Job Description: * ಇದೀಗ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಇನ್ನು ಮುಂದೆ ರಾಜ್ಯದಲ್ಲಿನ ಪಡಿತರ ಚೀಟಿದಾರರಿಗೆ ಉಡುಪಿ, ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಬೆಳೆಯುವ ಕುಚಲಕ್ಕಿಯನ್ನು ಪಡಿತರ ಕೇಂದ್ರಗಳಲ್ಲಿ ವಿತರಣೆ ಮಾಡಲು ತೀರ್ಮಾನಿಸಿದೆ. ಎಂದು ಈ ಮಾಹಿತಿಯನ್ನು ರಾಜ್ಯ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟರ್'ನಲ್ಲಿ ಹಂಚಿಕೊಂಡಿದ್ದಾರೆ. * ರಾಜ್ಯದ ಪಡಿತರಗಳಲ್ಲಿ 'ಕುಚಲಕ್ಕಿ' ನೀಡುವದರಿಂದ ಸ್ಥಳೀಯ ಉತ್ಪನ್ನಗಳಿಗೆ ಬೆಂಬಲ ನೀಡಿದಂತಾಗುತ್ತದೆ, ಇದೀಗ ಕೇಂದ್ರ ಸರ್ಕಾರವು ಜನರ ಆಯ್ಕೆಯ ಆಹಾರವನ್ನು ನೀಡಲು ಮುಂದಾಗಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ. * ಬಿಳಿ ಅಕ್ಕಿಯನ್ನು ಸಾಕಷ್ಟು ಪಾಲಿಷ್ ಮಾಡಿರುತ್ತಾರೆ ಅದರಿಂದ ಅದರಲ್ಲಿರುವ ಪೋಷಕಾಂಶಗಳು ಹಾಳಾಗಿರುತ್ತವೆ. ಆದರೆ, ಕುಚ್ಚಲಕ್ಕಿಗೆ ಹೆಚ್ಚು ಪಾಲಿಷ್‍ ಮಾಡಲಾಗುವದಿಲ್ಲ, ಇದರಿಂದಾಗಿ ಅಕ್ಕಿಯಲ್ಲಿ ಪೋಷಕಾಂಶಗಳು ಉಳಿದುಕೊಂಡಿರುತ್ತವೆ. * ಕುಚ್ಚಲಕ್ಕಿಯಲ್ಲಿನ ಪೋಷಕಾಂಶಗಳು : ಈ ಅಕ್ಕಿಯಲ್ಲಿ ದೇಹಕ್ಕೆ ಅತ್ಯಗತ್ಯವಿರುವ ಖನಿಜಾಂಶಗಳಾದ ಮ್ಯಾಂಗನೀಸ್, ಐರನ್, ಝಿಂಕ್, ಫಾಸ್ಫರಸ್, ಕ್ಯಾಲ್ಸಿಯಂ, ಸೆಲೆನಿಯಮ್, ಮೆಗ್ನೇಷಿಯಂ ಹಾಗೂ ಪೊಟ್ಯಾಷಿಂ, ಗಳಂತಹ ಪೋಷಕಾಂಶಗಳು ಇದರಲ್ಲಿಇರಲಿವೆ. ವಿಟಮಿನ್ ಬಿ1, ಬಿ2, ಬಿ3, ಬಿ6, ವಿಟಮಿನ್-E, ವಿಟಮಿನ್-K' ನಂತಹ ಪೋಷಕಾಂಶಗಳು ಈ ಕುಚ್ಚಲಕ್ಕಿಯಲ್ಲಿ ಇರಲಿವೆ. * ಈ ಕುಚ್ಚಲಕ್ಕಿ ಅನ್ನವನ್ನು ಊಟ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ(ಸಕ್ಕರೆ ಕಾಯಿಲೆ) ಪ್ರಮಾಣವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಇತ್ತೀಚಿಗೆ ಅಮೇರಿಕದ ಡಯಾಬಿಟೀಸ್ ಅಸೋಷಿಯೇಷನ್ ತಿಳಿಸಿರುವ ಪ್ರಕಾರ ಕೂಡ ಸಕ್ಕರೆ ಕಾಯಿಲೆಯಿರುವವರು ಊಟಕ್ಕೆ ಬಿಳಿ ಅಕ್ಕಿಗಿಂತ ಕುಚ್ಚಲಕ್ಕಿ ಅನ್ನವನ್ನು ಬಳಸುವುದು ಉತ್ತಮ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಈ ಅಕ್ಕಿಯ ಅನ್ನವು ದೇಹದ ಬೊಜ್ಜನ್ನು ತಗ್ಗಿಸುವಲ್ಲಿ ಮತ್ತು ಬ್ಲಡ್ ಕ್ಯಾನ್ಸರ್ ಸೇರಿ ಕೆಲ ಕ್ಯಾನ್ಸರ್‍ಗಳಿಂದ ರಕ್ಷಣೆ ಒದಗಿಸುತ್ತದೆ ಹೀಗಾಗಿ ಇದು ಪ್ರಮುಖವಾಗಿದೆ ಎಂದು ಅಧ್ಯಯನದ ಪ್ರಕಾರ ತಿಳಿದು ಬಂದಿದೆ. * ಯುರೋಪಿಯನ್ ಜರ್ನಲ್ ಆಫ್ ನ್ಯುಟ್ರಿಷನ್‍'ನಲ್ಲಿ ವರದಿಯಾಗಿರುವ ಅಧ್ಯಯನದ ಪ್ರಕಾರ ಕುಚ್ಚಲಕ್ಕಿ ಅನ್ನವನ್ನು ಸೇವನೆ ಮಾಡುವದರಿಂದ ಮಗುವಿಗೆ ಎದೆಹಾಲು ನೀಡುತ್ತಿರುವ ಬಾಣಂತಿಯರಲ್ಲಿನ ಖಿನ್ನತೆ ಹಾಗೂ ಮಾನಸಿಕ ತೊಂದರೆಗಳನ್ನು ದೂರ ಮಾಡಲು ಸಹಕಾರಿಯಾಗಿದೆ ಎಂದು ವರದಿಯಾಗಿದೆ.