Job Description: * ಇತ್ತೀಚಿಗೆ ಒಲಂಪಿಕ್ ವಿಶ್ವ ಪದಕ ವಿಜೇತ 'ಡಿಯೋನ್ ಲೆಂಡೋರ್' ಅವರು USA ನ ಟೆಕ್ಸಾಸ್‌ನಲ್ಲಿ ನಡೆದ ಕಾರು ಅಪಘಾತದಲ್ಲಿ ವಿಧಿವಶರಾಗಿದ್ದಾರೆ. ಎಂದು ಟ್ರಿನಿಡಾಡ್ ಮತ್ತು ಟೊಬಾಗೊ ಒಲಿಂಪಿಕ್ ಸಮಿತಿಯ ಅಧಿಕೃತವಾಗಿ ಮಾಹಿತಿಯನ್ನು ನೀಡಿದೆ. * ಈ 'ಡಿಯೋನ್ ಲೆಂಡೋರ್' ಅವರು 2020 ರ ಟೋಕಿಯೊ ಆಟಗಳನ್ನು ಸೇರಿದಂತೆ 3 ಒಲಿಂಪಿಕ್ಸ್‌ಗಳಲ್ಲಿ ಸ್ಪರ್ಧಿಸಿದ್ದರು, ಇವರು 400ಮೀ. ಓಟಗಾರನಾಗಿದ್ದರು, ಈ ಹಿಂದೆ 2012 ರಲ್ಲಿ ಲಂಡನ್‌ನಲ್ಲಿ ನಡೆದ ಆಟಗಳಲ್ಲಿ ಪುರುಷರ 4 × 400 ಮೀ ರಿಲೇ ಫೈನಲ್‌ನ ಆಂಕರ್ ಲೆಗ್‌ನಲ್ಲಿ ಕಂಚಿನ ಪದಕವನ್ನು ಜಯಿಸಿದ್ದರು ಎಂದು ಟೆಕ್ಸಾಸ್ ಸಾರ್ವಜನಿಕ ಸುರಕ್ಷತೆ ಇಲಾಖೆಯು ತಿಳಿಸಿದೆ. * ಪ್ರಸ್ತುತ ಟೆಕ್ಸಾಸ್ A&M ವಿಶ್ವವಿದ್ಯಾನಿಲಯ ನೀಡಿರುವ ಮಾಹಿತಿಯ ಪ್ರಕಾರ 'ಡಿಯೋನ್ ಲೆಂಡೋರ್' ಅವರು ಕಳೆದ ಎರಡು ಋತುಗಳಲ್ಲಿ ಸ್ವಯಂಸೇವಕ ಸಹಾಯಕ ತರಬೇತುದಾರರಾಗಿ ಕಾರ್ಯ ನಿರ್ವಹಿಸಿದ್ದಾರೆ. * 'ಡಿಯೋನ್ ಲೆಂಡೋರ್' ಅವರು 2009 ರ ವಿಶ್ವ ಯೂತ್ ಚಾಂಪಿಯನ್‌ಶಿಪ್‌'ನಲ್ಲಿ ಭಾಗಿಯಾಗಿರುವ ಮೊದಲ ಅಂತರರಾಷ್ಟ್ರೀಯ ಕಾರ್ಯಕ್ರಮವಾಗಿದೆ. ಮತ್ತೇ 2010 ರಲ್ಲಿ ಅವರು ವಿಶ್ವ ಅಥ್ಲೆಟಿಕ್ಸ್ U20 ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸಿದರು. * 2011 ರಲ್ಲಿ ಫ್ಲೋರಿಡಾದ ಮಿರಾಮರ್‌ನಲ್ಲಿ ಜರುಗಿದ ಪ್ಯಾನ್ ಅಮೇರಿಕನ್ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ 400 ಮೀ.ನಲ್ಲಿ ಬೆಳ್ಳಿ ಪದಕವನ್ನು ಜಯಿಸಿದ್ದರು. ಲಂಡನ್‌ನಲ್ಲಿ ನಡೆದ 2012 ಬೇಸಿಗೆ ಒಲಿಂಪಿಕ್ಸ್‌ನಲ್ಲಿ 4 × 400 ಮೀಟರ್‌ಗಳ ರಿಲೇ ಸ್ಪರ್ಧೆಯಲ್ಲಿ 3 ನೇ ಸ್ಥಾನವನ್ನು ಪಡೆದುಕೊಂಡಿದ್ದರು. * ಮತ್ತೇ 2016 ಮತ್ತು 2018 ರ ವಿಶ್ವ ಒಳಾಂಗಣ ಚಾಂಪಿಯನ್‌ಶಿಪ್‌ಗಳಲ್ಲಿ 'ಡಿಯೋನ್ ಲೆಂಡೋರ್' ಅವರು 400 ಮೀ. ವೈಯಕ್ತಿಕವಾಗಿ ಕಂಚಿನ ಪದಕಗಳನ್ನು ಪಡೆದುಕೊಂಡಿದ್ದರು, ಇದಕ್ಕಿಂತಲೂ ಮುಂಚಿತವಾಗಿ 2015 ರಲ್ಲಿ ಚೀನಾದ ಬೀಜಿಂಗ್‌ನಲ್ಲಿ ಜರುಗಿದ ವಿಶ್ವ ಚಾಂಪಿಯನ್‌ಶಿಪ್‌ನ ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ಜಯಿಸಿದ್ದರು. ಟ್ರಿನಿಡಾಡ್ ಹಾಗೂ ಟೊಬಾಗೊದೊಂದಿಗೆ 4x400 ಮೀ. ಫೈನಲ್‌ ಹಂತದಲ್ಲಿ 8 ನೇ ಸ್ಥಾನ ಪಡೆದಿದ್ದರು, ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಜ್ಯೂರಿಚ್‌ ನಲ್ಲಿ ಜರುಗಿದ ಡೈಮಂಡ್ ಲೀಗ್‌ನ 400 ಮೀ. ಫೈನಲ್‌ ಹಂತದಲ್ಲಿ 3 ನೇ ಸ್ಥಾನವನ್ನು ಪಡೆದುಕೊಂಡಿದ್ದರು. * ಇವರು 2017 ರಿಂದ ಪೂಮಾ(PUMA) ಕುಟುಂಬದ ಭಾಗವಾಗಿದ್ದರು, ಇದೀಗ ಈ ಕ್ರೀಡಾ ಕಂಪನಿಯ ಇವರ ನಿಧಾನಕ್ಕೆ ಸಂತಾಪವನ್ನು ಸೂಚಿಸಿದೆ.