Job Description: * ಪ್ರಸ್ತುತ ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಸತಿ ಶಾಲೆಗಳಿಗೆ ಮರು ನಾಮಕರಣ ಮಾಡಿ, ಇದೀಗ ರಾಜ್ಯ ಸರ್ಕಾರದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯು ಆದೇಶ ನೀಡಿದೆ. ಈ ಮಾಹಿತಿಯನ್ನು ಪ್ರಸ್ತುತ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರಾದ ಬಿ. ಶ್ರೀರಾಮುಲು ಟ್ವೀಟ್ ಮೂಲಕ ತಿಳಿಸಿದ್ದಾರೆ. * ಪ್ರಸ್ತುತ ರಾಜ್ಯದಲ್ಲಿನ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಸತಿ ಶಾಲೆಗಳನ್ನು ಮರು ನಾಮಕರಣ ಮಾಡಲಾಗಿದೆ ಎಂದು ರಾಜ್ಯ ಸರ್ಕಾರದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯು ತಿಳಿಸಿದೆ. * ಇತ್ತೀಚಿಗೆ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳ ವಸತಿ ಶಾಲೆಗಳಿಗೆ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ ಎಂದು ಮರು ನಾಮಕರಣ ಮಾಡಿ ರಾಜ್ಯ ಸರ್ಕಾರವು ಆದೇಶ ಹೊರಡಿಸಿತ್ತು. * ಇದೀಗ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಆಶ್ರಮ ಶಾಲೆಗಳನ್ನು ಇನ್ನು ಮುಂದೆ ಮಹರ್ಷಿ ವಾಲ್ಮೀಕಿ ಆಶ್ರಮ ಶಾಲೆ ಎಂದು ಮರು ನಾಮಕರಣ ಮಾಡಲಾಗಿದೆ, ಎಂದು ರಾಜ್ಯ ಸರ್ಕಾರದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯು ತಿಳಿಸಿದೆ. * ಪ್ರಸ್ತುತ ಕರ್ನಾಟಕ ರಾಜ್ಯದಲ್ಲಿ ಒಟ್ಟು 68 ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಗಳಿವೆ, ಹಾಗೂ 119 ಮಹರ್ಷಿ ವಾಲ್ಮೀಕಿ ಆಶ್ರಮ ಶಾಲೆಗಳಿವೆ ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಅವರು ಮಾಹಿತಿಯನ್ನು ನೀಡಿದ್ದಾರೆ. * ಪರಿಶಿಷ್ಟ ಜಾತಿಗಳು (SC) ಮತ್ತು ಪರಿಶಿಷ್ಟ ಪಂಗಡಗಳು (ST) ಅಧಿಕೃತವಾಗಿ ಗೊತ್ತುಪಡಿಸಿದ ಜನರ ಗುಂಪುಗಳಾಗಿವೆ ಮತ್ತು ಭಾರತದಲ್ಲಿ ಅತ್ಯಂತ ಹಿಂದುಳಿದ ಸಾಮಾಜಿಕ-ಆರ್ಥಿಕ ಗುಂಪುಗಳಾಗಿವೆ. ಈ ಗುಂಪುಗಳನ್ನು ಭಾರತದ ಸಂವಿಧಾನದಲ್ಲಿ ಗುರುತಿಸಲಾಗಿದೆ. ಈ ಗುಂಪುಗಳನ್ನು ಭಾರತೀಯ ಉಪಖಂಡದಲ್ಲಿ ಬ್ರಿಟಿಷ್ ಆಳ್ವಿಕೆಯ ಹೆಚ್ಚಿನ ಅವಧಿಯವರೆಗೆ ಖಿನ್ನತೆಗೆ ಒಳಗಾದ ವರ್ಗಗಳು ಎಂದು ಕರೆಯಲಾಗುತ್ತದೆ. * ಭಾರತದ ಜನಸಂಖ್ಯೆಯ 2011 ರ ಜನಗಣತಿಯ ಪ್ರಕಾರ 16.6% ರಷ್ಟು ಪರಿಶಿಷ್ಟ ಜಾತಿಗಳು, ಮತ್ತು ಮತ್ತು 8.6% ರಷ್ಟು ಪರಿಶಿಷ್ಟ ಪಂಗಡಗಳು ಒಳಗೊಂಡಿವೆ. ಭಾರತ ಸಂವಿಧಾನ ಆದೇಶವು, 1950 ತನ್ನ ಮೊದಲ ಶೆಡ್ಯೂಲ್‌ನಲ್ಲಿ 28 ರಾಜ್ಯಗಳಲ್ಲಿ ಸುಮಾರು 1,108 ಜಾತಿಗಳನ್ನು ಪಟ್ಟಿಮಾಡಿದೆ. ಹಾಗೂ 1950 ತನ್ನ ಮೊದಲ ಶೆಡ್ಯೂಲ್‌ನಲ್ಲಿ 22 ರಾಜ್ಯಗಳಲ್ಲಿ ಸುಮಾರು 744 ಬುಡಕಟ್ಟುಗಳನ್ನು ಪಟ್ಟಿಮಾಡಿದೆ. * ಭಾರತಕ್ಕೆ ಸ್ವಾತಂತ್ರ ಸಿಕ್ಕ ನಂತರದ ದಿನಗಳಲ್ಲಿ, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ಸ್ಥಾನಮಾನವನ್ನು ದೊರಕಿಸಿಕೊಡಲಾಯಿತು, ಹಾಗೂ ಸಂವಿಧಾನವು 'SC ಮತ್ತು ST' ಗಳಿಗೆ ಧನಾತ್ಮಕ ತಾರತಮ್ಯದ ತತ್ವಗಳನ್ನು ನೀಡುತ್ತದೆ.