Job Description: * ಇತ್ತೀಚಿಗೆ ಇಂಡೊ-ಪೆಸಿಫಿಕ್ ವಲಯದಲ್ಲಿ ಚೀನಾ ದೇಶದ ಮಿಲಿಟರಿ ಮತ್ತು ಆರ್ಥಿಕ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳುತ್ತಿದೆ ಇದರ ನಡುವೆ ಇದೀಗ ಆಸ್ಟ್ರೇಲಿಯಾ ಮತ್ತು ಜಪಾನ್ ದೇಶಗಳು ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿವೆ ಈ ವಲಯದಲ್ಲಿ ಸ್ಥಿರತೆಯನ್ನು ಕಾಪಾಡಲು ಈ ಐತಿಹಾಸಿಕ ಒಪ್ಪಂದವನ್ನು ಮಾಡಿಕೊಂಡಿವೆ. * ಈ ಒಪ್ಪಂದದ ಅಡಿಯಲ್ಲಿ ಆಸ್ಟ್ರೇಲಿಯಾ ರಕ್ಷಣಾ ಪಡೆ ಹಾಗೂ ಜಪಾನ್‌ನ ರಕ್ಷಣಾ ಪಡೆಗಳು ಹೆಚ್ಚಿನ ಕಾರ್ಯನಿರ್ವಹಣೆಗೆ ಸಹಾಯವಾಗಲಿದೆ ಎಂದು ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಅವರು ತಿಳಿಸಿದ್ದಾರೆ. * ಈ ಐತಿಹಾಸಿಕ ಒಪ್ಪಂದವನ್ನು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಹಾಗೂ ಜಪಾನ್ ಪ್ರಧಾನಿ ಫುಮಿಯೊ ಕಿಷಿಡಾ ಅವರು ವರ್ಚುವಲ್ ವೇದಿಕೆಯ ಮೂಲಕ ಜರುಗಿದ ಶೃಂಗಸಭೆಯಲ್ಲಿ 'ರೆಸಿಪ್ರೋಕಲ್ ಅಕ್ಸೆಸ್ ಎಗ್ರಿಮೆಂಟ್(RAA) ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಪ್ರಸ್ತುತ ಜಪಾನ್ ದೇಶವು ಬೇರೆ ಬೇರೆ ದೇಶಗಳೊಂದಿಗೆ ಹೊಂದಿರುವ 2ನೇ ಮಿಲಿಟರಿ ಒಪ್ಪಂದ ಇದಾಗಿದೆ, ಈ ಹಿಂದೆ 1960ರಲ್ಲಿ ಜಪಾನ್ ಮತ್ತು ಅಮೆರಿಕ ದೇಶಗಳ ನಡುವೆ ಮಿಲಿಟರಿ ಒಪ್ಪಂದವಾಗಿತ್ತು, ಇದೀಗ ಇದು ಜಪಾನ್ ದೇಶದ 2ನೇ ಒಪ್ಪಂದವಾಗಿದೆ. * ಆಸ್ಟ್ರೇಲಿಯಾ-ಜಪಾನ್ ದೇಶಗಳ ಈ ಒಪ್ಪಂದವು ಉಭಯ ದೇಶಗಳ ನಡುವಿನ ರಕ್ಷಣಾ ಕಾರ್ಯಾಚರಣೆಯನ್ನು ಮತ್ತಷ್ಟು ಬಲಿಷ್ಠಗೊಳಿಸಲಿದೆ. ಪ್ರಸ್ತುತ ಜಪಾನ್ ಪ್ರಧಾನಿ ಕಿಷಿಡಾ ಅವರು ತಿಳಿಸಿರುವ ಪ್ರಕಾರ ಶೀಘ್ರದಲ್ಲಿಯೇ ಬ್ರಿಟನ್ ಹಾಗೂ ಫ್ರಾನ್ಸ್ ದೇಶಗಳ ಜೊತೆಗೆ ಇದೇ ರೀತಿಯ ರಕ್ಷಣಾ ಒಪ್ಪಂದವನ್ನು ಮಾಡಿಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.