Job Description: * ಪ್ರಸ್ತುತ ಮಧ್ಯಪ್ರದೇಶ ಸರ್ಕಾರವು ಸರಿ ಸುಮಾರು 2,000 ಕೋಟಿ ರೂ. ವೆಚ್ಚದಲ್ಲಿ ಧಾರ್ಮಿಕ ಗುರು ಹಾಗೂ ತತ್ವಜ್ಞಾನಿಯಾಗಿದ್ದ ಗುರು ಶಂಕರಾಚಾರ್ಯರ 108 ಅಡಿ ಎತ್ತರದ ಪ್ರತಿಮೆಯನ್ನು ಸ್ಥಾಪಿಸುವ ಯೋಜನೆಗೆ ಸಿದ್ಧತೆಗಳನ್ನು ನಡೆಸಿದೆ. ಇತ್ತೀಚಿಗೆ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಕೆಲ ದಿನಗಳ ಹಿಂದೆ ಅಷ್ಟೇ ಆಚಾರ್ಯ ಶಂಕರ ಸಾಂಸ್ಕೃತಿಕ ಏಕತಾ ನ್ಯಾಸ್‌ ನ ಟ್ರಸ್ಟಿಗಳ ಮಂಡಳಿಯ ಸಭೆಯಲ್ಲಿ ಈ ಯೋಜನೆಯ ಬಗ್ಗೆ ಮಾತನಾಡಿದ್ದರು. * ಪ್ರಸ್ತುತ ರಾಜ್ಯ ಬಜೆಟ್‌'ನಲ್ಲಿ ಈ ಯೋಜನೆಗಾಗಿ ಹಣ ಮಂಜೂರು ಮಾಡಿ ನಂತರ ಈ ಯೋಜನೆಯ ಬಗ್ಗೆ ಚರ್ಚಿಸಿ ಎಂದು ಪ್ರತಿಪಕ್ಷ ಕಾಂಗ್ರೆಸ್ ಹೇಳಿಕೆ ನೀಡಿದೆ. * ಪ್ರಸ್ತುತ ಮಧ್ಯಪ್ರದೇಶ ಸರ್ಕಾರವು, ರಾಜ್ಯದ ಓಂಕಾರೇಶ್ವರ ನಗರದಲ್ಲಿ ಸುಮಾರು 108 ಅಡಿ ಎತ್ತರದ ಬಹುಲೋಹದಿಂದ ನಿರ್ಮಿಸಲಾಗುವ ಆದಿಶಂಕರ ಪ್ರತಿಮೆ ಮ್ಯೂಸಿಯಂ ಹಾಗೂ ಅಂತಾರಾಷ್ಟ್ರೀಯ ವೇದಾಂತ ಸಂಸ್ಥಾನವನ್ನು ಮಾಂಧಾತ ಪರ್ವತದ 7.5 ಹೆಕ್ಟೇರ್ ಪ್ರದೇಶದಲ್ಲಿ ಸ್ಥಾಪಿಸಲಾಗುವುದು. ಹಾಗೂ ಇದರ ಜೊತೆಯಲ್ಲಿಯೇ ನರ್ಮದಾ ನದಿಯ ಮತ್ತೊಂದು ದಂಡೆಯ ಮೇಲೆ 5 ಹೆಕ್ಟೇರ್ ಪ್ರದೇಶದಲ್ಲಿ ಗುರುಕುಲಂ ಹಾಗೂ 10 ಹೆಕ್ಟೇರ್ ಪ್ರದೇಶದಲ್ಲಿ ಆಚಾರ್ಯ ಶಂಕರ್ ಅಂತಾರಾಷ್ಟ್ರೀಯ ಅದ್ವೈತ ವೇದಾಂತ ಸಂಸ್ಥಾನವನ್ನು ಅಭಿವೃದ್ಧಿಪಡಿಸಲಾಗುವ ಯೋಜನೆಯುನ್ನು ಕೈಗೆತ್ತಿಕೊಂಡಿದೆ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ತಿಳಿಸಿದ್ದಾರೆ. * ಈ ಯೋಜನೆಗೆ ಬಜೆಟ್‌ನಲ್ಲಿ ಹಣವನ್ನು ಮೀಸಲಿಟ್ಟಾಗ ಚರ್ಚೆ ನಡೆಸುತ್ತೇವೆ ಎಂದು ಮಧ್ಯೆಪ್ರದೇಶದ ಪ್ರತಿಪಕ್ಷ ನಾಯಕ ಕಮಲ್ ನಾಥ್ ಅವರು ಹೇಳಿಕೆ ನೀಡಿದ್ದಾರೆ. ಸದ್ಯ ರಾಜ್ಯದ ಬಜೆಟ್ 2.41 ಲಕ್ಷ ಕೋಟಿ ರೂ. ಆಗಿದೆ ಆದರೆ ರಾಜ್ಯದ ಒಟ್ಟು ಸಾಲವು 2.56 ಲಕ್ಷ ಕೋಟಿ ರೂ. ಆಗಿದೆ ಎಂದು ತಿಳಿಸಿದ್ದಾರೆ. * ಆದಿ ಶಂಕರಾಚಾರ್ಯರು ಒಬ್ಬ ಭಾರತೀಯ ತತ್ವಜ್ಞಾನಿ ಮತ್ತು ದೇವತಾಶಾಸ್ತ್ರಜ್ಞರಾಗಿದ್ದರು. ಇವರ ವ್ಯಾಖ್ಯಾನಗಳು, ಮೂಲ ತತ್ವಶಾಸ್ತ್ರದ ನಿರೂಪಣೆಗಳು, ಹಾಗೂ ಕಾವ್ಯ ಸೇರಿದಂತೆ 300 ಕ್ಕೂ ಅಧಿಕ ಪಠ್ಯಗಳು ಇವರ ಹೆಸರಿಗೆ ಮುಖ್ಯ ಕಾರಣವಾಗಿವೆ. ಹಿಂದೂ ಧರ್ಮದ ಟಿಪ್ಪಣಿ ಶಂಕರರ ಅದ್ವೈತವು ಮಹಾಯಾನ ಬೌದ್ಧಧರ್ಮದೊಂದಿಗೆ ಹೋಲಿಕೆಯನ್ನು ತೋರಿಸುತ್ತದೆ, ಹಿಂದೂ ವೈಷ್ಣವ ವಿರೋಧಿಗಳು ಶಂಕರಾಚಾರ್ಯರನ್ನು 'ಕ್ರಿಪ್ಟೋ-ಬೌದ್ಧ' ಎಂದು ಆರೋಪಿಸಿದ್ದಾರೆ. * ಶಂಕರರು ಅದ್ವೈತ ವೇದಾಂತದ ಸಂಪ್ರದಾಯದಲ್ಲಿ ಸಾಟಿಯಿಲ್ಲದ ಸ್ಥಾನಮಾನವನ್ನು ಪಡೆದಿದ್ದಾರೆ, ಹಾಗೂ, ಇವರು ಸಾಂಪ್ರದಾಯಿಕ ವೈದಿಕ ಸಂಪ್ರದಾಯಗಳು ಮತ್ತು ಭಿನ್ನವಾದ ವೈದಿಕೇತರ ಸಂಪ್ರದಾಯಗಳಿಂದ ಹಲವು ಚಿಂತಕರೊಂದಿಗೆ ಪ್ರವಚನಗಳು ಮತ್ತು ಚರ್ಚೆಗಳ ಮೂಲಕ ತಮ್ಮ ತತ್ವಶಾಸ್ತ್ರವನ್ನು ಪ್ರಚಾರ ಮಾಡಲು ಭಾರತೀಯ ಉಪಖಂಡದಾದ್ಯಂತ ಪ್ರಯಾಣವನ್ನು ಬೆಳೆಸಿದರು. ಸಂಪ್ರದಾಯದ ಪ್ರಕಾರ ಇವರು '4' ಮಠಗಳನ್ನು ಸ್ಥಾಪಿಸಿದರು, ಈ ಮಠಗಳು 14 ನೇ ಶತಮಾನದ ಕೊನೆಯಲ್ಲಿ ಸ್ಥಾಪಿಸಲಾಗಿದೆ ಎಂದು ಅಂದಾಜಿಸಿದ್ದಾರೆ.