Job Description: * ಪ್ರಸ್ತುತ ರಾಜ್ಯದಲ್ಲಿ ಗ್ರಾಮ ಮಟ್ಟಗಳಲ್ಲಿ ಸರ್ಕಾರದ ಸವಲತ್ತುಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದಾಗಿ ಗ್ರಾಮ ಒನ್ ಹಾಗೂ ಜನಸೇವಕ ಕಾರ್ಯಕ್ರಮಗಳನ್ನು ಇದೇ ಜನವರಿ. 26 ರಂದು ಚಾಲನೆ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ. * ಕರ್ನಾಟಕ ರಾಜ್ಯವನ್ನು ದೇಶದ ನಂ.1 ರಾಜ್ಯವನ್ನಾಗಿ ಮಾರ್ಪಡಿಸಲು, ಇದೀಗ ಗ್ರಾಮ ಮಟ್ಟದಲ್ಲಿ ಸರ್ಕಾರದ ಸವಲತ್ತುಗಳನ್ನು ಜನರಿಗೆ ತಲುಪಿಸುವ ಸಲುವಾಗಿ ಗ್ರಾಮ ಒನ್ ಹಾಗೂ ಜನಸೇವಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. * ಪ್ರಸ್ತುತ ರಾಜ್ಯದಲ್ಲಿ ಈ ಜನ ಸೇವಕ ಉಪಕ್ರಮವನ್ನು ನಾಗರಿಕರ ಜೀವನವನ್ನು ಸರಾಗಗೊಳಿಸುವ ಸಲುವಾಗಿ ಸರ್ಕಾರಿ ಸೇವೆಗಳನ್ನು ನಾಗರಿಕರ ಮನೆ ಬಾಗಿಲಿಗೆ ತಲುಪಿಸಲು ನಿಟ್ಟಿನಲ್ಲಿ ಈ ಯೋಜನೆಯನ್ನು ಆರಂಭಿಸಲಾಗಿದೆ. ಈ ಉಪಕ್ರಮದ ಅಡಿಯಲ್ಲಿ ಜನಸೇವಕರು ಬೆಳಿಗ್ಗೆ 8 ರಿಂದ ರಾತ್ರಿ 8 ರವರೆಗೆ ಲಭ್ಯವಿರುತ್ತಾರೆ, ಆ ಸಮಯದಲ್ಲಿ ನಾಗರಿಕರು ಸೇವೆಗಳನ್ನು ಪಡೆಯಬಹುದು ಎಂದು ತಿಳಿಸಿದ್ದಾರೆ. * ಇದೀಗ ನಾಗರಿಕರು ಈ ದೂರವಾಣಿ ಸಂಖ್ಯೆಗೆ 080-44554455 ಕರೆ ಮಾಡುವ ಮೂಲಕ ಜನಸೇವಕರ ಭೇಟಿಯನ್ನು ಬುಕ್ ಮಾಡಬಹುದು, ಹಾಗೂ ಜನ ಸೇವಕರು ನಾಗರಿಕರಿಗೆ ಸಹಾಯ ಮಾಡಲು ಲಭ್ಯವಿರುತ್ತಾರೆ. ನಾಗರಿಕರು ಮೊಬೈಲ್ ಸಂಖ್ಯೆ ಅಥವಾ ವೆಬ್‌ಸೈಟ್ www.janasevaka.karnataka.gov.in ಮೂಲಕ ಜನಸೇವಕರ ಬೇಟಿಯಾಗಬಹುದು ಅಗತ್ಯವಿರುವ ಸೇವೆಗಳನ್ನು ಪಡೆಯಬಹುದಾಗಿದೆ. * ಈ ಹಿಂದೆ 02.03.2019 ರಂದು ರಾಜ್ಯದ ಬೆಂಗಳೂರು ಉತ್ತರದ ಟಿ.ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಜನಸೇವಕ ಯೋಜನೆಯನ್ನು ಪ್ರಾಯೋಗಿಕ ಯೋಜನೆಗೆ ಚಾಲನೆಯನ್ನು ನೀಡಲಾಗಿದೆ. ಮತ್ತೇ ಈ ಕಾರ್ಯಕ್ರಮವನ್ನು ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳು 2020 ರ ಫೆಬ್ರುವರಿ. 04 ರಂದು ರಾಜಾಜಿನಗರ, ಮಹದೇವಪುರ ಹಾಗೂ ಬೊಮ್ಮನಹಳ್ಳಿ ಎಂಬ ಮೂರು ವಿಧಾನಸಭಾ ಕ್ಷೇತ್ರಗಳಿಗೆ ವಿಸ್ತರಿಸಿದ್ದಾರೆ. ಮತ್ತೇ 2021 ರ ಜನವರಿ. 18 ರಂದು ಇದನ್ನು ಯಶವಂತಪುರ ವಿಧಾನಸಭಾ ಕ್ಷೇತ್ರಕ್ಕೆ ವಿಸ್ತರಿಸಲಾಗಿದೆ. ಈ ಉಪಕ್ರಮದ ಯೋಜನೆ ಅಡಿಯಲ್ಲಿ 58 ಸೇವೆಗಳನ್ನು ಜನಸೇವಕರ ಮೂಲಕ ಜನ ಸಾಮಾನ್ಯರಿಗೆ ನೀಡಲಾಗುತ್ತಿದೆ. ಪ್ರಸ್ತುತ ಇಲ್ಲಿಯವರೆಗೆ ಜನಸೇವಕ ಮೂಲಕ 95000 ಅಧಿಕ ಅರ್ಜಿಗಳು ಬಂದಿವೆ.