Job Description: * ಭಾರತದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ 56 ನೇ ಪುಣ್ಯ ಸ್ಮರಣೆ ಜನೇವರಿ. 11 ರಂದು. ಶಾಸ್ತ್ರಿ ಅವರು 1966 ರ ಜನೇವರಿ. 11 ರಂದು ಉಜ್ಬೆಕಿಸ್ತಾನ್ ದ ತಾಷ್ಕೆಂಟ್ನಲ್ಲಿ ನಿಧನರಾಗಿದ್ದಾರೆ. ರಾಜ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, 'ಮಾಜಿ ಪ್ರಧಾನಮಂತ್ರಿ, ಭಾರತರತ್ನ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪುಣ್ಯತಿಥಿಯ ಸ್ಮರಣೆಯಲ್ಲಿ ಅವರಿಗೆ ನಮನಗಳುನ್ನು ತಿಳಿಸಿದರು. * ಲಾಲ್ ಬಹದ್ದೂರ್ ಶಾಸ್ತ್ರಿ: ಅವರು 1904 ರ ಅಕ್ಟೋಬರ್. 02 ರಂದು ಜನಿಸಿದ್ದರು, ಹಾಗೂ ಇವರು 1966 ರ ಜನೇವರಿ. 11 ರಂದು ಮರಣ ಹೊಂದಿದ್ದಾರೆ. ಇವರು ಭಾರತದ 2 ನೇ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿರುವ ಭಾರತೀಯ ರಾಜಕಾರಣಿಯಾಗಿದ್ದಾರೆ. ಹಾಗೂ ಇವರು ಶ್ವೇತ ಕ್ರಾಂತಿಯನ್ನು ಉತ್ತೇಜಿಸಿದರು, ಗುಜರಾತ್‌ನ ಅಮುಲ್ ಹಾಲು ಸಹಕಾರಿ ಮತ್ತು ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯನ್ನು ರಚಿಸಿದರು, ಈ ಮೂಲಕ ಭಾರತದಲ್ಲಿ ಆಹಾರ ಉತ್ಪಾದನೆಯನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಹೇಳಿದ್ದರು, ಇದಾದ ಬಳಿಕ 1965 ರಲ್ಲಿ ಭಾರತದಲ್ಲಿ ಹಸಿರು ಕ್ರಾಂತಿಯನ್ನು ಉತ್ತೇಜಿಸಿದರು, ಇದರಿಂದ ಭಾರತದಲ್ಲಿ ಆಹಾರ ಧಾನ್ಯ ಉತ್ಪಾದನೆಯಲ್ಲಿ ಏರಿಕೆಯಾಯಿತು, ವಿಶೇಷವಾಗಿ ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದಲ್ಲಿ ಹೆಚ್ಚಿನ ಆಹಾರ ಧಾನ್ಯ ಉತ್ಪಾದನೆ ಮಾಡಲು ಆರಂಭಿಸಲಾಯಿತು. * ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಸ್ವಾಮಿ ವಿವೇಕಾನಂದ, ಗಾಂಧಿ ಹಾಗೂ ಅನ್ನಿ ಬೆಸೆಂಟ್ ಅವರ ಬಗ್ಗೆ ಓದುವ ಮೂಲಕ 1920 ರ ದಶಕದಲ್ಲಿ ಭಾರತದ ಸ್ವಾತಂತ್ರ್ಯ ಚಳವಳಿಗೆ ಸೇರಿಕೊಂಡರು. ಹಾಗೂ ಅವರು ಲಾಲಾ ಲಜಪತ್ ರಾಯ್ ಸ್ಥಾಪಿಸಿರುವ 'ಲೋಕ್ ಸೇವಕ್ ಮಂಡಲ್'ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಈ ಹಿಂದೆ 1947 ರಲ್ಲಿ ಭಾರತಕ್ಕೆ ಸ್ವಾತಂತ್ರ ಸಿಕ್ಕ ನಂತರ ಪ್ರಧಾನ ಮಂತ್ರಿ ನೆಹರು ಅವರ ಕ್ಯಾಬಿನೆಟ್'ನ್ನು ಸೇರಿಕೊಂಡರು, ಆ ಸಮಯದಲ್ಲಿ ಮೊದಲು ರೈಲ್ವೇ ಸಚಿವರಾಗಿ, ನಂತರ ಗೃಹ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. * 'ಜೈ ಜವಾನ್, ಜೈ ಕಿಸಾನ್' ಎಂದರೆ 'ಸೈನಿಕನಿಗೆ ನಮಸ್ಕಾರ' ರೈತನಿಗೆ ನಮಸ್ಕಾರ ಎಂದರ್ಥ, ಇದು ಶಾಸ್ತ್ರಿ ಅವರು ಪ್ರಮುಖ ಘೋಷಣೆಯಾಗಿದೆ. 1965 ರ ಭಾರತ-ಪಾಕಿಸ್ತಾನ ಯುದ್ಧದ ಸಂಧರ್ಭದಲ್ಲಿ ದೇಶವನ್ನು ಮುನ್ನಡೆಸಿದರು. ಈ ಯುದ್ಧವು 1966 ರ ಜನೇವರಿ. 10 ರಂದು ತಾಷ್ಕೆಂಟ್ ಒಪ್ಪಂದದ ಮೂಲಕ ಔಪಚಾರಿಕವಾಗಿ ಕೊನೆಗೊಂಡಿತು. ಇದಾದ ಬಳಿಕ ಅವರು ಅದೇ ವರ್ಷ ಜನೇವರಿ. 11 ರಂದು ಮರಣ ಹೊಂದಿದರು. ಇದಾದ ಬಳಿಕ ಇವರಿಗೆ ಮರಣೋತ್ತರವಾಗಿ ಭಾರತರತ್ನ ಪ್ರಶಸ್ತಿಯನ್ನು ನೀಡಲಾಯಿತು. ಶಾಸ್ತ್ರೀ ಅವರ ಸಾವಿನ ಪ್ರಕರಣವು ಇನ್ನೂ ತಾಷ್ಕೆಂಟ್‌ನಲ್ಲಿ ವಿವಾದದಲ್ಲಿದೆ. . * ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಭಾರತದ 2 ನೇ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪುಣ್ಯತಿಥಿ ದಿನದಂದು ಅವರಿಗೆ ಗೌರವ ನಮನಗಳನ್ನು ತಿಳಿಸಿದ್ದಾರೆ.