಶೈಲಿಯು ಮುಖ್ಯವಾಗಿ ಕರ್ನಾಟಕ ರಾಜ್ಯದ ಕರಾವಳಿ ಪ್ರದೇಶಗಳಲ್ಲಿ ವಿವಿಧ ರೂಪಗಳಲ್ಲಿ ಕಾಣಿಸಿಕೊಳ್ಳುತ್ತದೆ. ದಕ್ಷಿಣದ ಕಡೆಗೆ ಕಾಸರಗೋಡಿನ ತುಳುನಾಡು ಭಾಗದವರೆಗೆ, ಯಕ್ಷಗಾನದ ರೂಪವನ್ನು 'ತೆಂಕು ತಿಟ್ಟು' ಎಂದು ಕರೆಯುತ್ತಾರೆ. ಪ್ರಸ್ತುತ ಯಕ್ಷಗಾನದ ಕಥೆಗಳನ್ನು ರಾಮಾಯಣ, ಮಹಾಭಾರತ, ಭಾಗವತ ಹಾಗೂ ಹಿಂದೂ ಮತ್ತು ಜೈನ, ಇತರ ಪ್ರಾಚೀನ ಭಾರತೀಯ ಸಂಪ್ರದಾಯಗಳಿಂದ ಇತರ ಮಹಾಕಾವ್ಯಗಳಿಂದ ಇದನ್ನು ಚಿತ್ರಿಸಲಾಗಿದೆ ಎಂದು ತಿಳಿದು ಬಂದಿದೆ. * ಯಕ್ಷಗಾನವು ಕನ್ನಡದಲ್ಲಿ ಪಾಂಡಿತ್ಯಪೂರ್ಣ ಹೆಸರಾಗಿದೆ ಇದನ್ನು ಕಳೆದ 200 ವರ್ಷಗಳಿಂದ ಬಳಕೆ ಮಾಡಲಾಗುತ್ತಿದೆ, ಯಕ್ಷಗಾನ ಎಂಬ ಪದವು ಈ ಹಿಂದೆ 16ನೇ ಶತಮಾನದಿಂದ ಆರಂಭವಾಗಿ, ಇದು ಪ್ರಾಥಮಿಕವಾಗಿ ಕನ್ನಡದಲ್ಲಿ ಸಾಹಿತ್ಯದ ಒಂದು ರೂಪವನ್ನು ತೋರಿಸುತ್ತದೆ. ಅಷ್ಟೇ ಅಲ್ಲದೇ ಈ ಯಕ್ಷಗಾನವನ್ನು ಸಾಹಿತ್ಯ ಅಥವಾ ನಾಟಕ ಪ್ರದರ್ಶನದ ಆಟ ಎಂದು ಕರೆಯುತ್ತಾರೆ.