Job Description: * ಇದೀಗ ಭಾರತ ದೇಶವು ಶ್ರೀಲಂಕಾ ದೇಶಕ್ಕೆ ಎಸಿ ಡೀಸೆಲ್ ಬಹು ಘಟಕಗಳನ್ನು ಸಾಲ ಸೌಲಭ್ಯದ ಅಡಿಯಲ್ಲಿ ಒದಗಿಸಿದೆ. ದ್ವಿಪಕ್ಷೀಯ ಬಾಂಧವ್ಯದಲ್ಲಿ ಮತ್ತೊಂದು ಹೆಜ್ಜೆಯಾಗಿದೆ. ಪ್ರಸ್ತುತ ಭಾರತ ಹಾಗೂ ಶ್ರೀಲಂಕಾ ನಡುವಿನ ದ್ವಿಪಕ್ಷೀಯ ಸಂಬಂಧದಿಂದಾಗಿ, ದ್ವೀಪ ರಾಷ್ಟ್ರ ಶ್ರೀಲಂಕಾ ಇದೀಗ ತನ್ನ ರಾಜಧಾನಿ ಕೊಲಂಬೋದಿಂದ ಜಾಫ್ನಾ ಗೆ ಐಷಾರಾಮಿ ರೈಲು ಸೇವೆಯನ್ನು ಆರಂಭಿಸಿದೆ, ಈ ರೈಲು ಸೇವೆಯ ಭಾರತದ ಸಹಾಯದಿಂದ ಆರಂಭವಾಗಿದೆ ಎಂದು ತಿಳಿಸಲಾಗಿದೆ. * ಭಾರತ ದೇಶದ ಸಾಲದ ಸಹಾಯದಿಂದ ಆರಂಭಗೊಂಡಿರುವ ಈ ರೈಲು ಸೇವೆಯು ರಾಜಧಾನಿ ಕೊಲಂಬೋದಿಂದ ತಮಿಳರು ಹೆಚ್ಚಿರುವ ಜಾಫ್ನಾ ಜಿಲ್ಲೆಯನ್ನು ಸಂಪರ್ಕಿಸಲಿದೆ. * ಇದೀಗ ಶ್ರೀಲಂಕಾ ರಾಷ್ಟ್ರವು ಅಂತರ-ನಗರಿ ರೈಲು ಸೇವೆಯು ಐಷಾರಾಮಿ ಸೌಲಭ್ಯಗಳನ್ನು ಹೊಂದಿದಂತಾಯಿತು, ಪ್ರಸ್ತುತ ಭಾರತದ ಎಸಿ ಡೀಸೆಲ್ ಎಂಯುನಿಂದ ಚಲಿಸಲು ಆರಂಭಿಸಿವೆ. * ದ್ವೀಪ ರಾಷ್ಟ್ರ ಶ್ರೀಲಂಕಾದ ಈ ರೈಲು ಸೇವೆಯು ಕೊಲಂಬೋದ ಮೌಂಟ್ ಲಾವಿನಿಯಾ ನಿಲ್ದಾಣದಿಂದ ಹಿಡಿದು ಉತ್ತರದ ಜಾಫ್ನಾದ ಕಂಕೇಸಂತುರಾಯ್‌ ಬಂದರು ಉಪನಗರದವರೆಗೂ ಸಂಚರಿಸಲಿದೆ, ಇದು ಸುಮಾರು 386 ಕಿ.ಮೀ.ಗಳಷ್ಟು ಕ್ರಮಿಸಲಿದೆ. * ಪ್ರಸ್ತುತ ಶ್ರೀಲಂಕಾದ ಸಾರಿಗೆ ಸಚಿವ ಪವಿತ್ರಾ ವನ್ನಿರಾಚ್ಚಿ ಅವರು ಈ ರೈಲಿನಲ್ಲಿ ಪ್ರಯಾಣ ಬೆಳೆಸುವ ಮೂಲಕ ಈ ರೈಲಿಗೆ ಚಾಲನೆಯನ್ನು ನೀಡಿದ್ದಾರೆ. ಇದೀಗ ಭಾರತದ ಉಪ ರಾಯಭಾರಿ ವಿನೋದ್ ಕೆ ಜಾಕೋಬ್ ಅವರು ಕೊಲಂಬೋ ಫೋರ್ಟ್ ನಿಲ್ದಾಣದಲ್ಲಿ ಈ ರೈಲು ಸೇವೆಯ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದೀಗ ಈ ರೈಲು ಸೇವೆಯು ಜನರಿಂದ ಜನರ ವಿನಿಮಯವನ್ನು ಸುಗಮಗೊಳಿಸಲು ಹಾಗೂ ಎರಡು ದೇಶಗಳ ಸಹಕಾರಕ್ಕೆ ಒತ್ತು ನೀಡುತ್ತದೆ ಎಂದು ತಿಳಿಸಿದ್ದಾರೆ. * ಪ್ರಸ್ತುತ ಶ್ರೀಲಂಕಾದಲ್ಲಿ ಭಾರತದ ಒಟ್ಟು ಅಭಿವೃದ್ಧಿ ಪೋರ್ಟ್‌ಫೋಲಿಯೋ $3.5 ಶತಕೋಟಿಗಿಂತ ಅಧಿಕವಾಗಿದೆ, ಇದರಲ್ಲಿ ಸರಿ ಸುಮಾರು $570 ಮಿಲಿಯನ್ ಸಂಪೂರ್ಣವಾಗಿ ಅನುದಾನ ಯೋಜನೆಗಳಾಗಿವೆ ಎಂದು ಭಾರತೀಯ ಮಿಷನ್ ತನ್ನ ಹೇಳಿಕೆಯಲ್ಲಿ ವರದಿ ಮಾಡಿದೆ. * ಪ್ರಸ್ತುತ ಶ್ರೀಲಂಕಾದ ಸರ್ಕಾರ ಹಾಗೂ ಅಲ್ಲಿನ ಜನರ ಆದ್ಯತೆಗೆ ಅನುಗುಣವಾಗಿ ಶ್ರೀಲಂಕಾದಲ್ಲಿ ಭಾರತ ಸರ್ಕಾರದ ಅಭಿವೃದ್ಧಿ ಪೋರ್ಟ್‌ಫೋಲಿಯೊದ ಅಡಿಯಲ್ಲಿ ಗಮನಹರಿಸಲು ಅನೇಕ ಕ್ಷೇತ್ರಗಳನ್ನು ಸೇರ್ಪಡೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.