Job Description: * ಪ್ರಸ್ತುತ 2021ನೇ ವರ್ಷದ ಇಂಡಿಯಾ ಸ್ಕಿಲ್ಸ್ ನ ರಾಷ್ಟ್ರೀಯ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯದ 19 ವಿದ್ಯಾರ್ಥಿಗಳಿಗೆ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ನೀಡಿ ಸನ್ಮಾನಿಸಲಾಗಿದೆ. ಒಟ್ಟಾರೆ ರಾಜ್ಯಕ್ಕೆ 7 ಚಿನ್ನ, 8 ಬೆಳ್ಳಿ, ಹಾಗೂ 4 ಕಂಚಿನ ಪದಕಗಳ ಲಭಿಸಿವೆ. ಈ ಎಲ್ಲ ಪದಕಗಳನ್ನು ಪಡೆಯುವ ಮೂಲಕ ಕರ್ನಾಟಕ ರಾಜ್ಯವು 2021 ನೇ ವರ್ಷದ ಇಂಡಿಯಾ ಸ್ಕಿಲ್ಸ್ ನ್ಯಾಷನಲ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ರಾಜ್ಯವಾಗಿದೆ. * ಈ 2021 ನೇ ವರ್ಷದ ಇಂಡಿಯಾ ಸ್ಕಿಲ್ಸ್ ಸ್ಪರ್ಧೆಯಲ್ಲಿ ಒಟ್ಟು 185 ಅಭ್ಯರ್ಥಿಗಳನ್ನು ವಿಜೇತರೆಂದು ಘೋಷಣೆ ಮಾಡಲಾಗಿದೆ, ಪ್ರಸ್ತುತ ಭಾರತ ಸರ್ಕಾರದ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ (MSDE) ಕಾರ್ಯದರ್ಶಿಗಳಾದ ರಾಜೇಶ್ ಅಗರ್ವಾಲ್‍ರವರು ಈ ಎಲ್ಲ ವಿಜೇತರನ್ನು ನವದೆಹಲಿಯಲ್ಲಿನ ಟಾಲ್ಕಟೋರಾ ಮೈದಾನದಲ್ಲಿ ಸನ್ಮಾನಿಸಿದರು. ಈ ಸ್ಪರ್ಧೆಯ ವಿಜೇತರಿಗೆ 1,00,000 ರೂ. ನಗದು ಬಹುಮಾನ, ಹಾಗೂ ಮೊದಲ ರನ್ನರ್ಸ್ ಅಪ್ ಗೆ 75,000 ರೂ.ನಗದು ಬಹುಮಾನ, ಮತ್ತು 2 ನೇ ರನ್ನರ್ಸ್ ಅಪ್‍ ಗೆ 50,000 ರೂ, ನಗದು ಬಹುಮಾನವನ್ನು ನೀಡಲಾಗಿದೆ. * ಪ್ರಸ್ತುತ ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮವು ಆಯೋಜಿಸಿರುವ ಈ ಇಂಡಿಯಾ ಸ್ಕಿಲ್ಸ್ ಸ್ಪರ್ಧೆಯುಲ್ಲಿ ಸುಮಾರು 54 ಕೌಶಲ್ಯಗಳಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿತ್ತು. ಈ ವರ್ಷ ಇಂಡಿಯಾ ಸ್ಕಿಲ್ಸ್ ಸ್ಪರ್ಧೆಯು 26 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿನ 500 ಕ್ಕೂ ಅಧಿಕ ಸ್ಪರ್ಧಿಗಳನ್ನು ಒಟ್ಟಾಗಿ ಸೇರಿಸಿತ್ತು. * ಇದೇ ವರ್ಷದ ಕೊನೆಯಲ್ಲಿ ಚೀನಾ ದೇಶದ ಶಾಂಘೈನಲ್ಲಿ ಜರುಗುವ ವಲ್ರ್ಡ್ ಸ್ಕಿಲ್ಸ್ ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನವನ್ನು ನೀಡಲು ಟೀಮ್ ಇಂಡಿಯಾ ತರಬೇತಿಯನ್ನು ಪಡೆದುಕೊಂಡು ಸಿದ್ಧವಾಗಿದೆ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಈ ಇಂಡಿಯಾ ಸ್ಕಿಲ್ಸ್ ಸ್ಪರ್ಧೆಯು ಭವಿಷ್ಯದಲ್ಲಿ ಹೊಸ ಹೊಸ ವ್ಯಾಪಾರ ಹಾಗೂ ಉದ್ಯೋಗದ ಕೌಶಲ್ಯಗಳನ್ನು ಪರಿಚಯಿಸಲಿದೆ ಎಂದು ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಅಧಿಕೃತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೇದ್ ಮಣಿ ತಿವಾರಿ ಅವರು ತಿಳಿಸಿದ್ದಾರೆ. * ಈ ಇಂಡಿಯಾ ಸ್ಕಿಲ್ಸ್ ಸ್ಪರ್ಧೆಯನ್ನು ನ್ಯಾಷನಲ್ ಸ್ಕಿಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್(NSDC) ಆಯೋಜಿಸಿದೆ, ಈ ಸಂಸ್ಥೆಯು ಕೌಶಲ್ಯ ಅಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸಲಿದೆ. ಈ NSDC 2011 ರಿಂದ ವರ್ಲ್ಡ್ ಸ್ಕಿಲ್ಸ್ ಇಂಟರ್‌ನ್ಯಾಶನಲ್ ಸ್ಪರ್ಧೆಗಳಲ್ಲಿ ಭಾರತ ದೇಶ ಪಾಲ್ಗೊಳ್ಳುವಿಕೆಯನ್ನು ನೋಡಿಕೊಳ್ಳುತ್ತಿದೆ. * ಇಂಡಿಯಾ ಸ್ಕಿಲ್ಸ್ ಸ್ಪರ್ಧೆಯು : ದೇಶದ ಅತಿ ದೊಡ್ಡ ಕೌಶಲ್ಯ ಸ್ಪರ್ಧೆಯನ್ನು ಕೌಶಲ್ಯದ ಉನ್ನತ ಗುಣಮಟ್ಟವನ್ನು ಪ್ರದರ್ಶಿಸಲು ಆರಂಭಿಸಲಾಗಿದೆ, ಇದು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿಭೆಯನ್ನು ಪ್ರದರ್ಶಿಸುವ ಯುವಜನರ ವೇದಿಕೆಯಾಗಿದೆ. ಪ್ರಸ್ತುತ ರಾಜ್ಯ ಸರ್ಕಾರಗಳು ಹಾಗೂ ಉದ್ಯಮದ ಬೆಂಬಲದೊಂದಿಗೆ ಪ್ರತಿ '2' ವರ್ಷಕೊಮ್ಮೆ ಇಂಡಿಯಾ ಸ್ಕಿಲ್ಸ್ ಸ್ಪರ್ಧೆಯನ್ನು ನಡೆಸಲಾಗುತ್ತದೆ.