Job Description: * ಪ್ರಸ್ತುತ ಕೇಂದ್ರ ಸಚಿವ ಸಂಪುಟವು ಹಸಿರು ಇಂಧನ ಕಾರಿಡಾರ್‌ನಡಿ 12,000 ಕೋಟಿ ರೂ. ವೆಚ್ಚದ 2ನೇ ಹಂತದ ಯೋಜನೆಗೆ ಅನುಮೋದನೆ ನೀಡಿದೆ. ಈ ಯೋಜನೆಯು ವಿದ್ಯುತ್‌ ಗ್ರಿಡ್‌ಗಳ ಏಕೀಕರಣ ಮತ್ತು 20 GW ವಿದ್ಯುತ್‌ ಉತ್ಪಾದನೆ ಮಾಡುವ ಪ್ರಾಜೆಕ್ಟ್‌ಗಳನ್ನು ಸ್ಥಳಾಂತರ ಮಾಡುವದನ್ನು ಒಳಗೊಂಡಿದೆ. * ಈ ಹಸಿರು ಇಂಧನ ಕಾರಿಡಾರ್‌'ನ 2ನೇ ಹಂತದ ಯೋಜನೆಯಡಿ ಸುಮಾರು 10,750 ಕಿ.ಮೀ. ವಿದ್ಯುತ್‌ ಪ್ರಸರಣ ಮಾರ್ಗವನ್ನು ಸಂಪರ್ಕಿಸುವ ಮತ್ತು 27,500 MW ವಿದ್ಯುತ್‌ ಪರಿವರ್ತನೆ ಸಾಮರ್ಥ್ಯದ ಸಬ್‌ಸ್ಟೇಷನ್‌ಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದ್ದಾರೆ. * ಈ ಹಸಿರು ಇಂಧನ ಕಾರಿಡಾರ್‌'ನ 2ನೇ ಹಂತದ ಯೋಜನೆಯನ್ನು 2021-22 ರಿಂದ 2025-26ನೇ ಹಣಕಾಸು ವರ್ಷಗಳ ವೇಳೆಗೆ ಕರ್ನಾಟಕ, ಗುಜರಾತ್, ಹಿಮಾಚಲಪ್ರದೇಶ, ಕೇರಳ, ರಾಜಸ್ಥಾನ, ತಮಿಳುನಾಡು ಹಾಗೂ ಉತ್ತರಪ್ರದೇಶ ರಾಜ್ಯಗಳಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತದೆ. ಈ ಯೋಜನೆಯ ವೆಚ್ಚದಲ್ಲಿ ಕೇಂದ್ರ ಸರ್ಕಾರವು ಶೇ 33ರಷ್ಟು ಹಣವನ್ನು ಭರಿಸಲಿದೆ ಎಂದು ಕೇಂದ್ರ ಇಂಧನ ಸಚಿವಾಲಯವು ವರದಿ ಮಾಡಿದೆ. * ಇದೇ ಯೋಜನೆಯ ಮೊದಲ ಹಂತವನ್ನು ಸುಮಾರು 10,142 ಕೋಟಿ ರೂ. ವೆಚ್ಚದಲ್ಲಿ ಸದ್ಯದಲ್ಲೇ ಅನುಷ್ಠಾನಗೊಳ್ಳಲಿದೆ, ಮೊದಲನೆಯ ಯೋಜನೆಯ ಕಾಮಗಾರಿ ಕೆಲಸವೂ ಶೇ. 80ರಷ್ಟು ಪೂರ್ಣಗೊಂಡಿದೆ ಎಂದು ಕೇಂದ್ರ ಇಂಧನ ಸಚಿವಾಲಯ ಮಾಹಿತಿ ನೀಡಿದೆ. * ಪ್ರಸ್ತುತ ಈ ಗ್ರೀನ್ ಎನರ್ಜಿ ಕಾರಿಡಾರ್ ಯೋಜನೆಯು ಸೌರ ಮತ್ತು ಗಾಳಿಯಂತಹ ನವೀಕರಿಸಬಹುದಾದ ಮೂಲಗಳಿಂದ ಉತ್ಪತ್ತಿಯಾಗುವ ವಿದ್ಯುತ್'ನ್ನು ಗ್ರಿಡ್‌ನಲ್ಲಿ ಸಾಂಪ್ರದಾಯಿಕ ವಿದ್ಯುತ್ ಕೇಂದ್ರಗಳೊಂದಿಗೆ ಸಿಂಕ್ರೊನೈಸ್ ಮಾಡುವ ಗುರಿಯನ್ನು ಹೊಂದಿದೆ. * ಈ ಹಿಂದೆ 2015-16 ರಲ್ಲಿ ಇಂಧನ ಸಚಿವಾಲಯವು ದೊಡ್ಡ ಪ್ರಮಾಣದ ನವೀಕರಿಸಬಹುದಾದ ಇಂಧನವನ್ನು ಸ್ಥಳಾಂತರಿಸಲು, ಇಂಟ್ರಾ ಸ್ಟೇಟ್ ಟ್ರಾನ್ಸ್ಮಿಷನ್ ಸಿಸ್ಟಮ್ ಯೋಜನೆಯನ್ನು ತಂದಿದೆ. ಈ ಯೋಜನೆ ಅಡಿಯಲ್ಲಿ ತಮಿಳುನಾಡು, ರಾಜಸ್ಥಾನ, ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ಗುಜರಾತ್, ಹಿಮಾಚಲ ಪ್ರದೇಶ ಮತ್ತು ಮಧ್ಯಪ್ರದೇಶದ '8' ನವೀಕರಿಸಬಹುದಾದ-ಸಮೃದ್ಧ ರಾಜ್ಯಗಳಿಂದ ಇದನ್ನು ಜಾರಿಗೆ ತರಲಾಗುತ್ತಿದೆ. * ಈ ಯೋಜನೆಯನ್ನು ಆಯಾ ರಾಜ್ಯ ಪ್ರಸರಣ ಉಪಯುಕ್ತತೆಗಳು (STUs) ಸ್ಪರ್ಧಾತ್ಮಕ ಬಿಡ್ಡಿಂಗ್ ಪ್ರಕ್ರಿಯೆಯ ಮೂಲಕ ಕೆಲಸವನ್ನು ನಿಯೋಜನೆ ಮಾಡುವ ಮೂಲಕ ಕಾರ್ಯಗತಗೊಳಿಸಲಾಗುತ್ತಿದೆ, ಹಾಗೂ ಇಂಧನ ಸಚಿವಾಲಯವು ಪ್ರತಿ ತಿಂಗಳು ಯೋಜನೆಯನ್ನು ಮೇಲ್ವಿಚಾರಣೆ ಮಾಡಲಿದೆ.