Job Description: * ಪ್ರಸ್ತುತ ಭಾರತದ ಪ್ರತಿಷ್ಠಿತ ಉದ್ಯಮ ಸಂಸ್ಥೆ ಟಾಟಾ ಸಮೂಹವು ಇತ್ತೀಚಿಗೆ ಇಂಡಿಯನ್ ಪ್ರೀಮಿಯರ್ ಲೀಗ್(IPL)ನ ಟಿ20 ಕ್ರಿಕೆಟ್‌ ಟೂರ್ನಿಗೆ ಟೈಟಲ್ ಪ್ರಾಯೋಜಕತ್ವ ವಹಿಸಿಕೊಂಡಿದೆ. ಇದು 2022 ಮತ್ತು 2023 ರಲ್ಲಿ ಮುಂದಿನ ಎರಡು ಸೀಸನ್‌ಗಳಿಗೆ IPL ನ ಮುಖ್ಯ ಪ್ರಾಯೋಜಕತ್ವವನ್ನು ಟಾಟಾ ಸಮೂಹ ನೀಡಲಿದೆ. * ಈ ಮೊದಲು IPL ನ ಮುಖ್ಯ ಪ್ರಾಯೋಜಕತ್ವವನ್ನು ಚೀನಾ ಮೂಲದ ವಿವೊ ಮೊಬೈಲ್ ಕಂಪೆನಿಯು ನೀಡುತ್ತಿತ್ತು, ಇದೀಗ ಆ ಪ್ರಾಯೋಜಕತ್ವದ ಹಕ್ಕುಗಳನ್ನು ಟಾಟಾ ಸಮೂಹವು ಪಡೆದುಕೊಂಡಿದೆ. ಇತ್ತೀಚಿಗೆ ನಡೆದ IPL ನ ಆಡಳಿತ ಸಮಿತಿ ಸಭೆಯಲ್ಲಿ ಟಾಟಾ ಸಮೂಹಕ್ಕೆ ಈ ಬಾರಿಯ IPL ನ ಪ್ರಾಯೋಜಕತ್ವ ಹಕ್ಕುಗಳನ್ನು ನೀಡಲು ನಿರ್ಧರಿಸಿದೆ ಎಂದು ಐಪಿಎಲ್ ಮುಖ್ಯಸ್ಥ ಬ್ರಿಜೇಶ್ ಪಟೇಲ್ ಅವರು ಅಧಿಕೃತವಾಗಿ ಹೇಳಿದ್ದಾರೆ. * ಈ ಹಿಂದೆ ಚೀನಾ ಮೂಲದ ವಿವೊ ಮೊಬೈಲ್ ಕಂಪೆನಿಯು 2018 ರಿಂದ 2022 ರವರೆಗಿನ IPL ಪ್ರಾಯೋಜಕತ್ವದ ಹಕ್ಕುಗಳನ್ನು 2200 ಕೋಟಿ ರೂ. ಮೌಲ್ಯಕ್ಕೆ ಪಡೆದುಕೊಂಡಿತ್ತು. * ಭಾರತದ ಮತ್ತು ಚೀನಾ ಸೇನೆಗಳ ನಡುವಿನ ಈ ಹಿಂದೆ 2020 ರಲ್ಲಿ ಗಾಲ್ವನ್ ಕಣಿವೆಯಲ್ಲಿ ಸಂಘರ್ಷವಾಗಿತ್ತು ಆ ಹಿನ್ನಲೆಯಿಂದಾಗಿ ಚೀನಾ ವಸ್ತುಗಳನ್ನು ಬಹಿಷ್ಕಾರ ಮಾಡುವ ಅಭಿಯಾನವು ನಡೆದಿತ್ತು. ಆ ವರ್ಷದಲ್ಲಿ ಅಂದರೆ 2020 ರಲ್ಲಿ ವಿವೊ ಕಂಪನಿಯು IPL ಪ್ರಾಯೋಜಕತ್ವದಿಂದ ಹಿಂದೆ ಸರಿದಿತ್ತು, ಆ ಸಂದರ್ಭದಲ್ಲಿ ಡ್ರೀಮ್ ಇಲೆವನ್‌(Dream-11) ಕಂಪನಿ ಹಕ್ಕುನ್ನು ಪಡೆದುಕೊಂಡಿತ್ತು. ಮತ್ತೇ 2021 ರ IPL ಪ್ರಾಯೋಜಕತ್ವವನ್ನು ವಿವೊ ಕಂಪನಿ ಮರಳಿ ಪಡೆದುಕೊಂಡಿತ್ತು. * ಪ್ರಸ್ತುತ ಸ್ಪೋರ್ಟ್‌ಸ್ಟಾರ್ ನೋಡಿದ ಡೀಲ್ ದಾಖಲೆಗಳ ಪ್ರಕಾರ, ಟಾಟಾ ಸಮೂಹವು ವರ್ಷಕ್ಕೆ 335 ಕೋಟಿ ರೂ. ಹಣವನ್ನು ಪಾವತಿಸುತ್ತದೆ ಎಂದು ಅಂದಾಜಿಸಲಾಗಿದೆ. ಇದು ಮಹತ್ವದ ವಿಷಯವಾಗಿದೆ ಎಂದು BCCI ಕಾರ್ಯದರ್ಶಿ ಜಯ್ ಶಾ ಅವರು ತಿಳಿಸಿದ್ದಾರೆ. ಸದ್ಯ ಟಾಟಾ ಗ್ರೂಪ್ 100 ವರ್ಷಗಳಷ್ಟು ಹಳೆಯ ಹಾಗೂ '6' ಖಂಡಗಳಾದ್ಯಂತ 100 ಕ್ಕೂ ಅಧಿಕ ದೇಶಗಳಲ್ಲಿ ಕಾರ್ಯಾಚರಣೆಯನ್ನು ಮಾಡುವ ಭಾರತೀಯ ಉದ್ಯಮವಾಗಿದೆ. * ಇತ್ತೀಚಿಗೆ IPL ಗೆ ಇನ್ನು ಎರಡು ಹೊಸ ಫ್ರ್ಯಾಂಚೈಸಿಗಳನ್ನು ಸೇರಿಸಲಾಗಿದೆ. ಹಾಗೂ IPL ನ ಮೇಗಾ ಹರಾಜು ಪ್ರಕ್ರಿಯೆ ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿನಲ್ಲಿ ನಡೆಸಲು ನಿರ್ಧರಿಸಲಾಗಿದೆ. * ಟಾಟಾ ಗ್ರೂಪ್ ಭಾರತದ ಬಹುರಾಷ್ಟ್ರೀಯ ಸಂಘಟಿತ ಸಂಸ್ಥೆಯಾಗಿದೆ, ಈ ಸಂಸ್ಥೆಯನ್ನು 1868 ರಲ್ಲಿ ಜಮ್ಶೆಡ್ಜಿ ಟಾಟಾ(Jamsetji Tata) ಅವರು ಸ್ಥಾಪಿಸಿದ್ದಾರೆ. ಇದು ಭಾರತದ ಅತಿದೊಡ್ಡ ಮತ್ತು ಹಳೆಯ ಕೈಗಾರಿಕಾ ಗುಂಪುಗಳಲ್ಲಿ ಒಂದಾಗಿದೆ, ಸದ್ಯ ಇದು ತನ್ನ ಪ್ರಧಾನ ಕಛೇರಿಯನ್ನು ಭಾರತದ ಮುಂಬೈ ನಗರದಲ್ಲಿ ಹೊಂದಿದೆ. * 2021 ರ ವೇಳೆಗೆ ಟಾಟಾ ಗ್ರೂಪ್'ನ ಆದಾಯ: 10,300 ಕೋಟಿ ಉಸ್ಡ್ ಗಳಷ್ಟಿದೆ, ಮತ್ತೇ ಇದು ಟಾಟಾ ಮೋಟಾರ್ಸ್, ಟಾಟಾ ಸ್ಟೀಲ್ ಲಿಮಿಟೆಡ್, ಹೀಗೆ ಇನ್ನು ಹಲವು ಅಂಗಸಂಸ್ಥೆಗಳುನ್ನು ಹೊಂದಿದೆ.