Job Description: * ಇತ್ತೀಚಿಗೆ ಚೀನಾ ವಿದೇಶಾಂಗ ಸಚಿವ ವಾಂಗ್‌ ಯಿ ಹಾಗೂ ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸೆ ಅವರು ಭೇಟಿಯಾಗಿ ಜೊತೆಗೆ ಪ್ರವಾಸೋದ್ಯಮ, ಹೂಡಿಕೆಯನ್ನು ಉತ್ತೇಜಿಸುವ ಮತ್ತು ಕೋವಿಡ್‌-19 ವಿರುದ್ಧ ಹೋರಾಡುವ ವಿಷಯಗಳ ಬಗ್ಗೆ ಮಾತುಕತೆ ನಡೆಸಿದರು. * ಈ ಚೀನಾ ಮತ್ತು ಶ್ರೀಲಂಕಾ ದೇಶಗಳ ನಡುವಿನ ರಾಜತಾಂತ್ರಿಕ ಬಾಂಧವ್ಯದ ಅಂಗವಾಗಿ 65ನೇ ವರ್ಷಾಚರಣೆಯ ಸಂದರ್ಭದಲ್ಲಿ ಉಭಯ ದೇಶಗಳ ನಾಯಕರ ಭೇಟಿಯಾಗಿ ಮಾತುಕತೆಯನ್ನು ನಡೆಸಿದ್ದಾರೆ. * ಈ ಮೊದಲು ಚೀನಾ ದೇಶದ ಸಾವಯವ ರಸಬೊಬ್ಬರ ಆಮದಿಗೆ ತೀವ್ರ ಪ್ರತಿಭಟನೆ ವ್ಯಕ್ತವಾದ ಹಿನ್ನಲೆ ಈ ಉಭಯ ದೇಶಗಳ ಸಂಬಂಧವು ಒತ್ತಡಕ್ಕೆ ಸಿಲುಕಿತ್ತು.‌ ಚೀನಾ ದೇಶಕ್ಕೆ ಹಣ ಪಾವತಿಗೆ ದೇಶದ ವಾಣಿಜ್ಯ ಹೈಕೋರ್ಟ್‌ ತಡೆ ನೀಡಿತ್ತು, ಆದರೆ ಇದೀಗ ಚೀನಾ ವಿದೇಶಾಂಗ ಸಚಿವ ವಾಂಗ್ ಅವರು ಭೇಟಿ ನೀಡಿರುವ ಹಿನ್ನಲೆಯಿಂದಾಗಿ, ಶ್ರೀಲಂಕಾದ ಪೀಪಲ್ಸ್ ಬ್ಯಾಂಕ್‌ ಚೀನಾ ದೇಶಕ್ಕೆ 6.9 ದಶಲಕ್ಷ ಡಾಲರ್‌ ಹಣವನ್ನು ಬಿಡುಗಡೆ ಮಾಡಿದೆ ಎಂದು ತಿಳಿಸಿದ್ದಾರೆ. * ಈ ಹಿಂದೆ 2017 ರ ಡಿಸೆಂಬರ್. 18 ರಂದು, ಚೀನಾ ಮತ್ತು ಶ್ರೀಲಂಕಾ ರಾಷ್ಟ್ರಗಳ ನಡುವಿನ ಅಕ್ಕಿ ಮತ್ತು ರಬ್ಬರ್ ಒಪ್ಪಂದಕ್ಕೆ ಸಹಿ ಹಾಕಿದ 65 ನೇ ವಾರ್ಷಿಕೋತ್ಸವದ ಆಚರಣೆಯನ್ನು ಚೀನಾ ರಾಯಭಾರ ಕಚೇರಿ BMICH ನಲ್ಲಿ ನಡೆಸಲಾಗಿದೆ. * ಸನ್ಮಾನ್ಯ ಸ್ಪೀಕರ್ ಕರು ಜಯಸೂರ್ಯ ಅವರು ಈ ಹಿಂದೆ ಚೀನಾ ಹಾಗೂ ಶ್ರೀಲಂಕಾ ದೇಶಗಳು ಅಕ್ಕಿ ಮತ್ತು ರಬ್ಬರ್ ಒಪ್ಪಂದಕ್ಕೆ ಸಹಿ ಹಾಕಿದ ಇತಿಹಾಸವನ್ನು ನೆನಪಿಸಿಕೊಂಡರು ಮತ್ತು ಒಪ್ಪಂದವು ಚೀನಾ ಮತ್ತು ಶ್ರೀಲಂಕಾ ನಡುವಿನ ಸ್ನೇಹದ ಒಪ್ಪಂದವಾಗಿದೆ ಎಂದು ತಿಳಿಸಿದರು. * ಚೀನಾ ಮತ್ತು ಶ್ರೀಲಂಕಾ ನಡುವಿನ ಈ ಅಕ್ಕಿ ಮತ್ತು ರಬ್ಬರ್ ಒಪ್ಪಂದವು 60 ವರ್ಷಗಳ ಹಿಂದೆ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿದಾಗಿನಿಂದಲೂ ಎರಡು ದೇಶಗಳು ಪರಸ್ಪರ ಬೆಂಬಲ ಮತ್ತು ಸಹಾಯ ಮಾಡುತ್ತಿವೆ ಎಂದಿದ್ದಾರೆ. ಪ್ರಸ್ತುತ ಸನ್ಮಾನ್ಯ ಸ್ಪೀಕರ್ ಮತ್ತು ಮೇಡಂ ಪಾಂಗ್ ಅವರು ಎರಡು ದೇಶಗಳ ಮನೆತನದ ವಂಶಸ್ಥರಿಗೆ ಸ್ಮರಣಾರ್ಥ ಫಲಕಗಳನ್ನು ನೀಡಿ ಗೌರವಿಸಿದರು, ಹಾಗೆ ಈ ದೇಶಗಳ ನಡುವಿನ ಸ್ನೇಹವು ಹೊಸ ಚೈತನ್ಯವನ್ನು ತರಲಿ ಎಂದು ಆಶಿಸಿದ್ದಾರೆ.