Job Description: * ಭಾರತೀಯ ಬಾಕ್ಸರ್ ಲವ್ಲೀನಾ ಬೋರ್ಗಹೈನ್ ಅವರು 2020 ರ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಮಹಿಳಾ ವೆಲ್ಟರ್‌ವೇಟ್ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಜಯಿಸಿದ್ದಾರೆ. ಇದೀಗ ಇವರು ಅಸ್ಸಾಂ ರಾಜ್ಯದ ಪೊಲೀಸ್‌ ಇಲಾಖೆಗೆ ತರಬೇತಿ ಉಪ ಅಧೀಕ್ಷಕರಾಗಿ (DYSP) ಸೇರಿಕೊಂಡಿದ್ದಾರೆ, ಈ ಕಾರ್ಯಕ್ರಮದಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಪಾಲ್ಗೊಂಡಿದ್ದರು, ಹಾಗೂ ಅವರಿಗೆ ಅಭಿನಂದನೆಗಳನ್ನೂ ತಿಳಿಸಿದರು. * ಕಳೆದ ವರ್ಷ ಅಂದರೆ 2020 ರ ಬೇಸಿಗೆ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬಾಕ್ಸರ್ ಬೊರ್ಗೊಹೈನ್ ಅವರು ಬಾಕ್ಸಿಂಗ್‌ ವಿಭಾಗದಲ್ಲಿ ಕಂಚಿನ ಪದಕವನ್ನು ಜಯಿಸಿದ್ದಾರೆ, ಇವರ ಈ ಸಾಧನೆ ರಾಜ್ಯಕ್ಕೆ ಮಾದರಿಯಾಗಿದೆ, ಹಾಗೂ ಇನ್ನು ಅನೇಕ ಕ್ರೀಡಾ ಪಟುಗಳು ಹೀಗೆ ಬೆಳೆಯಲಿ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಸಮಾರಂಭದಲ್ಲಿ ತಿಳಿಸಿದ್ದಾರೆ. * ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್: ಅವರು 1997 ರ ಅಕ್ಟೋಬರ್. 02 ರಂದು ಜನಿಸಿದ್ದಾರೆ, ಇವರೊಬ್ಬ ಭಾರತೀಯ ಹವ್ಯಾಸಿ ಬಾಕ್ಸರ್ ಆಗಿದ್ದಾರೆ. ಇವರು ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ 3ನೇ ಭಾರತೀಯ ಬಾಕ್ಸರ್ ಆಗಿ ಹೊರಹೊಮ್ಮಿದ್ದಾರೆ. ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್ ಅವರು ಈ ಮೊದಲು 2018 ರ AIBA ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ ಹಾಗೂ 2019 ರ AIBA ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ಗಳಲ್ಲಿ ಕಂಚಿನ ಪದಕವನ್ನು ಜಯಿಸಿ ಕೊಂಡಿದ್ದರು. ಅಷ್ಟೇ ಅಲ್ಲದೇ ನವದೆಹಲಿಯಲ್ಲಿ ಜರುಗಿರುವ 1ನೇ ಇಂಡಿಯಾ ಓಪನ್ ಇಂಟರ್ನ್ಯಾಷನಲ್ ಬಾಕ್ಸಿಂಗ್ ಟೂರ್ನಮೆಂಟ್‌ನಲ್ಲಿ ಚಿನ್ನದ ಪದಕವನ್ನು ಜಯಿಸಿದ್ದಾರೆ, ಹಾಗೂ ಗುವಾಹಟಿಯಲ್ಲಿ ನಡೆದಿರುವ 2ನೇ ಇಂಡಿಯಾ ಓಪನ್ ಇಂಟರ್ನ್ಯಾಷನಲ್ ಬಾಕ್ಸಿಂಗ್ ಟೂರ್ನಮೆಂಟ್‌'ನಲ್ಲಿ ಬೆಳ್ಳಿ ಪದಕವನ್ನು ಜಯಿಸಿದ್ದಾರೆ. * ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್ ಅವರು ಒಲಿಂಪಿಕ್ಸ್'ನಲ್ಲಿ ಅಸ್ಸಾಂ ರಾಜ್ಯವನ್ನು ಪ್ರತಿನಿಧಿಸುವ ಮೊದಲ ಮಹಿಳಾ ಅಥ್ಲೀಟ್ ಹಾಗೂ 2ನೇ ಬಾಕ್ಸರ್ ಇವರಾಗಿದ್ದಾರೆ. ಈ ಹಿಂದೆ 2020 ರಲ್ಲಿ ಬೊರ್ಗೊಹೈನ್ ಅವರಿಗೆ ಅರ್ಜುನ ಪ್ರಶಸ್ತಿ, ಹಾಗೂ ಅಸ್ಸಾಂ ಪ್ರಶಸ್ತಿಯನ್ನು ಪಡೆದಕೊಂಡಿರುವ ಆ ರಾಜ್ಯದ 6ನೇ ವ್ಯಕ್ತಿಯಾಗಿದ್ದಾರೆ ಎಂದು ಅಸ್ಸಾಂ ಸರ್ಕಾರ ತಿಳಿಸಿದೆ. * ಪ್ರಸ್ತುತ ಅಸ್ಸಾಂ ರಾಜ್ಯವು ತನ್ನ ವನ್ಯಜೀವಿಗಳು, ಪುರಾತತ್ತ್ವ ಶಾಸ್ತ್ರದ ಸ್ಥಳಗಳು ಹಾಗೂ ಚಹಾ ತೋಟಗಳಿಗೆ ಹೆಸರುವಾಸಿಯಾದ ಈಶಾನ್ಯ ಭಾರತದ ರಾಜ್ಯವಾಗಿದೆ. ಅಸ್ಸಾಂನ ಅತಿದೊಡ್ಡ ನಗರ ಗುವಾಹಟಿಯು, ಈ ನಗರವು ರೇಷ್ಮೆ ಬಜಾರ್‌ಗಳು ಮತ್ತು ಬೆಟ್ಟದ ಕಾಮಾಖ್ಯ ದೇವಾಲಯವನ್ನು ಒಳಗೊಂಡಿದೆ. ಅಸ್ಸಾಂ ರಾಜ್ಯದ ರಾಜಧಾನಿ ದಿಸ್ಪುರ್. * ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ರತನ್ ಟಾಟಾ ಅವರು ರಾಜ್ಯದಲ್ಲಿ ಕ್ಯಾನ್ಸರ್ ಆರೈಕೆ ಸೌಲಭ್ಯಗಳಿಗೆ ನೀಡಿದ ಕೊಡುಗೆಗಾಗಿ ಅಸ್ಸಾಂ ಸರ್ಕಾರವು ಕೈಗಾರಿಕೋದ್ಯಮಿ ರತನ್ ಟಾಟಾ ಅವರಿಗೆ ಅಸ್ಸಾಂ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿ 'ಅಸ್ಸಾಂ ಬೈಭವ' ಪ್ರಶಸ್ತಿಯನ್ನು ನೀಡಲು ನಿರ್ಧರಿಸಿದೆ ಸದ್ಯದಲ್ಲೇ ಈ ಪ್ರಶಸ್ತಿಯನ್ನು ಅವರಿಗೆ ಪ್ರಧಾನ ಮಾಡಲಾಗುತ್ತದೆ ಎಂದು ಅಸ್ಸಾಂ ಸರ್ಕಾರ ತಿಳಿಸಿದೆ.