Job Description: * ಇದೀಗ ಭಾರತದಲ್ಲಿನ '5' ರಾಜ್ಯಗಳಲ್ಲಿ ವಿಧಾನಸಭೆ ಚುನಾವಣಾ ದಿನಾಂಕವು ಪ್ರಕಟಗೊಂಡಿದೆ. ಈ ಹಿನ್ನಲೆಯಿಂದಾಗಿ ಈ ಪಂಚ ರಾಜ್ಯಗಳಲ್ಲಿನ ಜನ ಸಾಮಾನ್ಯರಿಗೆ ನೀಡುವ ಕೊವಿಡ್-19 ಲಸಿಕೆ ಪ್ರಮಾಣಪತ್ರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹೆಸರು ಅಥವಾ ಅವರ ಭಾವಚಿತ್ರವನ್ನು ಬಳಸುವಂತಿಲ್ಲ, ಈ ಕಾರಣದಿಂದಾಗಿ ಕೇಂದ್ರ ಆರೋಗ್ಯ ಸಚಿವಾಲಯವು CoWin ಪೋರ್ಟಲ್ ಗೆ ಹಲವು ಫಿಲ್ಟರ್‌ಗಳನ್ನು ಸೇರಿಸಿದೆ ಎಂದು ತಿಳಿಸಿದೆ. * ಸದ್ಯ ವಿಧಾನಸಭೆ ಚುನಾವಣಾ ದಿನಾಂಕ ಪ್ರಕಟಗೊಂಡ '5' ರಾಜ್ಯಗಳು: ಉತ್ತರ ಪ್ರದೇಶ ರಾಜ್ಯದ 403 ವಿಧಾನಸಭೆ ಕ್ಷೇತ್ರಗಳು, ಗೋವಾ ರಾಜ್ಯದ 40 ವಿಧಾನಸಭೆ ಕ್ಷೇತ್ರಗಳು, ಪಂಜಾಬ್ ರಾಜ್ಯದ 117 ವಿಧಾನಸಭೆ ಕ್ಷೇತ್ರಗಳು, ಉತ್ತರಾಖಂಡ ರಾಜ್ಯದ 70 ವಿಧಾನಸಭೆ ಕ್ಷೇತ್ರಗಳು, ಹಾಗೂ ಮಣಿಪುರ ರಾಜ್ಯದ 60 ವಿಧಾನಸಭೆ ಕ್ಷೇತ್ರಗಳು. ಈ ಪಂಚ್ ರಾಜ್ಯಗಳಲ್ಲಿ ಒಟ್ಟಾರೆ '7' ಹಂತಗಳಲ್ಲಿ ಚುನಾವಣೆಯನ್ನು ನಡೆಸಲು ಚುನಾವಣೆ ಆಯೋಗವು ಸಿದ್ಧವಾಗಿದೆ, ಇದೀಗ ಈ ರಾಜ್ಯಗಳಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. * ಕಳೆದ ವರ್ಷ 2021 ರಲ್ಲಿಯೂ ಕೂಡ ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ, ಪುದುಚೇರಿ ಎಂಬ ಪಂಚರಾಜ್ಯಗಳಿಗೆ '7' ಹಂತಗಳಲ್ಲಿ ಚುನಾವಣೆಯನ್ನು ನಡೆಸಲಾಗಿತ್ತು, ಇದೀಗ ಕಳೆದ ವರ್ಷ ವಿಧಾನಸಭೆ ಚುನಾವಣೆಯಲ್ಲಿ ಕೈಗೊಂಡಿರುವ ಕ್ರಮಗಳನ್ನು 2022 ರಲ್ಲಿ ನಡೆಯುವ ಪಂಚರಾಜ್ಯಗಳ ಚುನಾವಣೆಗಳಲ್ಲಿ ಜಾರಿಗೊಳಿಸುವುದಕ್ಕೆ ಚುನಾವಣೆ ಆಯೋಗವು ನಿರ್ಧರಿಸಿದೆ. * ಪ್ರಸ್ತುತ ಭಾರತೀಯ ಚುನಾವಣಾ ಆಯೋಗವು 2022 ರಲ್ಲಿ ನಡೆಯುವ ಪಂಚ ರಾಜ್ಯಗಳ ಚುನಾವಣೆಗೆ ಒಟ್ಟಾರೆ '7' ಹಂತಗಳಲ್ಲಿ ಮತದಾನ ನಡೆಸಲಿದೆ: ಈ '5' ರಾಜ್ಯಗಳ ಪೈಕಿ ಪಂಜಾಬ್, ಉತ್ತರಾಖಂಡ, ಹಾಗೂ ಗೋವಾ ರಾಜ್ಯಗಳಲ್ಲಿ ಇದೇ ಫೆಬ್ರವರಿ. 14 ರಂದು ಒಂದೇ ಹಂತದಲ್ಲಿ ಮತದಾನವನ್ನು ನಡೆಸಲಿದೆ. ಮತ್ತು ಮಣಿಪುರ ರಾಜ್ಯದಲ್ಲಿ ಇದೇ ಫೆಬ್ರವರಿ. 