Job Description: * ಪ್ರಸ್ತುತ ಭಾರತದ 73 ನೇ ಚೆಸ್‌ ಗ್ರ್ಯಾಂಡ್‌ಮಾಸ್ಟರ್‌ ಆಗಿ ಹೊರಹೊಮ್ಮಿದ 14 ವರ್ಷದ ಭರತ್‌ ಸುಬ್ರಮಣಿಯಮ್‌. ಇವರು ಇತ್ತೀಚಿಗೆ ಇಟಲಿಯ ವರ್ಗಾನಿ ಕಪ್‌ ಓಪನ್‌ನಲ್ಲಿ 3 ನೇ ಹಾಗೂ ಅಂತಿಮ ಜಿ.ಎಂ ನಾರ್ಮ್‌ ಪೂರ್ಣಗೊಳಿಸುವ ಮೂಲಕ ಗ್ರ್ಯಾಂಡ್‌ಮಾಸ್ಟರ್‌ ಆಗಿ ಹೊರಹೊಮ್ಮಿದ್ದಾರೆ. * ಭರತ್‌ ಸುಬ್ರಮಣಿಯಮ್‌ ಅವರು ಒಟ್ಟು '9' ಸುತ್ತುಗಳಲ್ಲಿ ಸುಮಾರು 6.5 ಪಾಯಿಂಟ್ಸ್‌ ಗಳನ್ನೂ ಕಲೆ ಹಾಕಿದ್ದಾರೆ, 3 ನೇ ಜಿ.ಎಂ ನಾರ್ಮ್‌ ಹಂತವನ್ನು ತಲುಪಲು ಅಗತ್ಯವಿದ್ದ 2,500 ಎಲೋ ಪಾಯಿಂಟ್‌ಗಳ ಗಡಿ ತಲುಪಿದ್ದಾರೆ, ಇದರಿಂದಾಗಿ ಚೆಸ್‌ನಲ್ಲಿ '3' ಜಿ.ಎಂ. ನಾರ್ಮ್‌ಗಳ ಜೊತೆಗೆ 2,500 ರೇಟಿಂಗ್‌ ಹೊಂದಿರುವ ಆಟಗಾರ ಗ್ರ್ಯಾಂಡ್‌ಮಾಸ್ಟರ್‌ ಎಂಬ ಬಿರುದಿಗೆ ಅರ್ಹರಾಗಿದ್ದಾರೆ. * ಭಾರತೀಯ ಇನ್ನೊಬ್ಬ ಗ್ರ್ಯಾಂಡ್‌ಮಾಸ್ಟರ್‌ ಆಗಿರುವ ಎಂ.ಆರ್‌.ಲಲಿತ್‌ ಬಾಬು ಅವರು ಇಟಲಿಯ ವರ್ಗಾನಿ ಕಪ್‌ ಓಪನ್‌ ಆಟದಲ್ಲಿ ಜಯಗಳಿಸಿ ಕಿರೀಟವನ್ನು ಪಡೆದುಕೊಂಡಿದ್ದಾರೆ. ಎಂ.ಆರ್‌.ಲಲಿತ್‌ ಬಾಬು ಅವರು ಈ ಕಪ್‌ನಲ್ಲಿ '7' ಪಾಯಿಂಟ್‌ಗಳನ್ನು ಪಡೆದುಕೊಂಡಿದ್ದಾರೆ. * ಪ್ರಸ್ತುತ ಇಂಟರ್ನ್ಯಾಷನಲ್ ಚೆಸ್ ಫೆಡರೇಶನ್ ಪ್ರಕಾರ ಭಾರತೀಯ ಚೆಸ್ ಆಟಗಾರರಲ್ಲಿ 73 ಗ್ರ್ಯಾಂಡ್ ಮಾಸ್ಟರ್ಸ್'ಗಳಿದ್ದಾರೆ, ಮತ್ತು 125 ಇಂಟರ್ನ್ಯಾಷನಲ್ ಮಾಸ್ಟರ್ಸ್ ಗಳಿದ್ದಾರೆ, ಹಾಗೂ ಸುಮಾರು 18 ವುಮನ್ ಗ್ರ್ಯಾಂಡ್ ಮಾಸ್ಟರ್ಸ್ ಗಳಿದ್ದಾರೆ, ಮತ್ತೇ 42 ವುಮನ್ ಇಂಟರ್ನ್ಯಾಷನಲ್ ಮಾಸ್ಟರ್ಸ್ ಗಳಿದ್ದಾರೆ. * 2021 ರ ಜನವರಿ ವೇಳೆಗೆ, ಟಾಪ್ 10 ಸಕ್ರಿಯ ಭಾರತೀಯ ಚೆಸ್ ಆಟಗಾರರು ಸರಾಸರಿ 2670 ರೇಟಿಂಗ್'ನ್ನು ಪಡೆದುಕೊಂಡಿದ್ದಾರೆ, ರಷ್ಯಾ, US, ಹಾಗೂ ಚೀನಾ ದೇಶಗಳ ನಂತರ ಭಾರತವು ವಿಶ್ವದ 4ನೇ ಸ್ಥಾನದಲ್ಲಿದೆ. ಇದರ ಜೊತೆಗೆ ಟಾಪ್ 10 ಸಕ್ರಿಯ ಮಹಿಳಾ ಭಾರತೀಯ ಆಟಗಾರರು ಸರಾಸರಿ 2405 ರ ಸರಾಸರಿ ರೇಟಿಂಗ್'ನ್ನು ಪಡೆದಿದ್ದಾರೆ, ಇದೀಗ ಇವರು ಚೀನಾ ಮತ್ತು ರಷ್ಯಾ ದೇಶಗಳ ನಂತರ ವಿಶ್ವದ 3ನೇ ಸ್ಥಾನದಲ್ಲಿದ್ದರೆ. * ಭಾರತೀಯ 19 ವಿವಿಧ ರೀತಿಯ ಚೆಸ್ ಆಟಗಾರರಿಗೆ 2020 ರ ವೇಳೆಗೆ ಪದ್ಮ ಪ್ರಶಸ್ತಿ, ಹಾಗೂ ಅರ್ಜುನ ಪ್ರಶಸ್ತಿ, ಮತ್ತು ಭಾರತದ ಅತ್ಯುನ್ನತ ನಾಗರಿಕ ಮತ್ತು ಕ್ರೀಡಾ ಗೌರವವನ್ನು ಕಲ್ಪಿಸಲಾಗಿದೆ. * ಈ ಹಿಂದೆ 2008 ರಲ್ಲಿ ಚೆಸ್ ಮಾಂತ್ರಿಕ ವಿಶ್ವನಾಥನ್ ಆನಂದ್ ಅವರು ಪದ್ಮವಿಭೂಷಣ ಪ್ರಶಸ್ತಿ, ಹಾಗೂ 1991-92 ರಲ್ಲಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಪಡೆದ ಮೊದಲ ಕ್ರೀಡಾಪಟು ಇವರಾಗಿದ್ದಾರೆ. ಈ ಪ್ರಶಸ್ತಿಯು ಕ್ರೀಡಾ ಲೋಕದ ಪ್ರಥಮ ಅತ್ಯುನ್ನತ ಪ್ರಶಸ್ತಿಯಾಗಿದೆ.