Job Description: * ಪ್ರತಿ ವರ್ಷವು ಜನವರಿ 9ರಂದು ದೇಶದಾದ್ಯಂತ ಪ್ರವಾಸಿ ಭಾರತೀಯ ದಿವಸ್ (Pravasi Bharatiya Divas)ವನ್ನು ಆಚರಣೆ ಮಾಡಲಾಗುತ್ತದೆ. ಪ್ರಸ್ತುತ ಈ ದಿನವು ದೇಶದ ಅಭಿವೃದ್ಧಿಗೆ ವಿದೇಶಗಳಲ್ಲಿನ ಅನಿವಾಸಿ ಭಾರತೀಯರು ನೀಡುವ ಕೊಡುಗೆಗಳನ್ನೂ ಸ್ಮರಿಸುವ ದಿನವಾಗಿದೆ. * ಭಾರತದಲ್ಲಿ ಜನಿಸಿ ಉದ್ಯೋಗವನ್ನು ಹುಡುಕಿಕೊಂಡು ತನ್ನ ಹುಟ್ಟೂರು ಬಿಟ್ಟು ಹೋಗಿ ಬೇರೆ ದೇಶಗಳಲ್ಲಿ ಕೆಲಸ ಮಾಡುತ್ತಿದ್ದರು, ನನ್ನ ದೇಶ ಭಾರತಕ್ಕೆ ಏನಾದರೂ ಸಂಕಷ್ಟ ಎದುರಾದಾಗ ದೇಶಕ್ಕೆ ಸಹಾಯ ನೀಡಲು ತಮ್ಮ ದುಡಿಮೆಯ ಒಂದಿಷ್ಟು ಭಾಗವನ್ನು ದೇಶದ ಅಭಿವೃದಿಗಾಗಿ ಮೀಸಲಿಡುತ್ತಾರೆ ಈ ಹಿನ್ನಲೆಯಿಂದಾಗಿ ಭಾರತ ಸರ್ಕಾರವು ವರ್ಷದಲ್ಲಿ ಒಂದು ದಿನವನ್ನು ಅನಿವಾಸಿ ಭಾರತೀಯರಿಗಾಗಿ 'ಪ್ರವಾಸಿ ಭಾರತೀಯ ದಿವಸ್‌' ಎಂದು ಮೀಸಲಿಟ್ಟಿದೆ. * ಈ ಹಿಂದೆ 1915ರ ಜನೆವರಿ. 09 ರಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ವಾಪಸ್‌ ಆಗಿದ್ದರು, ಇವರು ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರವನ್ನು ವಹಿಸಿಕೊಂಡಿದ್ದರು. ಪ್ರಸ್ತುತ ಭಾರತ ಸರ್ಕಾರವು ಗಾಂಧೀಜಿಯವರ ಸೇವೆಯನ್ನು ನೆನಪಿಸುವ ಉದ್ದೇಶದಿಂದ ಜನೆವರಿ. 09 ನ್ನು 'ಪ್ರವಾಸಿ ಭಾರತೀಯ ದಿವಸ್' ಎಂದು ಆಚರಣೆ ಮಾಡಲು ಘೋಷಣೆ ಮಾಡಿದೆ. * ಪ್ರಸ್ತುತ ಭಾರತ ದೇಶದಲ್ಲಿ 2003ರಿಂದ 'ಪ್ರವಾಸಿ ಭಾರತೀಯ ದಿವಸ್‌' ವನ್ನು ಆಚರಣೆ ಮಾಡಲಾಗುತ್ತಿದೆ. ಈ ದಿವಸ್‌' ವನ್ನು ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಭಾರತೀಯ ವಾಣಿಜ್ಯ ಮಂಡಳಿ ಒಕ್ಕೂಟ, ಭಾರತೀಯ ಕೈಗಾರಿಕಾ ಒಕ್ಕೂಟ ಹಾಗೂ ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವಾಲಯದ ಸಹಭಾಗಿತ್ವದಲ್ಲಿ ಆಯೋಜಿಸಲಾಗುತ್ತದೆ. * ಈ ಮೊದಲು 'ಪ್ರವಾಸಿ ಭಾರತೀಯ ದಿವಸ್‌' ವನ್ನು ಪ್ರತಿ ವರ್ಷಕ್ಕೊಮ್ಮೆ ಆಚರಣೆ ಮಾಡಲಾಗುತ್ತಿತ್ತು, ಇದೀಗ ಈ ಆಚರಣೆಯನ್ನು 2015ರ ಬಳಿಕ ಎರಡು ವರ್ಷಕ್ಕೊಮ್ಮೆ ಆಯೋಜಿಸಲಾಗುತ್ತಿದೆ. ಭಾರತ ಸರ್ಕಾರವು ಈ ದಿನದಂದು ಅನಿವಾಸಿ ಭಾರತೀಯರಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. * ಪ್ರತಿ ವರ್ಷದ ಈ 'ಪ್ರವಾಸಿ ಭಾರತೀಯ ದಿವಸ್‌'ದ ಈ ಸಮಾವೇಶವನ್ನು ನಿರ್ದಿಷ್ಟ ಪರಿಕಲ್ಪನೆಯೊಂದಿಗೆ ಆಯೋಜಿಸಲಾಗುತ್ತದೆ. ಕಳೆದ ಬಾರಿಯ ಕಾರ್ಯಕ್ರಮವನ್ನು 'ಆತ್ಮ ನಿರ್ಭರ್ ಭಾರತ್'ದಲ್ಲಿ ವಲಸೆಗಾರರ ಪಾತ್ರ' ಎಂಬ ಪರಿಕಲ್ಪನೆಯ ಅಡಿಯಲ್ಲಿ ಆಯೋಜಿಸಲಾಗಿತ್ತು. * ದೇಶದಲ್ಲಿ ಮೊದಲ ಬಾರಿ ಈ ಸಮಾವೇಶವನ್ನು 2003ರಲ್ಲಿ ದೆಹಲಿಯಲ್ಲಿ ನಡೆಸಲಾಗಿತ್ತು, ಮತ್ತೇ ಇದನ್ನು 2019ರಲ್ಲಿ ಕೋವಿಡ್‌-19 ಸಾಂಕ್ರಾಮಿಕ ರೋಗದಿಂದಾಗಿ ವರ್ಚುವಲ್ ಮೂಲಕ ಸಮಾರಂಭ ನಡೆಸಲಾಗಿತ್ತು, ಇಲ್ಲಿಯವರೆಗೆ ಒಟ್ಟಾರೆ 16 ಸಮಾವೇಶಗಳು ನಡೆದಿವೆ. * ಪ್ರವಾಸಿ ಭಾರತೀಯ ದಿವಸ್: ಜನವರಿ 9 ರಂದು ಭಾರತೀಯ ಗಣರಾಜ್ಯದ ಭಾರತೀಯ ಸಮುದಾಯದ ಕೊಡುಗೆಯನ್ನು ಗುರುತಿಸಲು ಈ ದಿನವನ್ನು ಆಚರಿಸಲಾಗುತ್ತದೆ.