Job Description: * ಇತ್ತೀಚಿಗೆ ಓಡಿಸ್ಸಾ ರಾಜ್ಯ ಸರ್ಕಾರವು ಉನ್ನತ ಶಿಕ್ಷ ಇಲಾಖೆ ವ್ಯಾಪ್ತಿಯಲ್ಲಿನ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳಾ ಸಿಬ್ಬಂದಿಗಳ ಹೆರಿಗೆ ರಜೆಯನ್ನು 180 ದಿನಗಳಿಗೆ ವಿಸ್ತರಿಸಿದೆ. ಈ ಹೆರಿಗೆ ರಜೆಯು ಮೊದಲ ಎರಡು ಹೆರಿಗೆಗೆ ಮಾತ್ರ ಅನ್ವಯವಾಗುತ್ತದೆ ಎಂದು ತಿಳಿಸಿದೆ. * ಈ ಮೊದಲು ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಮಹಿಳಾ ಸಿಬ್ಬಂದಿಗಳಿಗೆ ಕೇವಲ 90 ದಿನಗಳ ಕಾಲ ಹೆರಿಗೆ ರಜೆಯನ್ನು ನೀಡಲಾಗುತ್ತಿತ್ತು. ಇದೀಗ ಅದನ್ನು ಓಡಿಸ್ಸಾ ರಾಜ್ಯ ಸರ್ಕಾರ 180 ದಿನಗಳಿಗೆ ವಿಸ್ತರಿಸಿದೆ. * ಈ ಮೊದಲು ಒಡಿಶಾ ಸರ್ಕಾರವು ಸಾಮಾನ್ಯ ವರ್ಗದ ಅಭ್ಯರ್ಥಿಗಳು ಸರಕಾರಿ ನೌಕರಿಗೆ ಅರ್ಜಿ ಸಲ್ಲಿಸಲು 32 ವರ್ಷಗಳ ಅವಧಿಯನ್ನು ನಿಗದಿ ಪಡಿಸಿತ್ತು, ಇದೀಗ ಆ ಅವಧಿಯನ್ನು 38 ವರ್ಷಕ್ಕೆ ಏರಿಕೆ ಮಾಡಿದೆ ಮತ್ತು ಅಂಗವಿಕಲತೆ, ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪಂಗಡದ ಅಭ್ಯರ್ಥಿಗಳು ಸರಕಾರಿ ನೌಕರಿಗೆ ಅರ್ಜಿ ಸಲ್ಲಿಸುವ ವಯೋಮಿತಿಯನ್ನು 46 ವರ್ಷಕ್ಕೆ ಏರಿಕೆ ಮಾಡಿ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ನಿರ್ಣಯವನ್ನು ತೆಗೆದುಕೊಂಡಿದೆ. * ಭಾರತದ ಒಡಿಶಾ ರಾಜ್ಯ ಹಾಗೂ ಅದರ 30 ಜಿಲ್ಲೆಗಳ ಸರ್ಕಾರವು ಒಡಿಶಾದ ಗವರ್ನರ್ ನೇತೃತ್ವದಲ್ಲಿ ಕಾರ್ಯನಿರ್ವಾಹಕ, ನ್ಯಾಯಾಂಗ ಹಾಗೂ ಶಾಸಕಾಂಗ ಶಾಖೆಯನ್ನು ಹೊಂದಿದೆ. * ರಾಜ್ಯದ ಮುಖ್ಯಸ್ಥರು ಗವರ್ನರ್'ನನ್ನು, ಕೇಂದ್ರ ಸರ್ಕಾರದ ಸಲಹೆಯ ಮೇರೆಗೆ ಭಾರತದ ರಾಷ್ಟ್ರಪತಿ ನೇಮಕ ಮಾಡುತ್ತಾರೆ. ಭುವನೇಶ್ವರ್ ಒಡಿಶಾದ ರಾಜಧಾನಿಯಾಗಿದೆ, ಹಾಗೂ ಈ ರಾಜ್ಯವು ವಿಧಾನ ಸಭೆ ಹಾಗೂ ಸೆಕ್ರೆಟರಿಯೇಟ್ ನ್ನು ಹೊಂದಿದೆ. ಒಡಿಶಾ ರಾಜ್ಯದ ಕಟಕ್‌ನಲ್ಲಿ ರಾಜ್ಯದ ಉಚ್ಚ ನ್ಯಾಯಾಲವಿದೆ, ಇದು ಇಡೀ ರಾಜ್ಯದ ಅಧಿಕಾರ ವ್ಯಾಪ್ತಿಯನ್ನು ಹೊಂದಿದೆ. * ಪ್ರಸ್ತುತ ಒಡಿಶಾ ರಾಜ್ಯದ ವಿಧಾನಸಭೆಯು 147 ಶಾಸಕರನ್ನು (M.L.A) ಒಳಗೊಂಡಿರುವ ಏಕಸದಸ್ಯವಾಗಿದೆ, ಮತ್ತು ಇದು 5 ವರ್ಷಗಳ ಅಧಿಕಾರ ಅವಧಿಯನ್ನು ಹೊಂದಿದೆ.