Job Description: * ಇತ್ತೀಚಿಗೆ ಹಾಲಿವುಡ್ ನಟ, ಹಾಗೂ ಆಸ್ಕರ್ ಪುರಸ್ಕಾರಕ್ಕೆ ಪಾತ್ರರಾಗಿದ್ದ ಪ್ರಪ್ರಥಮ ಕಪ್ಪು ಜನಾಂಗೀಯ ನಟ ಸಿಡ್ನಿ ಪಾಯಿಟರ್ ಅವರು ತಮ್ಮ 94 ನೇ ವರ್ಷ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಇವರು ಹಾಲಿವುಡ್'ನ ಪ್ರಪ್ರಥಮ ಕಪ್ಪು ಜನಾಂಗೀಯ ನಟರಾಗಿದ್ದರು, ಇವರು 1950-60 ರ ದಶಕದಲ್ಲಿ ಅನೇಕ ಚಿತ್ರಗಳಲ್ಲಿ ನಟಿಸಿ ಹೆಸರುವಾಸಿಯಾಗಿದ್ದಾರೆ. * ಪ್ರಪ್ರಥಮ ಕಪ್ಪು ಜನಾಂಗೀಯ ನಟ ಸಿಡ್ನಿ ಪಾಯಿಟರ್ ಅವರು ಅಮೇರಿಕ ಮತ್ತು ಬಹಾಮಾ ಈ ಎರಡು ದೇಶಗಳ ಪೌರತ್ವ ಹೊಂದಿದ್ದರು, ಇವರ ನಿಧಾನಕ್ಕೆ ಬಹಾಮಾದ ಉಪಪ್ರಧಾನಿ ಚೆಸ್ಟರ್ ಕೂಪರ್ ಅವರು ಸಂತಾಪವನ್ನು ಸೂಚಿಸಿದ್ದಾರೆ. * ನಟ ಸಿಡ್ನಿ ಪಾಯಿಟರ್ ಅವರು ಈ ಹಿಂದೆ 1958 ರ ದಶಕದಲ್ಲಿ "ದಿ ಡಿಫಾಯಂಟ್ ಒನ್ಸ್" ಚಿತ್ರದ ಮೂಲಕ ಆಸ್ಕರ್ ಪುರಸ್ಕಾರಕ್ಕೆ ನಾಮನಿರ್ದೇಶನಗೊಂಡಿರುವ ಪ್ರಪ್ರಥಮ ಕರಿಯ ಜನಾಂಗೀಯ ನಟ ಇವರಾಗಿದ್ದಾರೆ. ನಂತರ ಸರಿ ಸುಮಾರು '6' ವರ್ಷಗಳ ಬಳಿಕ ನಟಿಸಿರುವ "ಲಿಲ್ಲೀಸ್ ಆಫ್ ದಿ ಫೀಲ್ಡ್" ಚಿತ್ರದ ನಟನೆಗಾಗಿ ಆಸ್ಕರ್ ಪುರಸ್ಕಾರವನ್ನು ಪಡೆದುಕೊಂಡು ಇತಿಹಾಸ ನಿರ್ಮಿಸಿದರು. * ಈ ಹಿಂದೆ 1950 ಹಾಗೂ 1960 ರ ದಶಕದ ಸಮಯದಲ್ಲಿ ಅಮೇರಿಕದಲ್ಲಿ ಜನಾಂಗೀಯ ಉದ್ವಿಗ್ನತೆ ಹೆಚ್ಚಾಗಿತ್ತು ಆ ಸಂಧರ್ಭದಲ್ಲಿ ಸಿಡ್ನಿ ಪಾಯಿಟರ್ ಅವರು ದ್ವೇಷಪ್ರಚಾರಗಳಿಂದ ದೂರವಿದ್ದರು, * ಈ ಸಿಡ್ನಿ ಪಾಯಿಟರ್ ಅವರು ಟಿವಿ ಕಾರ್ಯಕ್ರಮದಲ್ಲಿ ವರ್ಣಭೇದ ವಿರೋಧಿ ಹೋರಾಟಗಾರ ಮತ್ತು ದಕ್ಷಿಣ ಆಫ್ರಿಕದ ಪ್ರಪ್ರಥಮ ಕಪ್ಪುಜನಾಂಗೀಯ ಅಧ್ಯಕ್ಷರಾಗಿದ್ದ ನೆಲ್ಸನ್ ಮಂಡೇಲಾ ಹಾಗೂ ಅಮೇರಿಕದ ಸುಪ್ರೀಂಕೋರ್ಟ್‌ ನ ಪ್ರಪ್ರಥಮ ಕಪ್ಪುಜನಾಂಗೀಯ ನ್ಯಾಯಾಧೀಶ ಥುರ್‌ಗುಡ್ ಮಾರ್ಶಲ್‌ ರಂತ ಪ್ರಮುಖ ವ್ಯಕ್ತಿಗಳ ಪಾತ್ರವನ್ನು ನಿರ್ವಹಿಸಿ ಅಪಾರವಾದ ಜನ ಪ್ರಿಯತೆಯನ್ನು ಪಡೆದುಕೊಂಡಿದ್ದರು. * 1997 ರಲ್ಲಿ ಸಿಡ್ನಿ ಪಾಯಿಟರ್ ಅವರು ಚಿತ್ರರಂಗಕ್ಕೆ ವಿದಾಯ ಹೇಳಿ ಜಪಾನ್‌ಗೆ ಬಹಾಮಾದ 'ಗೌರವ' ರಾಯಭಾರಿಯಾಗಿ ನೇಮಕವಾಗಿದ್ದರು. ಅಮೇರಿಕ ಅಧ್ಯಕ್ಷ ಬರಾಕ್ ಒಬಾಮಾ ಆಡಳಿತದಲ್ಲಿ ಅಂದರೆ 2009 ರಲ್ಲಿ ಸಿಡ್ನಿಪಾಯಿಟರ್ ಅವರಿಗೆ ಅಮೇರಿಕದ ಸ್ವಾತಂತ್ರ್ಯ ಪುರಸ್ಕಾರ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು, ಈ ಪ್ರಶಸ್ತಿಯ ಅಮೇರಿಕ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ.