Job Description: * ಇತ್ತೀಚಿಗೆ ಒಡಿಯಾ ಚಿತರಂಗದ ಹಿರಿಯ ನಟ ಮಿಹಿರ್ ದಾಸ್ ಅವರು ಆರೋಗ್ಯದ ಸಮಸ್ಯೆಯಿಂದಾಗಿ ವಿಧಿವಶರಾಗಿದ್ದಾರೆ. ಇವರ ಈ ಸಾವಿನ ಸುದ್ದಿಯನ್ನು ಒಡಿಯಾ ಸಿನಿ ಕಲಾವಿದರ ಸಂಘದ ಕಾರ್ಯದರ್ಶಿಯಾಗಿರುವ 'ಶ್ರೀತಮ್ ದಾಸ್' ಅವರು ಅಧಿಕೃತವಾಗಿ ತಿಳಿಸಿದ್ದಾರೆ. * ಮಿಹಿರ್ ಕುಮಾರ್ ದಾಸ್ : ಅವರು ಒಡಿಶಾದ ಮಯೂರ್‌ ಭಂಜ್ ಜಿಲ್ಲೆಯ ಬರಿಪಾಡಾದಲ್ಲಿ 1959 ರ ಫೆಬ್ರವರಿ. 17 ರಂದು ಜನಿಸಿದ್ದರು, ಇತ್ತೀಚಿಗೆ 2022 ರ ಜನೇವರಿ. 11 ರಂದು ನಿಧನರಾಗಿದ್ದಾರೆ. ಇವರು ಒಡಿಯಾ ಭಾಷೆಯ ಚಲನಚಿತ್ರಗಳಲ್ಲಿ ನಟಿಸಿದ್ದಾರೆ, ಹಾಗೂ ಭಾರತೀಯ ಚಲನಚಿತ್ರ ನಟರಾಗಿದ್ದರು. ಇವರಿಗೆ ಮುಖ್ಯವಾಗಿ 1998 ರಲ್ಲಿ ಲಕ್ಷ್ಮಿ ಪ್ರತಿಮಾ ಅವರ ಚಲನಚಿತ್ರಗಳಿಗಾಗಿ ಅತ್ಯುತ್ತಮ ನಟ ಪ್ರಶಸ್ತಿ ಹಾಗೂ 2005 ರಲ್ಲಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ, ಹಾಗೂ 2007 ರಲ್ಲಿ ಒಡಿಶಾ ರಾಜ್ಯ ಸರ್ಕಾರದಿಂದ ಅತ್ಯುತ್ತಮ ಹಾಸ್ಯನಟ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. * ಆಲಿವುಡ್(Ollywood) ಭಾರತದ ಒಡಿಶಾದಲ್ಲಿ ಒಡಿಯಾ ಭಾಷೆಯ ಚಲನಚಿತ್ರ ಉದ್ಯಮಕ್ಕೆ ನೀಡಿದ ಆಡುಮಾತಿನ ಹೆಸರಾಗಿದೆ. ಒಡಿಯಾ ಚಲನಚಿತ್ರೋದ್ಯಮವನ್ನು ಆಡುಮಾತಿನಲ್ಲಿ ಆಲಿವುಡ್ ಎಂದು ಕರೆಯಲಾಗುತ್ತದೆ, ಇದು ಒಡಿಯಾ ಭಾಷೆಯ ಭಾರತೀಯ ಚಲನಚಿತ್ರ ಉದ್ಯಮವಾಗಿದೆ, ಇದು ಭಾರತದ ಒಡಿಶಾದ ಭುವನೇಶ್ವರ ಮತ್ತು ಕಟಕ್‌ನಲ್ಲಿ ನೆಲೆಗೊಂಡಿದೆ. * ಒಡಿಶಾ ಸರ್ಕಾರವು 1974 ರಲ್ಲಿ ಚಲನಚಿತ್ರ ನಿರ್ಮಾಣ ಮತ್ತು ಚಿತ್ರಮಂದಿರಗಳ ನಿರ್ಮಾಣವನ್ನು ರಾಜ್ಯದಲ್ಲಿ ಉದ್ಯಮವೆಂದು ಘೋಷಣೆ ಮಾಡಿದೆ, ಮತ್ತು 1976 ರಲ್ಲಿ ಕಟಕ್‌ನಲ್ಲಿ ಒಡಿಶಾ ಚಲನಚಿತ್ರ ಅಭಿವೃದ್ಧಿ ನಿಗಮವನ್ನು ಸ್ಥಾಪನೆ ಮಾಡಿದೆ. * ಒಡಿಶಾ 1936 ರಿಂದ ಚಲನಚಿತ್ರ ನಿರ್ಮಾಣದ ಇತಿಹಾಸವನ್ನು ಹೊಂದಿದೆ. 'ಸೀತಾ ಬಿಬಾಹ' ಇದು ಮೊದಲ ಒಡಿಯಾ ಚಿತ್ರವಾಗಿದೆ. ಈ ಚಿತ್ರವನ್ನು 1936 ರಲ್ಲಿ ಮೋಹನ್ ಸುಂದರ್ ದೇಬ್ ಗೋಸ್ವಾಮಿ ಅವರು ನಿರ್ಮಿಸಿದ್ದಾರೆ. ಇದಾದ ಬಳಿಕ 1960 ರಲ್ಲಿ ಶ್ರೀ ಲೋಕನಾಥ್, ಪ್ರಫುಲ್ಲ ಸೇನ್‌ಗುಪ್ತಾ ನಿರ್ದೇಶಿಸಿದ 11 ನೇ ಒಡಿಯಾ ಚಿತ್ರವು ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದುಕೊಂಡಿತ್ತು, ಓಡಿಯಾ ಚಿತ್ರರಂಗವು ಹೀಗೆ ಅನೇಕ ಚಿತ್ರಗಳನ್ನೂ ನಿರ್ಮಾಣ ಮಾಡುತ್ತಾ ಮುಂದೆ ಸಾಗಿದೆ.