Job Description: * ಪ್ರಸ್ತುತ ಭಾರತೀಯ ರೈಲ್ವೆ ಇಲಾಖೆಯು 'ಮಿಷನ್ ಅಮಾನತ್' ನೂತನ ಸೇವೆಯನ್ನು ಆರಂಭಿಸಿದೆ, ಇದೀಗ ರೈಲು ಪ್ರಯಾಣಿಕರು ರೈಲಿನಲ್ಲಿ ಲಗೇಜ್ ನ್ನು ಕಳೆದು ಕೊಂಡರೆ ಈ ಸೇವೆಯ ಮೂಲಕ ಕಳೆದು ಹೋದ ಲಗೇಜ್ ಸುಲಭವಾಗಿ ಪತ್ತೆ ಹಚ್ಚಲಾಗುತ್ತದೆ, ಹಾಗೂ ಆ ಲಗೇಜ್'ನ್ನು ಮರಳಿ ಪ್ರಯಾಣಿಕರಿಗೆ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ. ಈ 'ಮಿಷನ್ ಅಮಾನತ್' ನೂತನ ಸೇವೆಯ ಮಾಹಿತಿಯನ್ನು ಪಶ್ಚಿಮ ರೈಲ್ವೆ ನೀಡಿದೆ. * ಪ್ರಸ್ತುತ ಪ್ರಯಾಣಿಕರು ಕಳೆದುಹೋದ ಲಗೇಜ್ʼಗಳ ವಿವರಗಳನ್ನ ರೈಲ್ವೆ ಇಲಾಖೆಯ ಈ ಲಿಂಕ್'ನ https://wr.indianrailways.gov.in ಅಡಿಯಲ್ಲಿ ಹಂಚಿಕೊಂಡಿರುವ ಚಿತ್ರಗಳೊಂದಿಗೆ ಪರಿಶೀಲಿಸಬಹುದು ಎಂದು ತಿಳಿಸಿದೆ.ಹಾಗೂ ರೈಲ್ವೇ ಪ್ರೊಟೆಕ್ಷನ್ ಫೋರ್ಸ್ (RPF) ಪ್ರಯಾಣಿಕರ ಸುರಕ್ಷತೆ ಹಾಗೂ ಭದ್ರತೆಯ ಜೊತೆಗೆ ಪ್ರಯಾಣಿಕರ ಲಗೇಜ್ ಮೇಲೆ ನಿಗಾ ವಹಿಸಲಿದೆ ಎಂದು ತಿಳಿಸಿದೆ. * ಪ್ರಸ್ತುತ ಪ್ರಯಾಣಿಕರು ಕಳೆದು ಕೊಂಡಿರುವ ಲಗೇಜ್'ಗಳನ್ನೂ ರೈಲ್ವೆ ಇಲಾಖೆಯು ಈ 'ಮಿಷನ್ ಅಮಾನತ್' ಅಡಿಯಲ್ಲಿ ಆ ಲಗೇಜ್'ನ ವಿವರ ಹಾಗೂ ಛಾಯಾಚಿತ್ರಗಳನ್ನೂ ಅಧಿಕೃತ ಜಾಲತಾಣದಲ್ಲಿ ಮಾಹಿತಿ ನೀಡಲಾಗುತ್ತದೆ, ಪ್ರಯಾಣಿಕರು ಆ ಜಾಲತಾಣಕ್ಕೆ ಭೇಟಿ ನೀಡಿ ಅಲ್ಲಿರುವ ಲಗೇಜ್'ಗಳ ಮಾಹಿತಿಯನ್ನು ಪಡೆಯ ಬಹುದಾಗಿದೆ, ಒಂದು ವೇಳೆ ಅವುಗಳಲ್ಲಿ ತಮಗೆ ಸಂಬಂಧಿಸಿದ ಲಗೇಜ್‌ ಗಳಿದ್ದರೆ ಆ ಲಗೇಜ್ ಗಳನ್ನೂ ಪಡೆಯಬಹುದಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. * ಇತ್ತೀಚಿಗೆ ಪಶ್ಚಿಮ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿಯು ನೀಡಿರುವ ಮಾಹಿತಿಯ ಪ್ರಕಾರ, 2021 ರ 'ಜನೆವರಿ' ಯಿಂದ 'ಡಿಸೆಂಬರ್' ವರೆಗೆ ಪಶ್ಚಿಮ ರೈಲ್ವೆ ವಲಯದಲ್ಲಿ ಒಟ್ಟು 1,317 ರೈಲ್ವೆ ಪ್ರಯಾಣಿಕರಿಗೆ ಸಂಬಂಧಿಸಿರುವ 2.58 ಕೋಟಿ ರೂ. ಮೌಲ್ಯದ ಕಳೆದು ಹೋಗಿರುವ ಲಗೇಜ್ ಗಳನ್ನು ಹಿಂದಿರುಗಿಸಲಾಗಿದೆ, ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.