Job Description: * ಪ್ರಸ್ತುತ ಕನ್ನಡದ ಶ್ರೇಷ್ಠ ಸಾಹಿತಿಕಾರ, ನಾಟಕಕಾರ ಪ್ರೊಪೆಸರ್ ಚಂದ್ರಶೇಖರ್ ಪಾಟೀಲ್(ಚಂಪಾ) ಅವರು ವಿಧಿವಶರಾಗಿದ್ದಾರೆ, ಚಂಪಾ ಅವರು ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. ಇದೀಗ ಇವರ ಅಂತ್ಯಕ್ರಿಯೆಯನ್ನು ಸಕಲ ಪೊಲೀಸ್ ಗೌರವಗಳೊಂದಿಗೆ ನೆರವೇರಿಸಲಾಗಿದೆ. ಇವರ ನಿಧಾನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತಾಪವನ್ನು ಸೂಚಿಸಿದ್ದಾರೆ. * ಚಂಪಾ ಅವರು ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದರು ಇವರು ಅಖಿಲ ಭಾರತ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. * ಚಂದ್ರಶೇಖರ ಪಾಟೀಲ್: ಚಂಪಾ ಅವರು 1939 ರ ಜೂನ್. 18 ರಂದು ಜನಿಸಿದ್ದರು. ಹಾಗೂ ಇತ್ತೀಚಿಗೆ 2022 ರ ಜನವರಿ. 10 ರಂದು ನಿಧನರಾಗಿದ್ದಾರೆ. ಇವರನ್ನು ಜನಪ್ರಿಯವಾಗಿ ಚಂಪಾ ಎಂದು ಕರೆಯಲಾಗುತ್ತಿತ್ತು. ಇವರೊಬ್ಬ ಭಾರತೀಯ ಕವಿ, ನಾಟಕಕಾರ ಹಾಗೂ ಕನ್ನಡದಲ್ಲಿ ಸಾರ್ವಜನಿಕ ಬೌದ್ಧಿಕ ಬರವಣಿಗೆಯನ್ನು ಹೊಂದಿದ್ದರು. ಚಂಪಾ ಅವರು ಈ ಹಿಂದೆ 1989 ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಕಾವ್ಯ ಪ್ರಶಸ್ತಿ, ಹಾಗೂ 2009 ರಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಪಂಪ ಪ್ರಶಸ್ತಿಗೆ ಭಾಜನರಾಗಿದ್ದರು. ಅಷ್ಟೇ ಅಲ್ಲದೇ ಇವರು ಕನ್ನಡ ಭಾಷಾ ಸಾಹಿತ್ಯ ಸಂಘಟನೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. * ಚಂಪಾ ಅವರ ಸಂಪಾದಿತ ಕೃತಿಗಳು: ಸಂಕ್ರಮಣ ಕಾವ್ಯ, ಗಾಂಧಿ, ಜೂನ್‌ 75, ಮಾರ್ಚ್ 77, ಬಂಡಾಯ ಹಾಗೂ ಸಾಹಿತ್ಯ, ನೆಲ್ಸನ್‌ಮಂಡೇಲಾ, ಕನ್ನಡ ನಾಡಿಗೊಂದು ಪ್ರಾದೇಶಿಕ ಪಕ್ಷ, ಇಂಗ್ಲಿಷ್‌ನಲ್ಲಿ ರಚಿಸಿದ ಕೃತಿ AT THE OTHER END. ಇನ್ನು ಹೀಗೆ ಹಲವಾರು ಕೃತಿಗಳನ್ನು ಸಂಪಾದಿಸಿದ್ದಾರೆ. * ಚಂಪಾ ಅವರಿಗೆ ಲಭಿಸಿರುವ ಪ್ರಶಸ್ತಿಗಳು: ರಾಜ್ಯ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ದಿನಕರ ದೇಸಾಯಿ ಪ್ರತಿಷ್ಠಾನ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಮತ್ತು ಕರುನಾಡ ಭೂಷಣ ಪ್ರಶಸ್ತಿ, ಹಾಗೂ ಪಂಪ ಪ್ರಶಸ್ತಿ ಹೀಗೆ ಅನೇಕ ಪ್ರಶಸ್ತಿಗಳು ಲಭಿಸಿವೆ. ಚಂಪಾ ಅವರು 2017 ರಲ್ಲಿ ಮೈಸೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು, ಹಾಗೂ ಇವರಿಗೆ 2018 ರಲ್ಲಿ ಬಸವಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.