Job Description: * ಪ್ರಸ್ತುತ ಈ ವರ್ಷ ಭಾರತೀಯ ನೌಕಾಪಡೆಗೆ ಭಾರತದ ಆಂತರಿಕ ವಿಮಾನ ವಾಹಕ ನೌಕೆಯನ್ನು ಸೇರ್ಪಡೆ ಮಾಡಲಾಗಿದೆ. ಇದೀಗ ಗೋವಾದಲ್ಲಿನ ಕಡಲ ಕಿನಾರೆ ಆಧರಿತ ಪರೀಕ್ಷಾ ಕೇಂದ್ರದಲ್ಲಿ ಭಾರತೀಯ ನೌಕಾಪಡೆಗಾಗಿ ಫ್ರಾನ್ಸ್ ರಫೇಲ್ ಯುದ್ದ ವಿಮಾನದ ಪ್ರದರ್ಶನವನ್ನು ನಡೆಸಿದೆ. * ಅಮೆರಿಕ ದೇಶವು ಕೂಡ ಬೋಯಿಂಗ್ ಕಂಪನಿ ಸಿದ್ಧಪಡಿಸಿರುವ ಯುದ್ಧ ವಿಮಾನ ಎಫ್‍ಎ-18ನ್ನು ಎಸ್‍ಬಿಟಿಎಫ್‍ನಲ್ಲಿ ಪ್ರದರ್ಶಿಸಲು ತಯಾರಿ ನಡೆಸಿದೆ. ಈ ಎಸ್‍ಬಿಟಿಎಫ್ ಇದೊಂದು ಯುದ್ದ ವಿಮಾನ ವಾಹಕ ನೌಕೆಯನ್ನು ಹೋಲುವ ಸ್ಕೈಜಂಪ್‍'ನ್ನು ಹೊಂದಿರಲಿದೆ. ಎರಡು ಎಂಜಿನ್‍ಗಳ ರಫೇಲ್-ಎಂ ಮತ್ತು ಎಫ್/ಎ-18 ಭಾರತಕ್ಕೆ 40,000 ಟನ್ IACಯಿಂದ ಕಾರ್ಯಾಚರಿಸಲು ಸಿದ್ಧವಿದೆ. ಈ ಯುದ್ಧ ನೌಕೆಯನ್ನು ಈ ಹಿಂದೆ ಆಗಸ್ಟ್'ನಲ್ಲಿ ನೌಕಪಾಡೆಗೆ ಸೇರ್ಪಡೆಯಾಗಿರುವ INS ವಿಕ್ರಾಂತ್‍'ನ ಹಾಗೆ ಇದನ್ನು ಸೇರ್ಪಡೆ ಮಾಡಲಾಗಿದೆ. * ಡಸ್ಸಾಲ್ಟ್ ರಫೇಲ್(Dassault Rafale): ಫ್ರಾನ್ಸ್ ಅವಳಿ-ಎಂಜಿನ್, ಕ್ಯಾನಾರ್ಡ್ ಡೆಲ್ಟಾ ವಿಂಗ್, ಬಹುಪಾತ್ರ ಯುದ್ಧ ವಿಮಾನವನ್ನು ಡಸಾಲ್ಟ್ ಏವಿಯೇಷನ್ ವಿನ್ಯಾಸಗೊಳಿಸಿದೆ ಮತ್ತು ಅಭಿವೃದ್ಧಿಪಡಿಸಿದೆ. ರಾಫೆಲ್'ನ್ನು ಡಸಾಲ್ಟ್ 'ಓಮ್ನಿರೋಲ್'(omnirole) ವಿಮಾನ ಎಂದು ಕರೆಯಲಾಗುತ್ತದೆ. * 1970 ರ ದಶಕದ ಉತ್ತರಾರ್ಧದಲ್ಲಿ ಫ್ರೆಂಚ್(ಫ್ರಾನ್ಸ್) ಏರ್ ಫೋರ್ಸ್ ಹಾಗೂ ಫ್ರೆಂಚ್ ನೌಕಾಪಡೆಯು ತಮ್ಮ ಪ್ರಸ್ತುತ ನೌಕಾಪಡೆಯ ವಿಮಾನಗಳನ್ನು ಸುಧಾರಿಸಲು ಮತ್ತು ಬಲಪಡಿಸಲು ಹಾಗೂ ಅಭಿವೃದ್ಧಿ ವೆಚ್ಚಗಳನ್ನು ಕಡಿಮೆ ಮಾಡಲು ಮತ್ತು ಮಾರಾಟವನ್ನು ಹೆಚ್ಚಿಸಲು, ಫ್ರಾನ್ಸ್ ಯುಕೆ, ಜರ್ಮನಿ, ಇಟಲಿ ಮತ್ತು ಸ್ಪೇನ್‌ನೊಂದಿಗೆ ಅಗೈಲ್ ಬಹು-ಉದ್ದೇಶದ 'ಫ್ಯೂಚರ್ ಯುರೋಪಿಯನ್ ಫೈಟರ್ ಏರ್‌ಕ್ರಾಫ್ಟ್' ತಯಾರಿಸುವ ಒಪ್ಪಂದವನ್ನು ಮಾಡಿಕೊಂಡಿತು. Dassault '8' ವರ್ಷಗಳ ಹಾರಾಟ-ಪರೀಕ್ಷಾ ಕಾರ್ಯಕ್ರಮದ ಭಾಗವಾಗಿ 1986 ರ ಜುಲೈನಲ್ಲಿ ಮೊದಲ ಬಾರಿಗೆ ತಂತ್ರಜ್ಞಾನ ಪ್ರದರ್ಶಕವನ್ನು ನಿರ್ಮಿಸಿತು, ಈ ರಫೇಲ್ ಇತರ ಯುರೋಪಿಯನ್ ಫೈಟರ್‌ಗಳಿಗಿಂತ ಭಿನ್ನವಾಗಿದೆ, ಇದನ್ನು ಸಂಪೂರ್ಣವಾಗಿ ಒಂದು ದೇಶದಿಂದ ನಿರ್ಮಿಸಲಾಗಿದೆ, ಪ್ರಸ್ತುತ ಫ್ರಾನ್ಸ್‌ ರಾಷ್ಟ್ರವು ಹೆಚ್ಚಿನ ಪ್ರಮುಖ ರಕ್ಷಣಾ ಗುತ್ತಿಗೆದಾರರಾದ ಡಸಾಲ್ಟ್, ಥೇಲ್ಸ್ ಹಾಗೂ ಸಫ್ರಾನ್‌ಗಳನ್ನು ಹೊಂದಿದೆ. * ರಫೇಲ್'ನ್ನು ಫ್ರಾನ್ಸ್ ವಾಯುಪಡೆಗಾಗಿ ಹಾಗೂ ಫ್ರಾನ್ಸ್ ನೌಕಾಪಡೆಯಲ್ಲಿ ವಾಹಕ ಆಧಾರಿತ ಕಾರ್ಯಾಚರಣೆಗಳಿಗಾಗಿ ಉತ್ಪಾದಣೆ ಮಾಡಲಾಗುತ್ತಿದೆ. ರಫೇಲ್'ನ್ನು ಈಜಿಪ್ಟ್ ಏರ್ ಫೋರ್ಸ್, ಇಂಡಿಯನ್ ಏರ್ ಫೋರ್ಸ್, ಕತಾರ್ ಏರ್ ಫೋರ್ಸ್, ಹೆಲೆನಿಕ್ ಏರ್ ಫೋರ್ಸ್, ಕ್ರೊಯೇಷಿಯನ್ ಏರ್ ಫೋರ್ಸ್ ಹಾಗೂ UAE ಏರ್ ಫೋರ್ಸ್ ದೇಶಗಳಿಗೆ ಮಾರಾಟ ಮಾಡಲಾಗಿದೆ.