27 ಮತ್ತು ಮಾರ್ಚ್. 3 ರಂದು ಎರಡು ಹಂತಗಳಲ್ಲಿ ಮತದಾನ ನಡೆಸಲಾಗುತ್ತದೆ. ಹಾಗೂ ಅಂತಿಮವಾಗಿ ಉತ್ತರ ಪ್ರದೇಶದ ರಾಜ್ಯದಲ್ಲಿ ಇದೇ ಫೆಬ್ರವರಿ. 10, 14, 20, 23, 27, ರಂದು ಹಾಗೂ ಮಾರ್ಚ್. 3, 7, ರಂದು ಒಟ್ಟಾರೆ '7' ಹಂತಗಳಲ್ಲಿ ಮತದಾನವನ್ನು ನಡೆಸಲು ಚುನಾವಣೆ ಆಯೋಗವು ತೀರ್ಮಾನಿಸಿದೆ. * ಈ ಹಿಂದಿನಿಂದಲೂ ಪ್ರತಿಪಕ್ಷಗಳು ಕೊವಿಡ್-19 ಲಸಿಕೆ ಪ್ರಮಾಣಪತ್ರದಲ್ಲಿ ಪ್ರಧಾನಮಂತ್ರಿ ಮೋದಿಯವರ ಭಾವಚಿತ್ರ ಬಳಕೆ ಮಾಡುತಿರುವದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುವೆ. ಇತ್ತೀಚಿಗೆ ಕೇರಳ ಹೈಕೋರ್ಟ್ ಕಳೆದ ಡಿಸೆಂಬರ್ ತಿಂಗಳಿನಲ್ಲಿ ಲಸಿಕೆ ಪ್ರಮಾಣಪತ್ರದಲ್ಲಿ ಪ್ರಧಾನಿ ಫೋಟೋ ಬಳಸದಂತೆ ಸಲ್ಲಿಸಲಾಗಿರುವ ಅರ್ಜಿಯನ್ನು ವಜಾಗೊಳಿಸಿದೆ. ಅಷ್ಟೇ ಅಲ್ಲದೇ 'ನರೇಂದ್ರ ಮೋದಿ' ಅವರು ಭಾರತದ ಪ್ರಧಾನಿಯೇ ಹೊರತಾಗಿ ಬೇರೆ ರಾಷ್ಟ್ರದ ಪ್ರಧಾನಮಂತ್ರಿಯಲ್ಲ ಎಂದು ಕಿವಿಮಾತನ್ನು ನೀಡಿದೆ. ಹಾಗೂ ಪ್ರತಿಪಕ್ಷಗಳು ಕೇವಲ ರಾಜಕೀಯದಲ್ಲಿನ ಭಿನ್ನಾಭಿಪ್ರಾಯಗಳ ಮೂಲಕ ಇದನ್ನು ಪ್ರಶ್ನಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ. * ಭಾರತದ ಚುನಾವಣಾ ಆಯೋಗ : ಇದೊಂದು ಭಾರತ ಸರ್ಕಾರದ ಕಾನೂನು ಮತ್ತು ನ್ಯಾಯ ಸಚಿವಾಲಯದ ಮಾಲೀಕತ್ವದ ಸ್ವಾಯತ್ತ ಸಂಸ್ಥೆಯಾಗಿದೆ. ಹಾಗೂ ಈ ಸಂಸ್ಥೆಯು ದೇಶದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸಲು ಭಾರತದ ಸಂವಿಧಾನದಿಂದ ಇದನ್ನು ಸ್ಥಾಪಿಸಲಾಗಿದೆ. * ಭಾರತದ ಸಂವಿಧಾನದಿಂದ ಈ ಸಂಸ್ಥೆಯನ್ನು 1950 ರ ಜನವರಿ. 25 ರಂದು ರಚಿಸಲಾಗಿದೆ. ಹಾಗೂ ಇದು ಭಾರತ ಸರ್ಕಾರದ ಅಧಿಕಾರ ವ್ಯಾಪ್ತಿಯಲ್ಲಿ ಬರಲಿದೆ, ಮತ್ತು ಇದು ತನ್ನ ಪ್ರಧಾನ ಕಛೇರಿಯನ್ನು ನವದೆಹಲಿ'ಯಲ್ಲಿ ಹೊಂದಿದೆ. * 'ಸುಕುಮಾರ್ ಸೇನ್' ಅವರು ಚುನಾವಣೆ ಆಯೋಗದ ಮೊದಲ ಕಾರ್ಯನಿರ್ವಾಹಕರಾಗಿದ್ದರು, ಹಾಗೂ 'ಸುನಿಲ್ ಅರೋರಾ' ಅವರು ಪ್ರಸ್ತುತ ಚುನಾವಣೆ ಆಯೋಗದ ಕಾರ್ಯನಿರ್ವಾಹಕರಾಗಿದ್ದಾರೆ.