Job Description: * ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ 26'ನ್ನು 'ವೀರ್ ಬಾಲ್ ದಿವಸ್' ಎಂದು ಆಚರಿಸಲಾಗುವುದು ಎಂದು 2022 ರ ಜನವರಿ. 09 ರಂದು ಘೋಷಿಸಿದರು. ಈ ಡಿಸೆಂಬರ್ 26'ನ್ನು ಸಾಹಿಬ್‌ಜಾಡೆಸ್‌ಗೆ, ಅಂದರೆ ಗುರು ಗೋಬಿಂದ್ ಸಿಂಗ್‌'ನ ನಾಲ್ಕು ಪುತ್ರರಿಗೆ ಗೌರವ ಸಲ್ಲಿಸಲು ಈ ದಿನವನ್ನು ಆಚರಣೆ ಮಾಡಲಾಗುತ್ತದೆ. * ಈ ಡಿಸೆಂಬರ್. 26 ರಂದು ಸಾಹಿಬ್ಜಾದಾ ಫತೇ ಸಿಂಗ್ ಮತ್ತು ಸಾಹಿಬ್ಜಾದಾ ಜೋರಾವರ್ ಸಿಂಗ್ ಹುತಾತ್ಮರಾದರು, ಅವರನ್ನು ಜೀವಂತವಾಗಿ ಗೋಡೆಯಲ್ಲಿ ಮುಚ್ಚಲಾಯಿತು, ಇವರು ಅಧಾರ್ಮಿಕ ಮಾರ್ಗವನ್ನು ಅನುಸರಿಸುವುದಕ್ಕಿಂತ ಅಧಿಕವಾಗಿ ಸಾವಿಗೆ ಆದ್ಯತೆ ನೀಡಿದರು. ನಾಲ್ವರು ಸಾಹಿಬ್ಜಾಡೆಗಳು ಅನ್ಯಾಯಕ್ಕೆ ಎಂದಿಗೂ ತಲೆಬಾಗಲಿಲ್ಲ, ಹಾಗೂ ಅವರೆಲ್ಲರೂ ಸಾಮರಸ್ಯದ ಜಗತ್ತನ್ನು ಸೃಷ್ಟಿಸಲು ಬಯಸಿದ್ದರು. * ಸಾಹಿಬ್ಜಾಡೆಸ್: ಪಂಜಾಬಿಯಲ್ಲಿ ಸಾಹಿಬ್ಜಾಡೆ ಎಂದರೆ ಮಕ್ಕಳು ಎಂದರ್ಥ. ಸಾಮಾನ್ಯವಾಗಿ ಸಿಖ್ ಗುರು ಗುರು ಗೋಬಿಂದ್ ಸಿಂಗ್ ಅವರ ನಾಲ್ಕು ಪುತ್ರರನ್ನು ಉಲ್ಲೇಖಿಸಲು ಈ ಪದವನ್ನು ಬಳಸಲಾಗುತ್ತದೆ. ಇವರು ಸಿಖ್ಖರ 10ನೇ ಗುರುವಾಗಿದ್ದರೆ. ಅವರ ಜನ್ಮದಿನವನ್ನು ಪ್ರತಿ ವರ್ಷ ಜನವರಿ. 