Job Description: * ಪ್ರಸ್ತುತ ಭಾರತದ ರೋಹನ್ ಬೋಪಣ್ಣ ಹಾಗು ರಾಮ್‌ಕುಮಾರ್ ರಾಮನಾಥನ್ ಅವರು ಅಡಿಲೇಡ್ ಇಂಟರ್‌ನ್ಯಾಷನಲ್ ಟೆನಿಸ್ ಟೂರ್ನಿಯ ಡಬಲ್ಸ್ ವಿಭಾಗದ ಪ್ರಶಸ್ತಿಯನ್ನು ಜಯಿಸಿದ್ದಾರೆ, ಈ ಜೋಡಿಯು ಮೊದಲ ಬಾರಿ ಜೊತೆಯಾಗಿ ಟೆನಿಸ್ ಮೈದಾನಕ್ಕೆ ಇಳಿದು ಫೈನಲ್ ಪಂದ್ಯದಲ್ಲಿ ಇವಾನ್ ದೊಡಿಗ್ ಹಾಗೂ ಮಾರ್ಸೆಲೊ ಮೆಲೊ ಅವರನ್ನು ಸೋಲಿಸಿದ್ದಾರೆ. * ಕರ್ನಾಟಕದ ರೋಹನ್ ಬೋಪಣ್ಣ ಅವರಿಗೆ ಡಬಲ್ಸ್‌ ವಿಭಾಗದಲ್ಲಿ ಒಲಿದು ಬಂದ 20ನೇ ಡಬಲ್ಸ್‌ ಕಿರೀಟ ಇದಾಗಿದೆ, ಹಾಗೂ ಇದು ರಾಮ್‌ಕುಮಾರ್ ಅವರಿಗೆ ಮೊದಲ ಪ್ರಶಸ್ತಿಯಾಗಿದೆ. ಈ ಹಿಂದೆ 2018ರಲ್ಲಿ ನಡೆದ ಹಾಲ್‌ ಆಫ್ ಫೇಮ್ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ರಾಮ್‌ಕುಮಾರ್ ಅವರು ರನ್ನರ್ ಅಪ್ ಆಗಿ ಹೊರ ನಡೆದಿದ್ದರು. * ಇದೀಗ ಭಾರತದ ರೋಹನ್‌-ರಾಮ್‌ಕುಮಾರ್ ಜೋಡಿಯು ಅಡಿಲೇಡ್ ಇಂಟರ್‌ನ್ಯಾಷನಲ್ ಟೆನಿಸ್ ಟೂರ್ನಿಯ ಡಬಲ್ಸ್ ವಿಭಾಗದ ಪ್ರಶಸ್ತಿ ಹಾಗೂ 13 ಲಕ್ಷ 88,000 ರೂ. ಮೊತ್ತವನ್ನು ಪಡೆಯಲಿದ್ದಾರೆ. * ಅಡಿಲೇಡ್ ಇಂಟರ್‌ನ್ಯಾಶನಲ್: ಇದೊಂದು ಮೆಮೋರಿಯಲ್ ಡ್ರೈವ್ ಟೆನಿಸ್ ಸೆಂಟರ್‌ನಲ್ಲಿನ ದಕ್ಷಿಣ ಆಸ್ಟ್ರೇಲಿಯಾದ ಅಡಿಲೇಡ್‌ನಲ್ಲಿರುವ ಹೊರಾಂಗಣ ಹಾರ್ಡ್ ಕೋರ್ಟ್‌ಗಳಲ್ಲಿ ಆಡಲಾಗುವ ವೃತ್ತಿಪರ ಟೆನಿಸ್ ಪಂದ್ಯಾವಳಿಯಾಗಿದೆ. ಈ ಪಂದ್ಯಾವಳಿಯನ್ನು ಜನವರಿ ಅಥವಾ ಫೆಬ್ರವರಿಯಲ್ಲಿ ನಡೆಸಲಾಗುತ್ತದೆ ಮತ್ತು WTA ಮತ್ತು ATP ಪ್ರವಾಸಗಳ ಭಾಗವಾಗಿದೆ. * ಈ ಹಿಂದೆ 2019 ರ ಫೆಬ್ರವರಿಯಲ್ಲಿ, ದಕ್ಷಿಣ ಆಸ್ಟ್ರೇಲಿಯನ್ ಸರ್ಕಾರವು ಮೆಮೋರಿಯಲ್ ಡ್ರೈವ್ ಟೆನಿಸ್ ಸೆಂಟರ್ ಮೇಲೆ ಮೇಲಾವರಣ-ಛಾವಣಿಯ ರಚನೆಯನ್ನು ನಿರ್ಮಿಸಲು 10 ಮಿಲಿಯನ್ ಹೂಡಿಕೆ ಮಾಡುವುದಾಗಿ ಘೋಷಣೆ ಮಾಡಿತು, ಟೆನಿಸ್ ಆಸ್ಟ್ರೇಲಿಯಾ ದೇಶದೊಂದಿಗೆ '5' ವರ್ಷಗಳ ಒಪ್ಪಂದವನ್ನು ಮಾಡಿಕೊಂಡಿತು ತದನಂತರ ಹೊಸ ಪಂದ್ಯಾವಳಿಯನ್ನು ಅದೇ ವರ್ಷದ ನಂತರ ಪ್ರಾರಂಭಿಸಲಾಯಿತು, ಆಗಿನ ವಿಶ್ವದ 4ನೇ ಕ್ರಮಾಂಕ ಮತ್ತು '2' ಬಾರಿ ಗ್ರ್ಯಾಂಡ್-ಸ್ಲಾಮ್ ಚಾಂಪಿಯನ್ ಆಗಿರುವ ಸಿಮೋನಾ ಹ್ಯಾಲೆಪ್ ಅವರು 2020 ರ ಅಡಿಲೇಡ್ ಇಂಟರ್‌ನ್ಯಾಶನಲ್‌ನಲ್ಲಿ ಆಡುವ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದಾರೆ. * ಇದೀಗ ಫೆಬ್ರವರಿ 22-27 ರಿಂದ ಆಸ್ಟ್ರೇಲಿಯನ್ ಓಪನ್ ನಂತರ( Women's Tennis Association) WAT ಪಂದ್ಯಾವಳಿ ಮಾತ್ರ ನಡೆಯಲಿದೆ.