Job Description: * ಇತ್ತೀಚಿಗೆ ಚೀನಾದ ಗಗನನೌಕೆ 'ಚಾಂಗಿ-4'ನ ಲ್ಯಾಂಡರ್‌ ಮತ್ತು ರೋವರ್ 'ಯುಟು-2' ಚಂದ್ರನ ಮತ್ತೊಂದು ಭಾಗದ ಮೇಲ್ಮೈಯಲ್ಲಿ ಇಳಿದಿದೆ ಇದೀಗ ಅದು ಚಂದ್ರನ ಮೇಲ್ಮೈಯಲ್ಲಿ 1,003.9 ಮೀ.ಗಳಷ್ಟು ದೂರ ಕ್ರಮಿಸಿದೆ ಎಂದು ತಿಳಿಸಿದ್ದಾರೆ. * ಈ ರೋವರ್ 'ಯುಟು-2' ಕೆಲ ವಸ್ತುಗಳ ಚಿತ್ರಗಳನ್ನು ಸೆರೆ ಹಿಡಿದು ರವಾನಿಸಿದೆ, ಆದರೆ ಈ ಚಿತ್ರಗಳು ಅಸ್ಪಷ್ಟವಾಗಿವೆ ಎಂದು ಚೀನಾ ನ್ಯಾಷನಲ್ ಸ್ಪೇಸ್ ಅಡ್ಮಿನಿಸ್ಟ್ರೇಷನ್‌'ನ ವರದಿ ಮಾಡಿದೆ. * ಅನೇಕ ದೇಶಗಳು ಚಂದ್ರ ಗ್ರಹಕ್ಕೆ ಗಗನನೌಕೆಗಳನ್ನು ಕಳುಹಿಸಿವೆ. ಆದರೆ ಚೀನಾ ದೇಶವು ಚಂದ್ರನ ಮತ್ತೊಂದು ಭಾಗದ ಕುರಿತು ಅಧ್ಯಯನ ನಡೆಸುವ ಮಹತ್ವರ ಕಾರ್ಯಕ್ಕೆ ಮುಂದಾಗಿದೆ. * ಚೀನಾ ದೇಶವು ಈ ಹಿಂದೆ 2018ರ ಡಿಸೆಂಬರ್ 8ರಂದು ಈ 'ಚಾಂಗಿ-4' ಹೆಸರಿನ ಗಗನನೌಕೆಯನ್ನು ಉಡ್ಡಯನ ಮಾಡಿತ್ತು, ಮತ್ತು ಈ ಗಗನನೌಕೆ 2019ರ ಜನವರಿ 3ರಂದು ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಇಳಿಸಲಾಗಿದೆ ಎಂದು ತಿಳಿಸಿದೆ. * 'ಚಾಂಗಿ-4': ಇದೊಂದು ರೋಬೋಟಿಕ್ ಬಾಹ್ಯಾಕಾಶ ನೌಕೆಯಾಗಿದೆ, ಇದು ಚೀನಾದ ಚಂದ್ರನ ಪರಿಶೋಧನೆ ಕಾರ್ಯಕ್ರಮದ 2ನೇ ಹಂತದ ಭಾಗವಾಗಿದೆ. ಚೀನಾ ದೇಶವು 2019 ರ ಜನವರಿ. 03 ರಂದು ಚಂದ್ರನ ಮೇಲ್ಮೈಯಲ್ಲಿ ಲ್ಯಾಂಡಿಂಗ್ ಮಾಡಲಾಗಿದೆ ಎಂದು ತಿಳಿಸಿದೆ. * ಇದು ಬಾಹ್ಯಾಕಾಶ ನೌಕೆಯನ್ನು ಮೂಲತಃ ಚಾಂಗಿ- 3 ಗಾಗಿ ಬ್ಯಾಕ್‌ಅಪ್ ಆಗಿ ಇದನ್ನು ನಿರ್ಮಾಣ ಮಾಡಲಾಗಿದೆ ಮತ್ತು 2013 ರಲ್ಲಿ ಚಾಂಗಿ-3 ಯಶಸ್ವಿಯಾಗಿ ಇಳಿದ ನಂತರ, ಇದೀಗ ಚಾಂಗಿ-4 ರ ಸಂರಚನೆಯನ್ನು ಹೊಸ ವೈಜ್ಞಾನಿಕ ಮತ್ತು ಕಾರ್ಯಕ್ಷಮತೆಯ ಉದ್ದೇಶಗಳನ್ನು ಪೂರೈಸಲು ನಿರ್ಮಿಸಲಾಗಿದೆ, ಈ ಕಾರ್ಯಾಚರಣೆಗೆ ಚೈನೀಸ್ ಚಂದ್ರನ ದೇವತೆಯಾದ ಚಾಂಗಿ ಎಂದು ಹೆಸರಿಡಲಾಗಿದೆ ಎಂದು ತಿಳಿಸಿದ್ದಾರೆ. * ಚೀನಾ ರಾಷ್ಟ್ರವು ಚಂದ್ರನ ಪರಿಶೋಧನಾ ಕಾರ್ಯಕ್ರಮವು ಹೆಚ್ಚಿಸುತ್ತಿದೆ, ಇದೀಗ ಅದರ ತಾಂತ್ರಿಕ ಪ್ರಗತಿಯನ್ನು '4' ಹಂತಗಳಲ್ಲಿ ನಡೆಸಲು ಅಭಿವೃದ್ಧಿಪಡಿಸಿದೆ. ಮೊದಲನೇ ಹಂತ 2007 ರಲ್ಲಿ ಚಾಂಗಿ-1 ಕೇವಲ ಚಂದ್ರನ ಕಕ್ಷೆಯನ್ನು ತಲುಪಿತು, ಮತ್ತೇ 2010 ರಲ್ಲಿ ಚಾಂಗಿ- 2 ಪೂರ್ಣಗೊಳಿಸಿದೆ. ಮತ್ತೇ 2013 ರಲ್ಲಿ ಚಾಂಗಿ-3 ಹಾಗೂ 2019 ರಲ್ಲಿ ಚಾಂಗಿ-4 ಚಂದ್ರನ ಮೇಲೆ ಇಳಿಸಲಾಗಿದೆ, ಈ ಕಾರ್ಯಕ್ರಮವು 2030 ರ ದಶಕದಲ್ಲಿ ಸಿಬ್ಬಂದಿಯ ಚಂದ್ರನ ಲ್ಯಾಂಡಿಂಗ್'ನ್ನು ಸುಗಮಗೊಳಿಸುವ ಗುರಿಯನ್ನು ಹೊಂದಿದೆ ಎಂದಿದ್ದಾರೆ.