Job Description: * ಪ್ರಸ್ತುತ ಭಾರತವು 2030ರ ವೇಳೆಗೆ ಆರ್ಥಿಕತೆಯಲ್ಲಿ ಏಷ್ಯಾದ 2ನೇ ಅತಿದೊಡ್ಡ ರಾಷ್ಟ್ರದ ಪಟ್ಟ ಪಡೆದುಕೊಂಡು ಜಪಾನ್ ರಾಷ್ಟ್ರವನ್ನು ಹಿಂದಿಕ್ಕುವ ಸಾಧ್ಯತೆಗಳಿವೆ. ಇದರ ಜೊತೆಗೆ ಭಾರತದ GDP'ಯು ಕೂಡಾ ಜರ್ಮನಿ ಹಾಗೂ ಯುಕೆ ದೇಶಗಳನ್ನು ಮೀರಿಸಲಿದೆ ಮತ್ತು ವಿಶ್ವದ ನಂಬರ್ 3ನೇ ಸ್ಥಾನ ಪಡೆಯಯುವ ಸಾಧ್ಯತೆಯಿದೆ ಎಂದು ಐಎಚ್ ಎಸ್ ಮಾರ್ಕಿಟ್ ಮಾಹಿತಿ ನೀಡಿದೆ. * ಇದೀಗ ಭಾರತ ದೇಶವು ಇತರೆ ಆರ್ಥಿಕತೆಯ ದೇಶಗಳ ಯುಎಸ್, ಚೀನಾ, ಜಪಾನ್, ಜರ್ಮನಿ ಹಾಗೂ ಯುಕೆ, ಪೈಕಿ ವಿಶ್ವದ 6ನೇ ಅತಿದೊಡ್ಡ ದೇಶವಾಗಿದೆ. ಇದೀಗ ಭಾರತವು 2021ರಲ್ಲಿ USD 2.7 ಟ್ರಿಲಿಯನ್ ನಿಂದ 2030ರ ವೇಳೆಗೆ USD 8.4 ಟ್ರಿಲಿಯನ್'ಗೆ ಏರಿಕೆಯಾಗುವ ಸಾಧ್ಯತೆಗಳಿವೆ. 2030ರ ವೇಳೆಗೆ ಭಾರತೀಯ GDP ಗಾತ್ರವು ಜಪಾನ್ ದೇಶವನ್ನು ಮೀರಿಸಲಿದೆ, ಹಾಗೂ ಏಷ್ಯಾ-ಫೆಸಿಫಿಕ್ ಪ್ರದೇಶದಲ್ಲಿ ಭಾರತವು 2ನೇ ಅತಿದೊಡ್ಡ ಆರ್ಥಿಕ ರಾಷ್ಟ್ರವಾಗಿ ಮಾರ್ಪಾಡು ಮಾಡಲಿದೆ ಎಂದು ಮಾರ್ಕಿಟ್ ಲಿಮಿಟೆಡ್ ವರದಿ ಮಾಡಿದೆ. * ಅಷ್ಟೇ ಅಲ್ಲದೇ 2030ರ ಅವಧಿಗೆ ಭಾರತದ ಆರ್ಥಿಕತೆಯು ಇತರೆ ಜರ್ಮನಿ, ಫ್ರಾನ್ಸ್ ಹಾಗೂ ಯುಕೆ ದೇಶಗಳಿಗಿಂತ ಗಾತ್ರದಲ್ಲಿ ದೊಡ್ಡದಾಗಿರಲಿದೆ, ಇದರಿಂದ ಭಾರತವು ಮುಂದಿನ ದಶಕದಲ್ಲಿ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯ ದೇಶವಾಗಲಿದೆ. ಪ್ರಸ್ತುತ ಆರ್ಥಿಕ ವರ್ಷದಲ್ಲಿ ಭಾರತ ದೇಶದ ನೈಜ GDPಯು ಬೆಳವಣಿಗೆ ದರ ಶೇ. 8.2 ರಷ್ಟು ಎಂದು ನಿರೀಕ್ಷೆ ಮಾಡಲಾಗಿದೆ, ಹಾಗೂ ಇದು 2022 ಮತ್ತು 23ನೇ ಆರ್ಥಿಕ ವರ್ಷದಲ್ಲಿ ಶೇ. 