Job Description: * ಪ್ರಸ್ತುತ ತಮಿಳುನಾಡು ಸರ್ಕಾರವು ಕೋವಿಡ್-19 ರೂಪಾಂತರದ ಪ್ರಕರಣಗಳ ಏರಿಕೆಯ ನಡುವೆಯೂ 'ಜಲ್ಲಿಕಟ್ಟು' ಕ್ರೀಡೆಯ ಕಾರ್ಯಕ್ರಮಗಳಿಗೆ ಮಾರ್ಗಸೂಚಿಗಳನ್ನ ಬಿಡುಗಡೆ ಮಾಡಿದೆ, ಆ ಮಾರ್ಗಸೂಚಿಯ ಪ್ರಕಾರ ಕೇವಲ 150 ಪ್ರೇಕ್ಷಕರಿಗೆ ಅಥವಾ ಆ ಕಾರ್ಯಕ್ರಮದಲ್ಲಿನ ಒಟ್ಟು ಆಸನಗಳ ಪೈಕಿ ಶೇ. 50 ಭರ್ತಿಗೆ ಅವಕಾಶ ನೀಡಿದೆ. * ಈ 'ಜಲ್ಲಿಕಟ್ಟು' ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಂಪೂರ್ಣ ಕೋವಿಡ್-19 ಲಸಿಕೆ ಅಥವಾ ನೆಗೆಟಿವ್ RT-PCR ಪರೀಕ್ಷಾ ವರದಿಯನ್ನು ನೀಡಿ ಹಾಜರಾಗಲು ರಾಜ್ಯ ಸರ್ಕಾರ ತಿಳಿಸಿದೆ, ಆ ಪರೀಕ್ಷಾ ವರದಿಯು 48 ಗಂಟೆಗಳಿಗಿಂತ ಹಳೆಯ ಪರೀಕ್ಷಾ ವರದಿ ಯಾಗಿರಬಾರದು ಎಂದು ತಿಳಿಸಿದೆ. * ಇದೀಗ ತಮಿಳುನಾಡು ರಾಜ್ಯದಲ್ಲಿ 'ಕೋವಿಡ್'-19 ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನಲೆಯಿಂದಾಗಿ ರಾಜ್ಯದಲ್ಲಿನ ವಿಶ್ವವಿದ್ಯಾಲಯ ಪರೀಕ್ಷೆಗಳನ್ನ ಅನಿರ್ದಿಷ್ಟಾವಧಿಗೆ ಮುಂದೂಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. * ಪ್ರಸ್ತುತ ತಮಿಳುನಾಡು ರಾಜ್ಯದಲ್ಲಿ ನಡೆಯುವ ಜಲ್ಲಿಕಟ್ಟು'ನ್ನು, ಎರು ತಝುವುತಲ್ ಮತ್ತು ಮಂಜುವಿರಾಟ್ಟು ಎಂಬ ಅಡ್ಡ ಹೆಸರುಗಳಿಂದ ಕರೆಯುತ್ತಾರೆ, ಹಾಗೂ ಇದೊಂದು ಒಂದು ಸಾಂಪ್ರದಾಯಿಕ ಕಾರ್ಯಕ್ರಮವಾಗಿದೆ, ಈ ಕಾರ್ಯಕ್ರಮವು ಪುಲಿಕುಳಂ ಅಥವಾ ಕಂಗಾಯಂ ತಳಿಗಳಂತಹ ಗೂಳಿಯನ್ನು ಜನಸಮೂಹಕ್ಕೆ ಬಿಡಲಾಗುತ್ತದೆ. ಈ ಜಲ್ಲಿಕಟ್ಟು ಕಾರ್ಯಕ್ರಮದಲ್ಲಿ ಭಾಗವಹಿಸುವವರು ಜನರು ಆ ಗೂಳಿಯ ಬೆನ್ನಿನ ಮೇಲಿರುವ ದೊಡ್ಡ ಗೂನುವನ್ನು ಎರಡೂ ತೋಳುಗಳಿಂದ ಹಿಡಿಯಲು ಪ್ರಯತ್ನಿಸುತ್ತಾರೆ ಹಾಗೂ ಅವರಿಗೆ ಸಾಧ್ಯವಾದಷ್ಟು ಸಮಯದವರೆಗೆ ಗೋಳಿಯ ಗೂನು ಹಿಡಿದುಕೊಂಡು ಅದನ್ನು ನಿಲ್ಲಿಸಲು ಪ್ರಯತ್ನಿಪಡುತ್ತಾರೆ. * ಈ ಜಲ್ಲಿಕಟ್ಟು ಕಾರ್ಯಕ್ರಮವನ್ನು ಭಾರತದ ತಮಿಳುನಾಡು ರಾಜ್ಯದಲ್ಲಿ ವಾರ್ಷಿಕವಾಗಿ ಜನವರಿ ತಿಂಗಳಲ್ಲಿ ನಡೆಯುವ ಮಟ್ಟು ಪೊಂಗಲ್ ದಿನದಂದು ಪೊಂಗಲ್ ಆಚರಣೆಯ ಭಾಗವಾಗಿ ಆಚರಣೆ ಮಾಡುತ್ತಾರೆ. * ಈ ಕ್ರೀಡೆಯನ್ನು ನಡೆಸುವದರಿಂದ ಪ್ರಾಣಿಗಳಿಗೆ ಗಾಯ ಮತ್ತು ಸಾವು ಸಂಭವಿಸಬಹುದು ಎಂದು ಹೇಳಿ ಇತ್ತೀಚಿಗೆ ಕೆಲ ಪ್ರಾಣಿ ಹಕ್ಕುಗಳ ಸಂಘಟನೆಗಳು ಕ್ರೀಡೆಯನ್ನು ನಿಷೇಧಿಸುವಂತೆ ಕರೆ ನೀಡಿದ್ದವು ಈ ಹಿನ್ನಲೆಯಿಂದಾಗಿ ಕಳೆದ ವರ್ಷ ನ್ಯಾಯಾಲಯವು ಇದನ್ನು ನಿಷೇಧಿಸಿತ್ತು, ಆದರೆ ಸಾಮಾನ್ಯ ಜನರ ಪ್ರತಿಭಟನೆಯಿಂದಾಗಿ ಈ ಕ್ರೀಡೆಯನ್ನು ಮತ್ತೇ ಆಚರಿಸಲು 2017 ರಲ್ಲಿ ನ್ಯಾಯಾಲಯವು ಹೊಸ ಸುಗ್ರೀವಾಜ್ಞೆಯನ್ನು ಹೊರಡಿಸಿದೆ.