09 ರಂದು ಆಚರಣೆ ಮಾಡಲಾಗುತ್ತದೆ. ಗುರು ಗೋಬಿಂದ್ ಸಿಂಗ್ ಅವರ ನಾಲ್ವರು ಪುತ್ರರು ಸಾಹಿಬ್ಜಾದಾ ಬಾಬಾ ಅಜಿತ್ ಸಿಂಗ್, ಜುಜಾರ್ ಸಿಂಗ್, ಜೋರಾವರ್ ಸಿಂಗ್ ಹಾಗೂ ಫತೇ ಸಿಂಗ್. * ಮತ್ತೇ ಅವರು ಕಿರಿಯ ಪುತ್ರರನ್ನು ಚೋಟ್ಟಾ ಸಾಹಿಬ್ಜಾಡೆ ಎಂದು ಕರೆಯುತ್ತಿದ್ದರು, '6' ವರ್ಷದ ಸಾಹಿಬ್ಜಾದಾ ಫತೇ ಸಿಂಗ್, ಮತ್ತು ಎಂಟು ವರ್ಷದ ಶಾಹಿಬ್ಜಾದಾ ಜೋರಾವರ್ ಸಿಂಗ್ ಇವರು ಮೊಘಲರಿಗೆ ತಲೆಬಾಗಲು ನಿರಾಕರಿಸಿದರು, ಈ ಹಿನ್ನಲೆಯಿಂದಾಗಿ ಮೊಘಲರು ಇವರನ್ನು ಗುರುದ್ವಾರ ಫತೇಘರ್ ಸಾಹಿಬ್ ಸಾಹಿಬ್ಜಾಡೆಗಳಿಗೆ ಮರಣದಂಡನೆಯನ್ನು ಗುರುತಿಸಿದರು. ಸದ್ಯ ಇದು ಸಿರ್ಹಿಂದ್‌ನಲ್ಲಿದೆ. * ಗುರು ಗೋಬಿಂದ್ ಸಿಂಗ್ ಅವರ ಹಿರಿಯ ಪುತ್ರರನ್ನು ವಾದ ಸಾಹಿಬ್ಜಾಡೆ ಎಂದು ಕರೆಯುತ್ತಿದ್ದರು. ಬಾಬಾ ಅರ್ಜಿತ್ ಸಿಂಗ್ ಮತ್ತು ಜುಜಾರ್ ಸಿಂಗ್ 2ನೇ ಚಮ್ಕೌರ್ ಕದನದಲ್ಲಿ ಮೃತಪಟ್ಟರು. ಔರಂಗಜೇಬನ ಆದೇಶದ ಮೇರೆಗೆ ಗುರು ಗೋಬಿಂದ್ ಸಿಂಗ್ ನೇತೃತ್ವದ ಖಾಲ್ಸಾ ಸೈನ್ಯ ಮತ್ತು ಮೊಘಲ್ ಸೈನ್ಯದ ನಡುವೆ ಯುದ್ಧ ಜರುಗಿತು. ಈ ಯುದ್ಧವು 1704 ರ ಡಿಸೆಂಬರ್'ನಲ್ಲಿ ನಡೆದಿದೆ, ಈ ಯುದ್ಧವನ್ನು ಗುರು ಗೋಬಿಂದ್ ಸಿಂಗ್ ಅವರು ಜಫರ್ನಾಮ ಎಂದು ಕರೆದಿದ್ದಾರೆ. * ಸಾಹಿಬ್ಜಾಡೆಸ್ ಡಿಸೆಂಬರ್ 21 ಮತ್ತು ಡಿಸೆಂಬರ್ 26 ರ ನಡುವೆ ನಿಧನರಾದ, ಹಿನ್ನಲೆಯಿಂದಾಗಿ ಪ್ರತಿ ವರ್ಷವು, ಸಿಖ್ಖರು ಈ ಅವಧಿಯಲ್ಲಿ ಸಂಗತ್'ನ್ನು ಆಚರಿಸುತ್ತಾರೆ, ಮತ್ತು ಸಿಖ್ಖರು ಸ್ತೋತ್ರಗಳನ್ನು ಪಠಿಸುತ್ತಾರೆ ಮತ್ತು ಕೀರ್ತನೆಗಳನ್ನು ಮಾಡುತ್ತಾರೆ. ಪಂಜಾಬಿಯಲ್ಲಿ ಸಂಗತ್ ಎಂದರೆ ಕಂಪನಿ ಅಥವಾ ಸಂಘ ಎಂದರ್ಥ.