Job Description: * ಇತ್ತೀಚಿಗೆ ಚೀನಾ ದೇಶದ ಅರೆಸೇನಾ ಪೊಲೀಸ್ ಪಡೆಯ ಮಾಜಿ ಹಿರಿಯ ಅಧಿಕಾರಿ ಮೇಜರ್ ಜನರಲ್ ಪೆಂಗ್ ಜಿಂಗ್ಟಾಂಗ್ರ ಅವರನ್ನು ಹಾಂಕಾಂಗ್‌ನಲ್ಲಿ ಪೀಪಲ್ಸ್ ಲಿಬರೇಷನ್ ಆರ್ಮಿ(PLA)ಯ ರಕ್ಷಣಾ ದಳದ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ ಎಂದು ಚೀನಾ ಅಧ್ಯಕ್ಷೀಯ ಕಛೇರಿಯಿಂದ ಮಾಹಿತಿ ಲಭ್ಯವಾಗಿದೆ. * ಮಾಜಿ ಹಿರಿಯ ಅಧಿಕಾರಿ ಮೇಜರ್ ಜನರಲ್ ಪೆಂಗ್ ಜಿಂಗ್ಟಾಂಗ್ರ ಅವರು ಈ ಮೊದಲು ಸಶಸ್ತ್ರ ಪೊಲೀಸ್ ಪಡೆ ಸಿಬಂದಿ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದರು. ಇದೀಗ ಇವರನ್ನು ಹಾಂಕಾಂಗ್‌ನಲ್ಲಿ PLA ರಕ್ಷಣಾ ಪಡೆಯ ಮುಖ್ಯಸ್ಥರಾಗಿ ಕಮ್ಯುನಿಸ್ಟ್ ಪಕ್ಷ ಹಾಗೂ ಕ್ಸಿ ಜಿನ್ಪಿಂಗ್ ಅವರು ನೇಮಕ ಮಾಡಿದ್ದಾರೆ. * ಹಾಂಕಾಂಗ್ ಪ್ರದೇಶವು ಬ್ರಿಟನ್‌ ನ ನಿಯಂತ್ರಣದಡಿಯ ವಿಶೇಷ ಆಡಳಿತ ಪ್ರದೇಶವಾಗಿತ್ತು, ಇದು ವ್ಯಾಪಕವಾಗಿ ವೈಯಕ್ತಿಕ ಹಕ್ಕುಗಳನ್ನು ರಕ್ಷಿಸುವ ಉದ್ದೇಶದಿಂದಾಗಿ 1997 ರಲ್ಲಿ ಚೀನಾ ದೇಶದ ಆಡಳಿತಕ್ಕೆ ಈ ಪ್ರದೇಶವನ್ನು ಮರಳಿಸಲಾಗಿದೆ ಎಂದು ತಿಳಿಸಿದ್ದಾರೆ. * ಹಾಂಗ್ ಕಾಂಗ್: ಅಧಿಕೃತವಾಗಿ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ, ಈ ಹಾಂಗ್ ಕಾಂಗ್ ಚೀನಾದ ವಿಶೇಷ ಆಡಳಿತ ಪ್ರದೇಶವಾಗಿದೆ, ಹಾಗೂ ಇದು ದಕ್ಷಿಣ ಚೀನಾದಲ್ಲಿ ಪೂರ್ವ ಪರ್ಲ್ ರಿವರ್ ಡೆಲ್ಟಾದಲ್ಲಿ ಚೀನಾದ ಆಡಳಿತ ಪ್ರದೇಶವಾಗಿದೆ. ಈ ಪ್ರದೇಶವು ಸುಮಾರು 1,104 ಚದರ-ಕಿ.ಮೀ. ಭೂಪ್ರದೇಶದಲ್ಲಿ ವಿವಿಧ ರಾಷ್ಟ್ರೀಯತೆಯನ್ನು ಒಳಗೊಂಡಿರುವ ಸುಮಾರು 7.5 ಮಿಲಿಯನ್ ನಿವಾಸಿಗಳು ಈ ಪ್ರದೇಶದಲ್ಲಿದ್ದಾರೆ. ಪ್ರಸ್ತುತ ಹಾಂಗ್ ಕಾಂಗ್ ವಿಶ್ವದ ಅತ್ಯಂತ ಅಭಿವೃದ್ಧಿ ಹೊಂದಿದ ನಗರಗಳಲ್ಲಿ ಒಂದಾಗಿದೆ. * ಈ ಹಿಂದೆ 1841 ರಲ್ಲಿ ಪ್ರಥಮ ಅಫೀಮು ಯುದ್ಧದ ನಂತರದಲ್ಲಿ ಅಂದರೆ 1842 ರಲ್ಲಿ ಕ್ವಿಂಗ್ ಸಾಮ್ರಾಜ್ಯವು ಹಾಂಗ್ ಕಾಂಗ್ ದ್ವೀಪವನ್ನು ಕ್ಸಿನಾನ್ ಕೌಂಟಿಯಿಂದ ಬಿಟ್ಟುಕೊಟ್ಟ ನಂತರ ದಿನಗಳಲ್ಲಿ ಹಾಂಗ್ ಕಾಂಗ್ ನ್ನು ಬ್ರಿಟಿಷ್ ಸಾಮ್ರಾಜ್ಯದ ವಸಾಹತುವನ್ನಾಗಿ ಸ್ಥಾಪನೆಮಾಡಲಾಯಿತು. ನಂತರ 2 ನೇ ಅಫೀಮು ಯುದ್ಧದ ನಂತರದಲ್ಲಿ 1860 ರಲ್ಲಿ ಕೌಲೂನ್ ಪೆನಿನ್ಸುಲಾಕ್ಕೆ ವಸಾಹತುವನ್ನು ವಿಸ್ತರಿಸಿತು ಹಾಗೂ 1898 ರಲ್ಲಿ ಬ್ರಿಟನ್ ಹೊಸ ಪ್ರಾಂತ್ಯಗಳ 99 ವರ್ಷಗಳ ಗುತ್ತಿಗೆಯನ್ನು ಪಡೆದು ಈ ವಸಾಹತುವನ್ನು ವಿಸ್ತರಿಸಲಾಯಿತು. * 2 ನೇ ವಿಶ್ವ ಸಮರ ಸಮಯದಲ್ಲಿ ಬ್ರಿಟಿಷ್ ಹಾಂಗ್ ಕಾಂಗ್ ನ್ನು 1941 ರಿಂದ 1945 ರವರೆಗೆ ಇಂಪೀರಿಯಲ್ ಜಪಾನ್ ಆಕ್ರಮಣ ಮಾಡಿಕೊಂಡಿತು, ಮತ್ತೇ ಜಪಾನ್‌ ದೇಶವು ಶರಣಾಗತಿಯನ್ನು ಹೊಂದಿತು ನಂತರ ಈ ಪ್ರದೇಶದಲ್ಲಿ ಬ್ರಿಟಿಷ್ ಆಡಳಿತವು ಪುನಃ ಆರಂಭವಾಯಿತು. ಈ ಹಿಂದೆ 1997ರಲ್ಲಿ ಈ ಪ್ರದೇಶವನ್ನು ಚೀನಾ ದೇಶಕ್ಕೆ ವರ್ಗಾಯಿಸಲಾಯಿತು. ಸದ್ಯ ಈ ಪ್ರದೇಶವು ಚೀನಾದ ಎರಡು ವಿಶೇಷ ಆಡಳಿತ ಪ್ರದೇಶಗಳಲ್ಲಿ ಇದು ಒಂದಾಗಿದೆ. ಪ್ರಸ್ತುತ ಹಾಂಗ್ ಕಾಂಗ್ 'ಒಂದು ದೇಶ, ಎರಡು ವ್ಯವಸ್ಥೆಗಳು' ಎಂಬ ತತ್ವದ ಅಡಿಯಲ್ಲಿ ಚೀನಾದ ಮುಖ್ಯ ಭೂಭಾಗದಿಂದ ಪ್ರತ್ಯೇಕ ಆಡಳಿತ ಮತ್ತು ಆರ್ಥಿಕ ವ್ಯವಸ್ಥೆಯನ್ನು ನಿರ್ವಹಿಸುತ್ತಿದೆ. * ಈ ಹಾಂಗ್ ಕಾಂಗ್ ಪ್ರದೇಶವು ವಿಶ್ವದ 10 ನೇ ಅತಿ ದೊಡ್ಡ ರಫ್ತುದಾರ ಹಾಗೂ 9 ನೇ ಅತಿದೊಡ್ಡ ಆಮದುದಾರ ಪ್ರದೇಶವಾಗಿದೆ. ಹಾಂಗ್ ಕಾಂಗ್ ಕರೆನ್ಸಿ, ಹಾಂಗ್ ಕಾಂಗ್ ಡಾಲರ್, ವಿಶ್ವದ 8 ನೇ ಅಧಿಕ ವ್ಯಾಪಾರದ ಕರೆನ್ಸಿಯಾಗಿದೆ. ಈ ನಗರವು ವಿಶ್ವದಲ್ಲೇ ಅತಿ ಹೆಚ್ಚು ತಲಾ ಆದಾಯವನ್ನು ಹೊಂದಿದ ಪ್ರದೇಶವಾಗಿದೆ. * ಪ್ರಸ್ತುತ ಹಾಂಗ್ ಕಾಂಗ್ ಪ್ರದೇಶವು ಜಾಗತಿಕ ಹಣಕಾಸು ಕೇಂದ್ರಗಳ ಸೂಚ್ಯಂಕದಲ್ಲಿ 4 ನೇ ಸ್ಥಾನದಲ್ಲಿದೆ.