Job Description: * ಇತ್ತೀಚೆಗೆ ಫ್ರೆಂಚ್ ಸರ್ಕಾರವು ಆರೋಗ್ಯದ ಮಸೂದೆಯನ್ನು ಅಂಗೀಕರಿಸಿದೆ. ಇದರ ಅನುಸಾರ COVID-19 ಲಸಿಕೆ ಪಾಸ್ ಒದಗಿಸಲಾಗಿದೆ. ಈ ಮಸೂದೆಯ ಅಡಿಯಲ್ಲಿ ಸಾಮಾನ್ಯ ಜನರು ಸಾಂಸ್ಕೃತಿಕ ಸ್ಥಳಗಳು, ರೆಸ್ಟೋರೆಂಟ್‌ಗಳು, ಬಾರ್‌ಗಳು ಹಾಗೂ ಇನ್ನಿತರ ಸಾರ್ವಜನಿಕ ಸಾರಿಗೆಗೆ ಪ್ರವೇಶವನ್ನು ಪಡೆಯಲು ಲಸಿಕೆ ಹಾಕಿದಾಗ ಅವರು 12 ವರ್ಷಕ್ಕಿಂತ ಹೆಚ್ಚು ವಯಸ್ಸಿನವರು ಎಂದು ಸಾಬೀತುಪಡಿಸಬೇಕು. * ಈ ಮೊದಲು ಫ್ರಾನ್ಸ್‌ ದೇಶದಲ್ಲಿನ ಸಾರ್ವಜನಿಕ ಸ್ಥಳಗಳಿಗೆ ಪ್ರಯಾಣ ಬೆಳೆಸಲು ಕೋವಿಡ್-19 ನೆಗೆಟಿವ್ ಪರೀಕ್ಷೆ ಸಾಕಾಗಿತ್ತು. ಆದರೆ ಜರ್ಮನಿಯ 2G ನಿಯಮಗಳಂತೆಯೇ ಫ್ರಾನ್ಸ್ ಕೋವಿಡ್-19 ಪಾಸ್'ನ್ನು ಸಾರ್ವಜನಿಕವಾಗಿಯೂ ತಯಾರಿಸಬೇಕು. * ಪ್ರಸ್ತುತ ಫ್ರೆಂಚ್ ವ್ಯಾಕ್ಸಿನ್ ಪಾಸ್ ಜರ್ಮನಿಯ 2G ನಿಯಮಗಳನ್ನೂ ಹೋಲುತ್ತದೆ, ಇದೀಗ ಜರ್ಮನಿಯಲ್ಲಿ ಲಸಿಕೆ ಹಾಕಿಸಿಕೊಂಡ ಮತ್ತು ಕೋವಿಡ್-19 ಚೇತರಿಸಿಕೊಂಡ ವ್ಯಕ್ತಿಗಳನ್ನು 2G ಎಂದು ಕರೆಯುತ್ತಾರೆ. ಪ್ರಸ್ತುತ ಈ 2G ವ್ಯಕ್ತಿಗಳು ಮಾತ್ರ ಥಿಯೇಟರ್‌ಗಳು, ಈಜುಕೊಳ, ವಸ್ತುಸಂಗ್ರಹಾಲಯಗಳು, ಹೇರ್ ಡ್ರೆಸ್ಸಿಂಗ್, ಬ್ಯೂಟಿ ಸಲೂನ್‌ಗಳು, ಡ್ಯಾನ್ಸ್ ಸ್ಟುಡಿಯೋಗಳು, ಫಿಟ್‌ನೆಸ್ ಸೆಂಟರ್‌ಗಳು ಇನ್ನು ಅನೇಕ ಸ್ಥಳಗಳಿಗೆ ಪ್ರವೇಶ ಪಡೆಯಬಹುದಾಗಿದೆ ಎಂದಿದ್ದಾರೆ. * ಇದೀಗ ಇಟಲಿ ಸರ್ಕಾರವು 50 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳಿಗೆ COVID-19 ಲಸಿಕೆಗಳನ್ನು ಕಡ್ಡಾಯಗೊಳಿಸಿದೆ. * ಪ್ರಸ್ತುತ ಐರೋಪ್ಯ ದೇಶಗಳು ಗಡಿಯಾಚೆ ಪ್ರಯಾಣಿಸುತ್ತಿದ್ದವರಿಗೆ ಸಂಪೂರ್ಣವಾಗಿ ಲಸಿಕೆಯನ್ನು ಪಡೆದವರಿಗೆ 'ಎ', ನಕಾರಾತ್ಮಕ COVID-19 ಪರೀಕ್ಷೆಯ ಪುರಾವೆಗಳನ್ನು ತೋರಿಸಿದವರಿಗೆ 'ಬಿ', COVID-19 ನಿಂದ ಚೇತರಿಸಿಕೊಂಡವರಿಗೆ 'ಸಿ' ಎಂಬ ಆರೋಗ್ಯ ಪಾಸ್'ನ್ನು ನೀಡುತ್ತಿವೆ. ಇದೀಗ ಡಿಜಿಟಲ್ ರೂಪದಲ್ಲಿ ಆರೋಗ್ಯ ಪಾಸ್ EU ಡಿಜಿಟಲ್ COVID-19 ಪ್ರಮಾಣಪತ್ರವಾಗಿದೆ. ಈ ಆರೋಗ್ಯ ಪಾಸ್'ನ್ನು ಉಚಿತವಾಗಿ ರಾಷ್ಟ್ರೀಯ ಭಾಷೆಯಲ್ಲಿ ಪಡೆಯಬಹುದು, ಈ ಪಾಸ್ QR ಕೋಡ್‌ನೊಂದಿಗೆ ಲಭ್ಯವಾಗಲಿದೆ, ಇದು ಎಲ್ಲಾ EU ದೇಶಗಳಲ್ಲಿ ಮಾನ್ಯವಾಗಿರುತ್ತದೆ.