Job Description: * ಇತ್ತೀಚಿಗೆ ಮ್ಯಾನ್ಮಾರ್‌ನ ಉಚ್ಚಾಟಿತ ನಾಯಕಿ ಆಂಗ್ ಸಾನ್ ಸೂಕಿ ಅವರು ಪರವಾನಗಿ ಇಲ್ಲದೆ ವಾಕಿ-ಟಾಕಿ ಬಳಕೆ ಮಾಡಿರುವ ಆರೋಪದ ಮೇಲೆ ಅವರಿಗೆ 4 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಮ್ಯಾನ್ಮಾರ್‌ನ ಉಚ್ಚಾಟಿತ ನಾಯಕಿ ಆಂಗ್ ಸಾನ್ ಸೂಕಿ ಅವರು ನೊಬೆಲ್ ಪ್ರಶಸ್ತಿಯನ್ನು ಪಡೆದಿದ್ದಾರೆ, ಇದೀಗ ಅವರ ಮೇಲೆ ಸರಿ ಸುಮಾರು 12 ಪ್ರಕರಣಗಳ ವಿಚಾರಣೆಯನ್ನು ನಡೆಸಲಾಗುತ್ತಿದೆ, ಈ ಎಲ್ಲ ಪ್ರಕರಣಗಳು ವಿಚಾರಣೆ ಪೂರ್ಣಗೊಂಡ ಬಳಿಕ ಇವರಿಗೆ ಗರಿಷ್ಠ ಪಕ್ಷ 100 ವರ್ಷಗಳಿಗಿಂತ ಅಧಿಕ ಕಾಲ ಜೈಲು ಶಿಕ್ಷೆಯಾಗುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ. * ನಾಯಕಿ ಆಂಗ್ ಸಾನ್ ಸೂಕಿ ಅವರು ಕಳೆದ ವರ್ಷದ ಫೆಬ್ರವರಿ ತಿಂಗಳಲ್ಲಿ ಮ್ಯಾನ್ಮಾರ್‌ ದೇಶದಲ್ಲಿ ಆಗಿರುವ ಸೇನಾ ದಂಗೆಯಲ್ಲಿ ಇವರನ್ನು ಬಂಧನಕ್ಕೆ ಒಳಪಡಿಸಲಾಗಿದೆ. ಹಾಗೂ ಇವರ ವಿಚಾರಣೆಯನ್ನು ಮ್ಯಾನ್ಮಾರ್‌ನ ರಾಜಧಾನಿ ನಯ್ಪಿಯಡೊದಲ್ಲಿರುವ ನ್ಯಾಯಾಲಯದ ಮುಚ್ಚಿದ ಕೊಠಡಿಗಳಲ್ಲಿ ನಡೆಸಲಾಗಿದೆ. * ನಾಯಕಿ ಆಂಗ್ ಸಾನ್ ಸೂಕಿ ಅವರ ಪಕ್ಷವು ಮಿಲಿಟರಿ ಬೆಂಬಲಿತ ಪಕ್ಷವನ್ನು ಸೋಲಿಸಿ ಪ್ರಚಂಡ ಗೆಲುವನ್ನು ಪಡೆದುಕೊಂಡಿತ್ತು ಅದರಲ್ಲಿ ಅಕ್ರಮ ನಡೆದಿದೆ ಎಂದು ಅವರನ್ನು ಉಚ್ಚಾಟಿಸಿ ತೀರ್ಪು ನೀಡಲಾಗಿದೆ ಎಂದಿದ್ದಾರೆ. * ನಾಯಕಿ ಆಂಗ್ ಸಾನ್ ಸೂಕಿ ಅವರು 1945 ರ ಜೂನ್ 19 ರಂದು ಜನಿಸಿದ್ದಾರೆ, ಹಾಗೂ ಇವರೊಬ್ಬ ಒಂದು ಮಯನ್ಮಾರ್ ರಾಜಕಾರಣಿಯಾಗಿದ್ದಾರೆ, ಹಾಗೂ ಇವರು 1991 ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಪಡೆದಿದ್ದಾರೆ, ಇವರು ಮ್ಯಾನ್ಮಾರ್‌ ನ ರಾಜ್ಯ ಸಲಹೆಗಾರರಾಗಿ (ಈ ಹುದ್ದೆ ಅಲ್ಲಿನ ಪ್ರಧಾನ ಮಂತ್ರಿಗೆ ಸಮಾನ) ಇವರು 2016 ರಿಂದ 2021 ರವರೆಗೆ ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಸೇವೆ ಸಲ್ಲಿಸಿದರು. ಸೂಕಿ ಅವರು 2011 ರಿಂದ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಮತ್ತು 1988 ರಿಂದ 2011 ರವರೆಗೆ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. * ಆಂಗ್ ಸಾನ್ ಸೂಕಿ ಅವರು 1988 ರ ಆಗಸ್ಟ್. 8 ರಂದು ನಡೆದ 8888 ದಂಗೆಯಲ್ಲಿ ಪ್ರಾಮುಖ್ಯತೆಯನ್ನು ಹೊಂದಿದ್ದರು, ಹಾಗೂ ಇವರು ಮಿಲಿಟರಿಯ ಹಲವಾರು ನಿವೃತ್ತ ಸೇನಾ ಅಧಿಕಾರಿಗಳ ಸಹಾಯದಿಂದ ಹೊಸ NLD ಎಂಬ ಪಕ್ಷ ರಚಿಸಿ ಅದರ ಪ್ರಧಾನ ಕಾರ್ಯದರ್ಶಿಯಾದರು. ಹಾಗೂ ಇವರ ಈ ಪಕ್ಷವು1990 ರ ಚುನಾವಣೆಯಲ್ಲಿ 81% ಸ್ಥಾನವನ್ನು ಪಡೆದುಕೊಂಡಿತ್ತು, ಆದರೆ ಮಿಲಿಟರಿ ಸರ್ಕಾರವು ಅಧಿಕಾರವನ್ನು ಹಸ್ತಾಂತರಿಸಲು ನಿರಾಕರಿಸಿದ ಹಿನ್ನಲೆಯಿಂದಾಗಿ ಫಲಿತಾಂಶಗಳನ್ನು ರದ್ದುಗೊಳಿಸಲಾಯಿತು, ಆಗ ಅದು ಅಂತರರಾಷ್ಟ್ರೀಯ ಆಕ್ರೋಶಕ್ಕೆ ಕಾರಣವಾಯಿತು ಪ್ರತಿಭಟನೆಯನ್ನು ನಡೆಸಲಾಯಿತು. ನಾಯಕಿ ಆಂಗ್ ಸಾನ್ ಸೂಕಿ ಅವರನ್ನು 1989 ರಿಂದ 2010 ರವರೆಗಿನ 21 ವರ್ಷಗಳಲ್ಲಿ ಇವರು ಸುಮಾರು 15 ವರ್ಷಗಳ ಕಾಲ ಗೃಹಬಂಧನದಲ್ಲಿಯೇ ಉಳಿದಿರುವ ವಿಶ್ವದ ಪ್ರಮುಖ ರಾಜಕೀಯ ಕೈದಿಗಳಲ್ಲಿ ಒಬ್ಬರಾಗಿದ್ದಾರೆ. * ಮಯನ್ಮಾರ್ ನ ಸೂಕಿ ಅವರ ಪಕ್ಷವು 2020 ರ ನವೆಂಬರ್ ನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಜಯಗಳಿಸಿತ್ತು, ಆದರೆ 2021 ರ ಫೆಬ್ರವರಿ. 01 ರಂದು ಮಿಲಿಟರಿ ನಾಯಕರನ್ನು ಅಧಿಕಾರ ವಹಿಸಿಕೊಂಡ ನಂತರ ಸೂಕಿ ಅವರನ್ನು ಬಂಧಿಸಿ ಅವರ ವಿರುದ್ಧ ಹಲವಾರು ಆರೋಪಗಳನ್ನು ಸಲ್ಲಿಸಿ 2021 ಡಿಸೆಂಬರ್.06 ರಂದು '4' ವರ್ಷಗಳ ಶಿಕ್ಷೆ ವಿಧಿಸಲಾಯಿತು, ಮತ್ತೇ 2022 ರ ಜನವರಿ. 10 ರಂದು ಮತ್ತೊಂದು ಆರೋಪದಡಿ ಮತ್ತೇ ಹೆಚ್ಚುವರಿ '4' ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ.