Job Description: * ಇತ್ತೀಚಿಗೆ ಭಾರತವು ಮಾನವೀಯ ಆಧಾರದ ಮೇಲೆ ತಾಲಿಬಾನ್‌ ಆಡಳಿತವಿರುವ ಅಫ್ಘಾನಿಸ್ತಾನ ರಾಷ್ಟ್ರಕ್ಕೆ 2 ಟನ್‌'ಗಳಷ್ಟು ಔಷಧಗಳನ್ನು ರಫ್ತು ಮಾಡಿದೆ. ಇದೇ ತಿಂಗಳು ಜನವರಿ. 01 ರಂದು ಅಫ್ಘಾನಿಸ್ತಾನ ರಾಷ್ಟ್ರಕ್ಕೆ 5 ಲಕ್ಷ ಕೋವಿಡ್‌-19 ಲಸಿಕೆಗಳನ್ನು ನೀಡಿ ಮಾನವೀಯತೆಯನ್ನು ಮೆರೆದ ಭಾರತ. * ಭಾರತವು ಆಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌'ನಲ್ಲಿನ ಇಂದಿರಾಗಾಂಧಿ ಆಸ್ಪತ್ರೆಗೆ 2 ಟನ್ ಔಷಧ ಸಾಮಗ್ರಿಗಳನ್ನು ನೀಡಿದೆ, ಈ ಹಿಂದೆ ಇದೆ ಆಸ್ಪತ್ರೆಗೆ ಕೋವಿಡ್-19 ಲಸಿಕೆಗಳನ್ನು ನೀಡಲಾಗಿತ್ತು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಮಾಹಿತಿ ಬಹಿರಂಗ ಪಡಿಸಿದೆ. ಇದೀಗ ಭಾರತವು ಆ ದೇಶದಲ್ಲಿನ ಜನರಿಗೆ ಮಾನವೀಯ ನೆರವು ನೀಡಲು ಸಿದ್ಧವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿಕೆ ನೀಡಿದೆ. * ಭಾರತೀಯ ರಫ್ತು ಸಂಸ್ಥೆ ಒಕ್ಕೂಟ (FIEO)ದ ಮಹಾನಿರ್ದೇಶಕರಾದ ಡಾ. ಅಜಯ್ ಸಹಾಯ್ ಅವರು ಈ ಬಗ್ಗೆ ಮಾಹಿತಿಯನ್ನು ಅಧಿಕೃತವಾಗಿ ತಿಳಿಸಿದ್ದಾರೆ. ತಾಲಿಬಾನಿಗಳು ಅಫ್ಘಾನಿಸ್ತಾನ ರಾಷ್ಟ್ರವನ್ನು ವಶಪಡಿಸಿಕೊಳ್ಳುದಕ್ಕೂ ಮೊದಲು ಸರಕುಗಳನ್ನು ಪಾಕಿಸ್ತಾನದ ಮಾರ್ಗದ ಮೂಲಕ ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತಿತ್ತು, ಇದೀಗ ಆ ರಾಷ್ಟ್ರವನ್ನು ತಾಲಿಬಾನಿಗಳ ವಶಪಡಿಸಿಕೊಂಡಿದ್ದಾರೆ, ಈ ಹಿನ್ನಲೆಯಿಂದಾಗಿ ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನ ಮಧ್ಯೆ ಸರಕು ಸಾಗಣೆಯನ್ನು ತಾಲಿಬಾನ್ ನಿಲ್ಲಿಸಿರುವ ಕಾರಣದಿಂದ ಭಾರತಕ್ಕೂ ಕೂಡ ಆಮದಾಗುವುದು ನಿಂತಿದೆ ಎಂದು FIEOನ ಮಹಾನಿರ್ದೇಶಕರಾದ ಅಜಯ್ ಸಹಾಯ್ ಅವರು ತಿಳಿಸಿದ್ದಾರೆ. * 2021ರಲ್ಲಿ ಭಾರತದಿಂದ ಆಫ್ಘಾನಿಸ್ತಾನ್ ದೇಶಕ್ಕೆ ರಫ್ತಾಗಿರುವ ಸರಕುಗಳ ಮೌಲ್ಯವು ಸುಮಾರು 835 ಮಿಲಿಯನ್ ಡಾಲರ್ ಆಗಿದೆ. ಅದೇ ರೀತಿ ಆಫ್ಘಾನಿಸ್ತಾನ್'ದಿಂದ ಭಾರತಕ್ಕೆ 510 ಮಿಲಿಯನ್ ಡಾಲರ್ ಮೌಲ್ಯದ ಸರಕನ್ನು ಆಮದು ಮಾಡಿಕೊಳ್ಳಲಾಗಿದೆ ಎಂದು ತಿಳಿಸಲಾಗಿದೆ. * ಅಫ್ಘಾನಿಸ್ತಾನ ಮತ್ತು ಭಾರತದ ನಡುವೆ ಸರಕು ಸಾಗಣೆ ಮಾಡಲು ಅನೇಕ ಮಾರ್ಗಗಳಿವೆ. ಪಾಕಿಸ್ತಾನದ ಟ್ರಾನ್ಸಿಟ್ ರೂಟ್ ಮೂಲಕ ಸರಕು ಸಾಗಣೆ ಮಾಡುವ ಮಾರ್ಗವೆ ಪ್ರಮುಖ ಮಾರ್ಗವಾಗಿದೆ, ಮತ್ತು ಇನ್ನೊಂದು ಇಂಟರ್ನ್ಯಾಷನಲ್ ನಾರ್ಥ್-ಸೌಥ್ ಟ್ರಾನ್ಸ್ಪೋರ್ಟ್ ಕಾರಿಡಾರ್ ಮಾರ್ಗವಾಗಿದೆ. ಆದರೆ ಪಾಕಿಸ್ತಾನ ರಾಷ್ಟ್ರದ ಮೂಲಕ ಹಾದು ಹೋಗುವ ಟ್ರಾನ್ಸಿಟ್ ಮಾರ್ಗವನ್ನು ಇದೀಗ ತಾಲಿಬಾನ್ ಸ್ಥಗಿತಗೊಳಿಸಿದ್ದಾರೆ. ಅಫ್ಘಾನಿಸ್ತಾನ ಹಾಗೂ ಭಾರತಕ್ಕೆ ರಫ್ತು ಮಾಡುತ್ತಿರುವ ಬಹುತೇಕ ಸರಕುಗಳು ಇದೇ ಮಾರ್ಗದ ಮೂಲಕ ಸಾಗಣೆಯಾಗುತ್ತವೆ. ಆದರೆ ಸದ್ಯದ ಮಟ್ಟಿಗೆ ಈ ಮಾರ್ಗವು ಸ್ಥಗಿತಗೊಂಡಿದೆ ಎಂದಿದ್ದಾರೆ.