Job Description: * ಇತ್ತೀಚಿಗೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಆಲ್ರೌಂಡರ್ ಆಟಗಾರ 'ಕ್ರಿಸ್ ಮೋರಿಸ್' (Chris Morris) ಅವರು ಇದೀಗ ಎಲ್ಲ ಮಾದರಿಯ ಅಂತರರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಈ ನಿವೃತ್ತಿಯ ಮಾಹಿತಿಯನ್ನು 'ಕ್ರಿಸ್ ಮೋರಿಸ್' ಅವರೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಮುಂದೆ ದೇಶೀಯ ಕ್ರಿಕೆಟ್ ತಂಡ ಟೈಟಾನ್ಸ್ ನ ಕೋಚಿಂಗ್ ಹುದ್ದೆ ವಹಿಸಿಕೊಳ್ಳುವುದಾಗಿ ತಿಳಿಸಿದ್ದಾರೆ. * 'ಕ್ರಿಸ್ ಮೋರಿಸ್' ಒಟ್ಟು 42 ಏಕದಿನ ಪಂದ್ಯಗಳನ್ನು ಆಡಿದ್ದಾರೆ, ಅದರಲ್ಲಿ 468 ರನ್ ಗಳನ್ನೂ ಕಲೆಹಾಕಿ 48 ವಿಕೆಟ್ ಗಳನ್ನೂ ಪಡೆದಿದ್ದಾರೆ. ಹಾಗೆಯೇ 23 ಅಂತರರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ 133 ರನ್ ಕಲೆಹಾಕಿ, 34 ವಿಕೆಟ್'ಗಳನ್ನೂ ಪಡೆದಿದ್ದಾರೆ. ದಕ್ಷಿಣ ಆಫ್ರಿಕಾ ತಂಡದ ಪರವಾಗಿ 4 ಟೆಸ್ಟ್ ಪಂದ್ಯಗಳಲ್ಲಿ ಆಟವಾಡಿದ್ದಾರೆ. IPL ನ 13 ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಆಟವಾಡಿದ್ದಾರೆ. ಮತ್ತೇ IPL'ನ 14ನೇ ಆವೃತ್ತಿಯಲ್ಲಿ ನಡೆದ ಆಟಗಾರರ ಹರಾಜಿನಲ್ಲಿ 16.25 ಕೋ.ರೂ. ಮೊತ್ತಕ್ಕೆ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಹರಾಜಾಗುವ ಮೂಲಕ IPL'ನ ದುಬಾರಿ ಆಟಗಾರರಾಗಿ ಹೊರ ಹೊಮ್ಮಿದ್ದರು. * ಕ್ರಿಸ್ಟೋಫರ್ ಹೆನ್ರಿ ಮೋರಿಸ್: ಅವರು 1987 ರ ಏಪ್ರಿಲ್. 30 ರಂದು ಜನಿಸಿದ್ದಾರೆ, ಇವರು ದಕ್ಷಿಣ ಆಫ್ರಿಕಾದ ವೃತ್ತಿಪರ ಕ್ರಿಕೆಟ ಆಟಗರಾಗಿದ್ದರು, ಇವರು ದಕ್ಷಿಣ ಆಫ್ರಿಕಾದ ಟೈಟಾನ್ಸ್‌ಗಾಗಿ ಪ್ರಥಮ ದರ್ಜೆ ಮತ್ತು ಲಿಸ್ಟ್ 'ಎ' ಕ್ರಿಕೆಟ್ ಗೆ ಆಡಿದ್ದಾರೆ. ಇತ್ತೀಚಿಗೆ ಕ್ರಿಸ್ ಮೋರಿಸ್ ಅವರು 2022 ರ ಜನೇವರಿ.11 ರಂದು, ಎಲ್ಲಾ ರೀತಿಯ ಕ್ರಿಕೆಟ್‌ನಿಂದ ನಿವೃತ್ತಿಯನ್ನು ಘೋಷಿಸಿದ್ದಾರೆ. * ಈ ಹಿಂದೆ ಕ್ರಿಸ್ ಮೋರಿಸ್ ಅವರು 2018 ರ ಸೆಪ್ಟೆಂಬರ್ ನಲ್ಲಿ, ಅಬುಧಾಬಿ T20 ಟ್ರೋಫಿಗಾಗಿ ಟೈಟಾನ್ಸ್ ತಂಡದಲ್ಲಿ ಆಡಿದ್ದರು. ಮತ್ತೇ 2019 ರ ಸೆಪ್ಟೆಂಬರ್'ನಲ್ಲಿ ಇವರು Mzansi ಸೂಪರ್ ಲೀಗ್ ಪಂದ್ಯಾವಳಿಗಾಗಿ ನೆಲ್ಸನ್ ಮಂಡೇಲಾ ಬೇ ಜೈಂಟ್ಸ್ ತಂಡದಲ್ಲಿ ಆಡಿದ್ದಾರೆ. * ಕ್ರಿಸ್ ಮೋರಿಸ್ 2012 ರ ಡಿಸೆಂಬರ್ ನಲ್ಲಿ ನ್ಯೂಜಿಲೆಂಡ್ ತಂಡದ ವಿರುದ್ಧ ದಕ್ಷಿಣ ಆಫ್ರಿಕಾ ತಂಡದ ಪರವಾಗಿ ಟ್ವೆಂಟಿ 20 ಅಂತರರಾಷ್ಟ್ರೀಯ ಚೊಚ್ಚಲ ಪಂದ್ಯವನ್ನು ಆಡಿದರು ಮತ್ತೇ 2013 ರ ಜೂನ್ ನಲ್ಲಿ ಪಾಕಿಸ್ತಾನ ತಂಡದ ವಿರುದ್ಧ ICC ಚಾಂಪಿಯನ್ಸ್ ಟ್ರೋಫಿ, ಹಾಗೂ 2016 ರಲ್ಲಿ ಇಂಗ್ಲೆಂಡ್ ವಿರುದ್ಧ ತಮ್ಮ ಚೊಚ್ಚಲ ಏಕದಿನ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದಾರೆ. ಮತ್ತೇ ಇವರು 2019 ರ ಕ್ರಿಕೆಟ್ ವಿಶ್ವಕಪ್‌ಗಾಗಿ ದಕ್ಷಿಣ ಆಫ್ರಿಕಾ ತಂಡವನ್ನು ಸೇರಿಕೊಂಡರು.