Job Description: * ಪ್ರಸ್ತುತ ರಕ್ಷಣಾ ಸಚಿವಾಲಯದ ವ್ಯಾಪ್ತಿಯಲ್ಲಿ ಬರುವ ಜಮೀನು ಸಮೀಕ್ಷೆಯನ್ನು ನಡೆಸಲಾಗಿದೆ. ಈ ಸಮೀಕ್ಷೆಯ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದೆ ಬಳಿಕ ಇದೇ ಮೊದಲ ಬಾರಿಗೆ ನಡೆಸಲಾಗಿದೆ. ಈ ಸರ್ವೆಯ ಮೂಲಕ ಒಟ್ಟಾರೆ 17.78 ಲಕ್ಷ ಎಕರೆ ಭೂಮಿ ರಕ್ಷಣಾ ಸಚಿವಾಲಯದ ವ್ಯಾಪ್ತಿಯಲ್ಲಿದೆ ಎಂಬ ಅಂಶ ತಿಳಿದು ಬಂದಿದೆ. * ಪ್ರಸ್ತುತ ಈ ರಕ್ಷಣಾ ಜಮೀನು ಸರ್ವೆಯನ್ನು ಡ್ರೋನ್‌, ಉಪಗ್ರಹ ಆಧಾರಿತ ಛಾಯಾಚಿತ್ರಗಳು, ಥ್ರೀ ಡೈಮೆನ್ಶನಲ್‌ ಮಾಡೆಲಿಂಗ್‌ ಎಂಬ '3' ಆಧುನಿಕ ತಂತ್ರಜ್ಞಾನಗಳನ್ನು ಬಳಕೆ ಮಾಡಿ ಅಧ್ಯಯನವನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. * ರಕ್ಷಣಾ ಸಚಿವಾಲಯದ ಜಮೀನು ಸರ್ವೆಯ ಪ್ರಕಾರ ಕಂಟೋನ್ಮೆಂಟ್‌ ಪ್ರದೇಶದ ಒಳಗಿನ ಭಾಗದಲ್ಲಿ 1.61 ಲಕ್ಷ ಎಕರೆ ಜಮೀನು, ಹಾಗೂ ಕಂಟೋನ್ಮೆಂಟ್‌ ಪ್ರದೇಶದ ಹೊರಗಿನ ಪ್ರದೇಶದಲ್ಲಿ ಸುಮಾರು 16.17 ಲಕ್ಷ ಹೆಕ್ಟೇರ್‌ ಜಮೀನು ಇರುವುದು ತಿಳಿದು ಬಂದಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. * ಪ್ರಸ್ತುತ ರಕ್ಷಣಾ ಸಚಿವಾಲಯ ರಕ್ಷಣಾ ಭೂಮಿಯನ್ನು ರಕ್ಷಿಸಲು, ಭೂ ದಾಖಲೆಗಳ ನವೀಕರಣ, ನಕ್ಷೆಗಳು ಮತ್ತು ಅತಿಕ್ರಮಣಗಳನ್ನು ತಡೆಗಟ್ಟಲು ರಕ್ಷಣಾ ಭೂಮಿಗಳ ಸ್ಪಷ್ಟ ಗಡಿರೇಖೆ ಹಾಗೂ ಗಡಿ ಸಮೀಕ್ಷೆ ಮತ್ತು ಗಡಿಗಳನ್ನು ನಿಗದಿಪಡಿಸುವಸಲುವಾಗಿ, ಡೈರೆಕ್ಟರೇಟ್ ಜನರಲ್ ಡಿಫೆನ್ಸ್ ಎಸ್ಟೇಟ್ಸ್, ರಕ್ಷಣಾ ಸಚಿವಾಲಯವು ಈ ಸಮೀಕ್ಷೆಯನ್ನು 2018 ರ ಅಕ್ಟೋಬರ್‌ ತಿಂಗಳಿಂದ ಆರಂಭಿಸಿದೆ, ಇದೀಗ ರಕ್ಷಣಾ ಸಚಿವಾಲಯ ನೀಡಿದ ಮಾಹಿತಿ ಪ್ರಕಾರ 4,900 ಪ್ರದೇಶಗಳಲ್ಲಿ ರಕ್ಷಣಾ ಸಚಿವಾಲಯದ ವ್ಯಾಪ್ತಿಗೆ ಬರುವ ಜಮೀನು ಇದೆ ಎಂದು ದೃಢಪಟ್ಟಿದೆ. ಇದೀಗ ಇದು ದೇಶದಲ್ಲೇ ಅತ್ಯಂತ ದೊಡ್ಡ ಸಮೀಕ್ಷೆಯ ವರದಿಯಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿಕೆ ನೀಡಿದೆ. * ಇದೀಗ ರಕ್ಷಣಾ ಸಚಿವಾಲಯವು ಭಾಭಾ ಅಟೋಮಿಕ್‌ ರಿಸರ್ಚ್‌ ಸೆಂಟರ್‌ (BARC) ಸಹಭಾಗಿತ್ವದಲ್ಲಿ 3ಡಿ ಮಾಡೆಲಿಂಗ್‌ ತಂತ್ರಜ್ಞಾನ ಬಳಸಿಕೊಂಡು ದುರ್ಗಮ ಪ್ರದೇಶಗಳಲ್ಲಿನ ಜಮೀನನ್ನು ಅಳೆಯಲಾಗಿದೆ. ಹಾಗೂ ರಾಜಸ್ಥಾನದ ಥಾರ್‌ ಮರುಭೂಮಿ ವ್ಯಾಪ್ತಿಗೆ ಬರುವ ಜಮೀನನ್ನು ಡ್ರೋನ್‌ ಆಧಾರಿತ ತಂತ್ರಜ್ಞಾನವನ್ನು ಬಳಸಿ ಸಮೀಕ್ಷೆಯನ್ನು ನಡೆಸಲಾಗಿದೆ ಎಂದು ಸರ್ಕಾರ ತಿಳಿಸಿದೆ. * ಕೇಂದ್ರ ರಕ್ಷಣಾ ಸಚಿವಾಲಯವು ಡಿಜಿಟಲ್ ಇಂಡಿಯಾದ ಅಡಿಯಲ್ಲಿ ಸ್ವಾತಂತ್ರ್ಯದ 75 ವರ್ಷಗಳ ನಂತರ ಈ ಸಮೀಕ್ಷೆಯನ್ನು ನಡೆಸಲಾಗಿದೆ, ಹಾಗೂ ಇದನ್ನು ಆಜಾದಿ ಕಾ ಅಮೃತ ಮಹೋತ್ಸವದ ಅಡಿಯಲ್ಲಿ ಆಚರಣೆಯ ಭಾಗವಾಗಿದೆ ಎಂದು ಸರ್ಕಾರ ತಿಳಿಸಿದೆ.