Job Description: * ಪ್ರಸ್ತುತ ಅಂತರರಾಷ್ಟ್ರೀಯ ಸಮಾವೇಶ 2022 ಕ್ಕೆ ಕಾರವಾರನಲ್ಲಿನ INS ಕದಂಬ ನೌಕಾನೆಲೆಯ ನೌಕೆ ದುರಸ್ತಿ ಯಾರ್ಡ್, ಇದೀಗ ತನ್ನ ಮೊದಲ ಪ್ರಯತ್ನದಲ್ಲೇ ಪ್ರತಿಷ್ಠಿತ ಗುಣಮಟ್ಟದ ಪರಿಕಲ್ಪನೆಗಳಿಗಾಗಿ ಆಯ್ಕೆಯಾಗಿದೆ, ಹಾಗೂ ಈ ಸಮಾವೇಶವು ಇದೇ ವರ್ಷ ಇಂಡೋನೇಷ್ಯ ರಾಷ್ಟ್ರದಲ್ಲಿ ಆಯೋಜನೆಯಾಗಲಿದೆ ಎಂದು ತಿಳಿದು ಬಂದಿದೆ. * ಕಳೆದ ವರ್ಷ 2021 ರಲ್ಲಿ ಡಿಸೆಂಬರ್. 27 ರಿಂದ ಡಿಸೆಂಬರ್. 30ರ ತನಕ ತಮಿಳುನಾಡು ರಾಜ್ಯದ ಕೊಯಮತ್ತೂರಿನಲ್ಲಿ ಜರುಗಿದ 35 ನೇ ಸಮಾವೇಶದಲ್ಲಿ ಭಾಗಿಯಾದ ಕಾರವಾರ ನೌಕೆ ನೆಲೆಯ ದುರಸ್ತಿ ಯಾರ್ಡ್‌ನ ಗುಣಮಟ್ಟ ನಿಯಂತ್ರಣದ ತಂಡದ ಸಾಹಸದ ಬಹುಮಾನ ಪಡೆದುಕೊಂಡಿದೆ. ಇದೇ ಕಾರವಾರ ನೌಕೆ ನೆಲೆಯ ದುರಸ್ತಿ ಯಾರ್ಡ್‌ನ ಗುಣಮಟ್ಟ ನಿಯಂತ್ರಣದ ತಂಡವು ಕರ್ನಾಟಕ ರಾಜ್ಯದ ಮೈಸೂರಿನಲ್ಲಿ ನಡೆದ ವಿಭಾಗಮಟ್ಟದ ಸಮಾವೇಶದಲ್ಲಿ ಬಂಗಾರದ ಪದಕವನ್ನು ಪಡೆದುಕೊಂಡಿದೆ. ಮೈಸೊರಿನಲ್ಲಿ ಈ ಸಮಾವೇಶಗಳನ್ನು "ಕ್ವಾಲಿಟಿ ಸರ್ಕಲ್ ಫೋರಮ್ ಆಫ್ ಇಂಡಿಯಾ" ಸಂಸ್ಥೆ ಆಯೋಜಿಸಿತ್ತು. * ಈ ಸಾಹಸ್ ತಂಡದಲ್ಲಿ ಕಮಾಂಡರ್ ಗಿರೀಶ ಜಾಧವ್, ಸಿಬ್ಬಂದಿ ಸುರೇಂದ್ರ ಸಿಂಗ್, ದಿನಕರ್ ಮತ್ತೇ ಇನ್ನು '5' ಜನರಿದ್ದಾರೆ. ಕಾರವಾರದ ಈ ತಂಡವು "ವಾಟರ್ ಜೆಟ್ ಫಾಸ್ಟ್ ಅಟ್ಯಾಕ್ ಕ್ರಾಫ್ಟ್‌ನಲ್ಲಿ ಇಂಜೆಕ್ಷನ್ ಪಂಪ್ ಅಳವಡಿಕೆ" ಎಂಬ ವಿಷಯದ ಅಡಿಯಲ್ಲಿ ಅಧ್ಯಯನದ ಬಗೆಗಿನ ವರದಿಯನ್ನು ಮಾಡಿಸಿದ್ದರು. * ಕ್ವಾಲಿಟಿ ಸರ್ಕಲ್ ಫೋರಮ್ ಆಫ್ ಇಂಡಿಯಾ ಇದೊಂದು ಕೈಗಾರಿಕೆಗಳಲ್ಲಿ ತಯಾರಿಕೆ, ಸೇವೆ ಹಾಗೂ ಆಡಳಿತ ವಿಭಾಗದಲ್ಲಿ ಉಂಟಾಗುವ ಸಮಸ್ಯೆಗೆ ಪರಿಹಾರವನ್ನು ಒದಗಿಸುವ ಸಮಾನ ಮನಸ್ಕ ಉದ್ಯೋಗಿಗಳ ಸಂಘಟನೆಯಾಗಿದೆ. * INS ಕದಂಬ ಇದೊಂದು ಭಾರತೀಯ ನೌಕಾಪಡೆಯ ನೆಲೆಯಾಗಿದೆ, ಸದ್ಯ ಇದು ಕರ್ನಾಟಕ ರಾಜ್ಯದ ಕಾರವಾರದ ಬಳಿ ಇದೆ. INS ಕದಂಬವು ಪ್ರಸ್ತುತ 3 ನೇ ಅತಿದೊಡ್ಡ ಭಾರತೀಯ ನೌಕಾ ನೆಲೆಯಾಗಿದೆ, ಈ ಪ್ರದೇಶದಲ್ಲಿ 2005 ರಲ್ಲಿ ಪ್ರಾಜೆಕ್ಟ್ ಸೀಬರ್ಡ್ ಎಂಬ ಕೋಡ್-ಹೆಸರಿನ ಬೇಸ್‌ನ ಮೊದಲ ಹಂತದ ನಿರ್ಮಾಣವು ಪೂರ್ಣಗೊಂಡಿತು ಮತ್ತು ಈ ಬೇಸ್'ನ್ನು 2005 ರ ಮೇ.31 ರಂದು ನಿಯೋಜಿಸಲಾಗಿದೆ. ಹಾಗೆಯೇ ಇದೇ ಯೋಜನೆಯ 2 ನೇ ಹಂತದ ಅಭಿವೃದ್ಧಿಯು 2011 ರಲ್ಲಿ ಆರಂಭವಾಗಿದೆ, ಈ ವಿಸ್ತರಣೆ ಹಂತ IIB ಪೂರ್ಣಗೊಂಡ ಬಳಿಕ ಇದು ಪೂರ್ವ ಗೋಳಾರ್ಧದಲ್ಲಿ ಅತಿದೊಡ್ಡ ನೌಕಾ ನೆಲೆಯಾಗುವ ನಿರೀಕ್ಷೆಯಿದೆ ಎಂದು ಭಾರತೀಯ ನೌಕಾಪಡೆ ತಿಳಿಸಿದೆ.