Job Description: * ಪ್ರಸ್ತುತ ಸಂಪುಟ ಸಭೆಯ ಘಟನಾವಳಿಗಳನ್ನು ನಕಲಿ ಆಡಿಯೋ ಮಾಡಿ ಪ್ರಸಾರ ಮಾಡಿರುವ ಹಿನ್ನಲೆಯಿಂದ ಮತ್ತು ದ್ವೇಷಪೂರಿತ ವಿಷಯವನ್ನು ಪ್ರಚಾರ ಮಾಡಿದ್ದಕ್ಕಾಗಿ ಸಾಮಾಜಿಕ ಜಾಲತಾಣ ಟ್ವಿಟರ್, ಫೇಸ್‌ಬುಕ್ ಮತ್ತು ಟೆಲಿಗ್ರಾಮ್‌ನಲ್ಲಿನ ಹಲವಾರು ಖಾತೆಗಳ ವಿರುದ್ಧ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಕ್ರಮವನ್ನು ಜರುಗಿಸಿದೆ. * ಕೆಲ ಸಾಮಾಜಿಕ ಜಾಲತಾಣಗಳ ಖಾತೆಗಳು ಹಾಗೂ ಚಾನೆಲ್‌ಗಳಲ್ಲಿ ಹಲವಾರು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿವೆ, ಇತ್ತೀಚಿನ ಮಾರ್ಫ್ ಮಾಡಿದ ವೀಡಿಯೊಗಳು ಸೇರಿದಂತೆ ಕ್ಯಾಬಿನೆಟ್ ಬ್ರೀಫಿಂಗ್'ನ್ನು ಸೂಪರ್‌ಪೋಸ್ ಮಾಡಿದ ಆಡಿಯೊವನ್ನು ತೋರಿಸಲಾಗಿದೆ, ಹಾಗೂ ಇವು ಸಮುದಾಯಗಳ ನಡುವೆ ಅಸಂಗತತೆಯನ್ನು ಸೃಷ್ಟಿಸಲು ಮುಂದಾಗುತ್ತಿವೆ ಎಂದು ಆರೋಪಿಸಿ ಹಲವಾರು ದೂರುಗಳನ್ನು ಸ್ವೀಕರಿಸಲಾಗಿದೆ ಎಂದು ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ತಿಳಿಸಿದೆ. * ಪ್ರಸ್ತುತ ಕೇಂದ್ರ ಸರ್ಕಾರವು 73 ಟ್ವಿಟರ್ ಹ್ಯಾಂಡಲ್‌ಗಳನ್ನು ಅಮಾನತುಗೊಳಿಸಲಾಗಿದೆ. 4 ಯೂಟ್ಯೂಬ್ ವೀಡಿಯೊಗಳನ್ನು ತೆಗೆದುಹಾಕಿದೆ, ಮತ್ತೇ '01' ಇನ್‌ಸ್ಟಾಗ್ರಾಮ್ ಅಕೌಂಟ್'ನ್ನು ಸಹ ತೆಗೆದುಹಾಕಲಾಗಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನದ ಸಚಿವ ರಾಜೀವ್ ಚಂದ್ರಶೇಖರ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಹಾಗೂ ಅವರ ವಿರುದ್ಧ ಕಾನೂನು ಕ್ರಮವನ್ನು ಜರುಗಿಸಲಾಗುವುದು ಮತ್ತು ಪರಿಶೀಲನೇ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. * ಅಷ್ಟೇ ಅಲ್ಲದೇ ಮಹಿಳೆಯರ ವಿರುದ್ಧ ಅವಹೇಳನಕಾರಿ ವಿಷಯಗಳಲ್ಲಿ ತೊಡಗಿರುವ ಟೆಲಿಗ್ರಾಂ ಚಾನೆಲ್‌ಗಳು ಹಾಗೂ ಫೇಸ್‌ಬುಕ್ ಖಾತೆಗಳ ವಿರುದ್ಧವೂ ಕ್ರಮ ತಗೆದುಕೊಳ್ಳಲಾಗಿದೆ. * ಇದೀಗ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯವು ಯೂಟ್ಯೂಬ್, ಫೇಸ್‌ಬುಕ್, ಟ್ವಿಟರ್ ಹಾಗೂ ಟೆಲಿಗ್ರಾಮ್‌ ಜಾಲತಾಣಗಳಿಗೆ ಪತ್ರ ಬರೆದಿದೆ. ತಕ್ಷಣದಿಂದಲೇ ಅವಹೇಳನಕಾರಿ ವಿಷಯಗಳಲ್ಲಿ ತೊಡಗಿರುವ ಜಾಲತಾಣಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.