Job Description: * ಪ್ರಸ್ತುತ ತಮಿಳುನಾಡು ರಾಜ್ಯದಲ್ಲಿ ಪ್ರಸಿದ್ಧಿ ಪಡೆದಿರುವ ಕೋಳಿ ಕಾಳಗಕ್ಕೆ ಇದೀಗ ಆ ರಾಜ್ಯದ ಕೋರ್ಟ್‌ ಅನುಮತಿ ನೀಡಿದೆ. ಇದೇ ತಿಂಗಳು 17ರಂದು ತಮಿಳುನಾಡು ರಾಜ್ಯದ ಥೇಣಿ ಜಿಲ್ಲೆಯ ಉತ್ತಮಪಾಲೈಯಂ ಎಂಬ ಗ್ರಾಮದಲ್ಲಿ ಈ ಕೋಳಿ ಕಾಳಗ ನಡೆಯಲಿದೆ ಎಂದು ತಿಳಿದು ಬಂದಿದೆ. * ಈ ರಾಜ್ಯದಲ್ಲಿ ಪ್ರತಿವರ್ಷವು ಪೊಂಗಲ್ ಹಬ್ಬದ ಹಿನ್ನೆಲೆಯಿಂದಾಗಿ ಈ ಕೋಳಿ ಕಾಳಗವನ್ನು ನಡೆಸಲಾಗುತ್ತದೆ, ಇತ್ತೀಚಿಗೆ ತಮಿಳುನಾಡು ರಾಜ್ಯದ ಥೇಣಿ ಜಿಲ್ಲೆಯ ಉತ್ತಮಪಾಳ್ಯ ಎಂಬ ಗ್ರಾಮದಲ್ಲಿ ಹುಂಜಗಳ ಕಾಲಿಗೆ ಬ್ಲೇಡ್‌ಗಳನ್ನು ಕಟ್ಟಿ ಕಾಳಗವನ್ನು ನಡೆಸಲಾಗುತ್ತದೆ, ಆದರೆ ಪಕ್ಷಿಗಳ ಕಾಲಿಗೆ ಬ್ಲೇಡುಗಳನ್ನು ಕಟ್ಟುವುದು ಹೀನಾಯವಾಗಿದೆ ಎಂದು ಕೆಲವರು ಹೈಕೋರ್ಟ್‌ಗೆ ಅರ್ಜಿಯನ್ನು ಸಲ್ಲಿಸಿದ್ದರು. ನ್ಯಾಯಾಧೀಶ ಜಿ.ಆರ್.ಸ್ವಾಮಿನಾಥನ್ ಅವರು ಈ ಅರ್ಜಿಯನ್ನು ವಿಚಾರಣೆ ನಡೆಸಿ ಕೋಳಿ ಕಾಳಗದ ಸಂದರ್ಭದಲ್ಲಿ ಹುಂಜಗಳ ಕಾಲಿಗೆ ಬ್ಲೇಡ್ ಅಥವಾ ಚಾಕುಗಳನ್ನು ಕಟ್ಟಬಾರದು ಎಂದು ತಿಳಿಸಿದ್ದಾರೆ, ಹಾಗೂ ಕಾಳಗ ನಡೆಸಲು ಅನುಮತಿಯನ್ನು ನೀಡಿದ್ದಾರೆ. * ಇದೀಗ ತಮಿಳುನಾಡು ಮತ್ತು ಕರ್ನಾಟಕ ರಾಜ್ಯದ ಹಲವು ಪ್ರದೇಶಗಳಲ್ಲಿ ಈ ಕೋಳಿ ಕಾಳಗವನ್ನು ನಡೆಸಲಾಗುತ್ತದೆ.