6.7ರ ವೇಗದಲ್ಲಿ ಬೆಳೆಯುವ ಸಾಧ್ಯತೆಗಳಿವೆ, ಅಷ್ಟೇ ಅಲ್ಲದೇ ಭಾರತದ ಡಿಜಿಟಲ್ ರೂಪಾಂತರ ಇ-ಕಾಮರ್ಸ್ ಬೆಳವಣಿಗೆಯ ಹೆಚ್ಚಲಿದೆ, ಹಾಗೂ ಚಿಲ್ಲರೆ ಗ್ರಾಹಕ ಮಾರುಕಟ್ಟೆ ವ್ಯಕ್ತಿತ್ವ ಬದಲಾಗಲಿದೆ, ಜೊತೆ ಜೊತೆಗೆ ತಂತ್ರಜ್ಞಾನ ಹಾಗೂ ಇ-ಕಾಮರ್ಸ್'ನಲ್ಲಿ ಪ್ರಮುಖ ಜಾಗತಿಕವಾಗಿ ಬೇರೆ ಬೇರೆ ರಾಷ್ಟ್ರೀಯ ಕಂಪನಿಗಳನ್ನು ಭಾರತೀಯ ಮಾರುಕಟ್ಟೆಗೆ ಕರೆತರುವ ಸಾಧ್ಯೆತೆಗಳಿವೆ ಎಂದಿದ್ದಾರೆ. * ಸರಿ ಸುಮಾರು 1.1 ಶತಕೋಟಿ ಭಾರತೀಯರು 2030ರ ವೇಳೆಗೆ ಇಂಟರ್ನೆಟ್ ಸಂಪರ್ಕವನ್ನು ಪಡೆಯಲಿದ್ದಾರೆ. ಭಾರತವು ಬಹುರಾಷ್ಟ್ರೀಯ ಕಂಪನಿಗಳಿಗೆ ಪ್ರಮುಖ ಮಾರುಕಟ್ಟೆಯಾಗಲಿದೆ ಎಂದು ತಿಳಿಸಿದ್ದಾರೆ. * ಒಟ್ಟು ದೇಶೀಯ ಉತ್ಪನ್ನ(Gross domestic product (GDP)): ಇದೊಂದು ನಿರ್ದಿಷ್ಟ ಅವಧಿಯಲ್ಲಿ ಉತ್ಪತ್ತಿಯಾಗುವ ಎಲ್ಲಾ ಅಂತಿಮ ಸರಕುಗಳು ಹಾಗೂ ಸೇವೆಗಳ ಮಾರುಕಟ್ಟೆ ಮೌಲ್ಯದ ವಿತ್ತೀಯ ಅಳತೆಯಾಗಿದೆ. GDP ಹಲವಾರು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಆರ್ಥಿಕ ಸಂಸ್ಥೆಗಳು ನಿರ್ವಹಿಸುತ್ತವೆ. ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ(OECD)ಯು GDP'ಯನ್ನು 'ಉತ್ಪಾದನೆ ಮತ್ತು ಸೇವೆಗಳಲ್ಲಿ ತೊಡಗಿರುವ ಎಲ್ಲಾ ನಿವಾಸಿ ಮತ್ತು ಸಾಂಸ್ಥಿಕ ಘಟಕಗಳ ಒಟ್ಟು ಮೌಲ್ಯಗಳ ಮೊತ್ತಕ್ಕೆ ಸಮನಾದ ಉತ್ಪಾದನೆಯ ಒಟ್ಟು ಅಳತೆಯಾಗಿದೆ' ಎಂದು ತಿಳಿಸಿದೆ. * GDPಯನ್ನು ಸಾಮಾನ್ಯವಾಗಿ 'ರಾಷ್ಟ್ರೀಯ ಅಭಿವೃದ್ಧಿ ಮತ್ತು ಪ್ರಗತಿಯ ವಿಶ್ವದ ಅತ್ಯಂತ ಶಕ್ತಿಶಾಲಿ ಅಂಕಿಅಂಶ ಸೂಚಕ' ಎಂದು ಪರಿಗಣಿಸಲಾಗಿದೆ. ಹಾಗೂ ಉತ್ತಮ ಜೀವನ ಸೂಚ್ಯಂಕವನ್ನು ಮಾನವ ಅಭಿವೃದ್ಧಿ ಮತ್ತು ಯೋಗಕ್ಷೇಮದ ಮೇಲೆ ಆರ್ಥಿಕತೆಯ ಪರಿಣಾಮವನ್ನು ಅಳೆಯಲು ಇದೊಂದು ಉತ್ತಮ ವಿಧಾನವಾಗಿದೆ ಎಂದಿದ್ದಾರೆ.