Job Description: * ಪ್ರಸ್ತುತ ಜಮ್ಮು- ಕಾಶ್ಮೀರದಲ್ಲಿನ ನಾಲ್ಕು ಮಾಜಿ ಮುಖ್ಯಮಂತ್ರಿಗಳು ಮತ್ತು ಅವರ ಕುಟುಂಬದ 15 ಜನರಿಗೆ ಕಲ್ಪಿಸಲಾಗಿದ್ದ ವಿಶೇಷ ಭದ್ರತೆಯನ್ನು (Special Security Group(SSG)) ಇದೀಗ ಜಮ್ಮು- ಕಾಶ್ಮೀರ ಸರ್ಕಾರವು ಹಿಂಪಡೆದಿದೆ. * 2021 ರ ಡಿಸೆಂಬರ್. 31ರಂದು ಕೇಂದ್ರ ಗೃಹ ಇಲಾಖೆಯು ADGP'ಗೆ ಭದ್ರತೆಯ ಪತ್ರವನ್ನು ಬರೆದಿತ್ತು, ಜಮ್ಮು- ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಎನ್‌ಸಿ ಪಕ್ಷದ ಫಾರೂಕ್‌ ಅಬ್ದುಲ್ಲಾ, ಅವರ ಪುತ್ರ ಒಮರ್‌ ಅಬ್ದುಲ್ಲಾ, ಪಿಡಿಪಿ ಮೆಹಬೂಬ ಮುಫ್ತಿ, ಹಾಗೂ ಕಾಂಗ್ರೆಸ್‌ನ ಗುಲಾಂ ನಬೀ ಅಜಾದ್‌ ಅವರಿಗೆ ಒದಗಿಸಿರುವ SSG ಭದ್ರತೆಯನ್ನು ಹಿಂಪಡೆಯಲಾಗಿದೆ ಎಂದು ಸರ್ಕಾರ ತಿಳಿಸಿದೆ. * 2021ರ ಜುಲೈ 18 ಹಾಗೂ ಸೆಪ್ಟೆಂಬರ್. 21 ರಂದು ನಡೆದ ಭದ್ರತಾ ಸಮನ್ವಯ ಸಮಿತಿಯ ಆದೇಶದ ಮೇರೆಗೆ ಈ ನಿರ್ಧಾರವನ್ನು ತಗೆದುಕೊಳ್ಳಲಾಗಿದೆ, ಈ ನಾಲ್ಕು ಮಾಜಿ ಮುಖ್ಯಮಂತ್ರಿಗಳು ಹಾಗೂ ಅವರ ಕುಟುಂಬ ಸದಸ್ಯರಿಗೆ SSG ಭದ್ರತೆ ಲಭ್ಯವಿರುವದಿಲ್ಲ ಎಂದು ತಿಳಿಸಿದೆ. * ಪ್ರಸ್ತುತ ಜಮ್ಮು ಮತ್ತು ಕಾಶ್ಮೀರದಲ್ಲಿ SSG ಸಿಬ್ಬಂದಿ ಕಡಿತಗೊಳಿಸುವಂತೆ ಸಲ್ಲಿಸಿರುವ ಪ್ರಸ್ತಾವವನ್ನು ಇಲಾಖೆಯು ಒಪ್ಪಿಕೊಂಡಿದೆ, ಇನ್ನು ಮುಂದೆ ಸಾಧ್ಯವಾದಷ್ಟು ಸಿಬ್ಬಂದಿಯನ್ನು ಕಡಿಮೆಗೊಳಿಸಿ ಈ SSGಯಲ್ಲಿದ್ದ ಸಿಬ್ಬಂದಿಯನ್ನು ವಿವಿಧ ವಿಭಾಗಕ್ಕೆ ವರ್ಗಾವಣೆ ಮಾಡುವಂತೆ ಗೃಹ ಇಲಾಖೆಯು ನಿರ್ದೇಶನವನ್ನು ನೀಡಿದೆ. * ಈ ಹಿಂದೆ 2000ರಲ್ಲಿ ಆಗಿನ ಮುಖ್ಯಮಂತ್ರಿ ಫಾರೂಕ್‌ ಅಬ್ದುಲ್ಲಾ ನೇತೃತ್ವದ ಸರ್ಕಾರವು ಮಾಜಿ ಮುಖ್ಯಮಂತ್ರಿಗಳು ಹಾಗೂ ಅವರ ಕುಟುಂಬ ಸದಸ್ಯರಿಗೆ ಭದ್ರತೆ ಒದಗಿಸುವ "ಜಮ್ಮು ಮತ್ತು ಕಾಶ್ಮೀರ ವಿಶೇಷ ಭದ್ರತಾ ಪಡೆ-2000" ಕಾಯ್ದೆಯನ್ನು ಜಾರಿಗೆ ತಂದಿತ್ತು. ಆದರೆ 2020ರ ಮಾರ್ಚ್‌ 31ರಂದು ಜಮ್ಮು -ಕಾಶ್ಮೀರ ವಿಶೇಷ ಭದ್ರತಾ ಪಡೆ -2000 ಈ ಕಾಯ್ದೆಯನ್ನು ತಿದ್ದುಪಡಿಮಾಡಲಾಗಿದೆ, ಈ ಕಾಯ್ದೆ ಅನುಸಾರ ಹಾಲಿ ಮುಖ್ಯಮಂತ್ರಿಗೆ ಮಾತ್ರ SSG ಭದ್ರತೆಯನ್ನು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.