Job Description: * ಪ್ರಸ್ತುತ ಹೆನ್ಲೆ ಆಯಂಡ್ ಪಾರ್ಟ್‌ನರ್ಸ್‌ ಸಂಸ್ಥೆಯು ಪ್ರತಿವರ್ಷವು ಪಾಸ್‌ಪೋರ್ಟ್‌'ಗಳ ಸೂಚ್ಯಂಕವನ್ನು ಅಪ್‌ಡೇಟ್ ಮಾಡುತ್ತದೆ, ಈ ಸಮಸ್ಥೆಯು ವರದಿ ಮಾಡಿರುವ ಪ್ರಕಾರ ಸಿಂಗಾಪುರ ಮತ್ತು ಜಪಾನ್ ದೇಶಗಳ ಪಾಸ್‌ಪೋರ್ಟ್‌ಗಳು ಜಗತ್ತಿನಲ್ಲೇ ಅತ್ಯಂತ ಪ್ರಭಾವಶಾಲಿ ಪಾಸ್‌ಪೋರ್ಟ್‌'ಗಳಾಗಿವೆ ಎಂದು ನೂತನ ಜಾಗತಿಕ ಸೂಚ್ಯಂಕವು ಪ್ರಕಟಿಸಿದೆ. * ಇದೀಗ ಸಿಂಗಾಪುರ ಮತ್ತು ಜಪಾನ್ ದೇಶಗಳ ಪಾಸ್‌ಪೋರ್ಟ್‌ಗಳನ್ನು ಹೊಂದಿರುವರು ವೀಸಾ ಇಲ್ಲದೆಯೇ ಸುಮಾರು 192 ದೇಶಗಳಿಗೆ ಪ್ರಯಾಣ ಬೆಳೆಸಬಹುದು ಎಂದು ಹೆನ್ಲೆ ಆಯಂಡ್ ಪಾರ್ಟನರ್ಸ್‌ ಸಂಸ್ಥೆಯು ವರದಿ ಮಾಡಿದೆ. * ಜರ್ಮನಿ ಹಾಗೂ ದಕ್ಷಿಣ ಕೊರಿಯ ದೇಶಗಳ ಪಾಸ್‌ಪೋರ್ಟ್‌ಗಳ ದ್ವಿತೀಯ(2ನೇ) ಸ್ಥಾನದಲ್ಲಿವೆ, ಈ ದೇಶಗಳ ಪಾರ್ಸ್‌ಪೋರ್ಟ್ ಹೊಂದಿರುವವರು ಸುಮಾರು 190 ದೇಶಗಳಿಗೆ ವೀಸಾ ಇಲ್ಲದೆಯೇ ಪ್ರಯಾಣ ಬೆಳೆಸಬಹುದು ಎಂದು ತಿಳಿದು ಬಂದಿದೆ. ಈ ಹಿಂದಿನ ವರ್ಷ ಎಪ್ರಿಲ್‌ನಲ್ಲಿ ಕೈಗೊಳ್ಳಲಾಗಿರುವ ಸಮೀಕ್ಷೆಯಲ್ಲಿ ಈ ದೇಶಗಳ ಪಾಸ್‌ಪೋರ್ಟ್‌ ತೃತೀಯ(3ನೇ) ಸ್ಥಾನದಲ್ಲಿದ್ದವು. ಈ ವರ್ಷ 2ನೇ ಸ್ಥಾನಕ್ಕೆ ಏರಿಕೆಯನ್ನು ಕಂಡಿವೆ. * ಪ್ರಸ್ತುತ ವರ್ಷದ ಸಮೀಕ್ಷೆಯ ಪ್ರಕಾರ ಫಿನ್‌ಲ್ಯಾಂಡ್, ಲಕ್ಸೆಂಬರ್ಗ್ ಮತ್ತು ಸ್ಪೇನ್ ದೇಶಗಳ ಪಾಸ್‌ಪೋರ್ಟ್‌ ತೃತೀಯ(3ನೇ) ಸ್ಥಾನದಲ್ಲಿವೆ, ಈ ದೇಶಗಳ ಪಾಸ್‌ಪೋಟ್‌'ಗಳನ್ನೂ ಹೊಂದಿರುವವರು ವೀಸಾ ಇಲ್ಲದೆಯೇ ಸುಮಾರು 189 ದೇಶಗಳಿಗೆ ಪ್ರಯಾಣ ಬೆಳೆಸಬಹುದಾಗಿದೆ. * ಆಫ್ರಿಕ ಹಾಗೂ ಡೆನ್ಮಾರ್ಕ್ ದೇಶಗಳ ಪಾಸ್‌ಪೋರ್ಟ್ 4ನೇ ಸ್ಥಾನದಲ್ಲಿವೆ, ಈ ದೇಶಗಳ ಪಾಸ್‌ಪೋರ್ಟ್ ಹೊಂದಿದವರು ವೀಸಾ ಇಲ್ಲದೆಯೇ ಸುಮಾರು 188 ದೇಶಗಳಿಗೆ ಪ್ರಯಾಣ ಬೆಳೆಸಬಹುದಾಗಿದೆ. * ಪ್ರಸ್ತುತ ಜಗತ್ತಿನ ಪಾಸ್‌ಪೋರ್ಟ್‌ ರ್‍ಯಾಂಕಿಂಗ್‌'ನಲ್ಲಿ ಭಾರತ ದೇಶದ ಶ್ರೇಯಾಂಕ ಕಳೆದ ವರ್ಷಕ್ಕಿಂತ ಈ ವರ್ಷ ಉತ್ತಮವಾಗಿದೆ. ಈ ಹಿಂದಿನ ವರ್ಷ 90ನೇ ಸ್ಥಾನದಲ್ಲಿದ್ದ ರ್‍ಯಾಂಕಿಂಗ್‌ ಈ ವರ್ಷದಲ್ಲಿ 83ಕ್ಕೆ ಏರಿದೆ. ಎಂದು ಹೆನ್ಲಿ ಪಾಸ್‌ಪೋರ್ಟ್‌ ಇಂಡೆಕ್ಸ್‌ನಲ್ಲಿ ಮಾಹಿತಿಯನ್ನು ಪ್ರಕಟಿಸಿದೆ. * ಅಮೆರಿಕ ಮತ್ತು ಯುನೈಟೆಡ್‌ ಕಿಂಗ್‌ಡಮ್‌ ದೇಶಗಳ ಪಾಸ್‌ಪೋರ್ಟ್‌ 6ನೇ ಸ್ಥಾನದಲ್ಲಿವೆ. ಪ್ರಸ್ತುತ ವರ್ಷದ ಪಾಸ್‌ಪೋರ್ಟ್‌ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಅಫ್ಘಾನಿಸ್ತಾನ ದೇಶದ ಪಾಸ್‌ಪೋರ್ಟ್‌ 111ನೇ ಶ್ರೇಯಾಂಕ ಪಡೆದು ಕೊನೆಯ ಸ್ಥಾನದಲ್ಲಿದೆ. * ಈ ಹಿಂದೆ 2005ರಿಂದ ಪಾಸ್‌ಪೋರ್ಟ್‌ ಇಂಡೆಕ್ಸ್‌'ನ್ನು ಪ್ರಕಟಿಸಲಾಗುತ್ತಿದೆ.