Job Description: * ಇತ್ತೀಚೆಗೆ ಕಾಡು ಏಡಿಗಳ ಸಾಮೂಹಿಕ ಮರಣಕ್ಕೆ "ಮಡ್ ಕ್ರ್ಯಾಬ್ ರಿಯೊವೈರಸ್" (Mud Crab Reovirus (MCRV)) ಕಾರಣವಾಗಿದೆ ಎಂದು ಆಂಧ್ರಪ್ರದೇಶ ರಾಜ್ಯವು ಕಂಡುಹಿಡಿದಿದೆ. * ಪ್ರಸ್ತುತ ನಾಗಾಯಾಲಂಕಾ ಕ್ಷೇತ್ರಗಳಿಂದ ಸಂಗ್ರಹಿಸಲಾದ ಮಾದರಿಗಳಲ್ಲಿ ಈ "ಮಡ್ ಕ್ರ್ಯಾಬ್ ರಿಯೊವೈರಸ್" ಇರುವಿಕೆಯನ್ನು ಸಾಗರ ಜೀವಶಾಸ್ತ್ರದ ಉನ್ನತ ಅಧ್ಯಯನ ಕೇಂದ್ರದ ಹಾಗೂ ಅಣ್ಣಾಮಲೈ ವಿಶ್ವವಿದ್ಯಾಲಯ, ತಮಿಳುನಾಡು, ಮತ್ತು M.S. ಸ್ವಾಮಿನಾಥನ್ ರಿಸರ್ಚ್ ಫೌಂಡೇಶನ್ ಜಂಟಿ ಸಂಶೋಧನೆಯಿಂದ ದೃಢಪಡಿಸಲಾಗಿದೆ. * ಈ M.S. ಸ್ವಾಮಿನಾಥನ್ ರಿಸರ್ಚ್ ಫೌಂಡೇಶನ್ 2019 ರಿಂದ ಕೃಷ್ಣಾ ಜಿಲ್ಲೆಯ ಮಚಲಿಪಟ್ಟಣ ಮತ್ತು ನಾಗಾಯಾಲಂಕಾದಂತಹ ಪ್ರದೇಶಗಳಲ್ಲಿ ಮರಣವನ್ನು ಗಮನಿಸುತ್ತ ಬರುತ್ತಿದೆ. ಹಾಗೂ MCRV ಪ್ರತಿಯೊಂದು ಬೇಸಾಯ ವಿಧಾನದಲ್ಲಿ ಕಾಡು ಏಡಿಗಳ ಮೇಲೆ ಟೋಲ್ ತೆಗೆದುಕೊಂಡಿದೆ, ಕಾಡು ಏಡಿಗಳನ್ನು ವಿಶೇಷ ಮಣ್ಣಿನ ಏಡಿ ಕೊಳಗಳಲ್ಲಿ ಬೆಳೆಸಲಾಗುತ್ತದೆ. ಈ ಹಿಂದೆ 2014 ರಲ್ಲಿ ಏಡಿ ಕೊಬ್ಬಿಸುವ ತಂತ್ರಜ್ಞಾನವನ್ನು ಆಂಧ್ರಪ್ರದೇಶದಲ್ಲಿ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಬ್ರಾಕಿಶ್‌ವಾಟರ್ ಅಕ್ವಾಕಲ್ಚರ್ ಪರಿಚಯಿಸಿದೆ. * ಕಾಡು ಏಡಿಗಳ ಸಾಮೂಹಿಕ ಮರಣಕ್ಕೆ ಈ ಮಡ್ ಕ್ರ್ಯಾಬ್ ರಿಯೊವೈರಸ್ ಕಾರಣವಾಗಿದೆ, ಹಾಗೂ ಈ ವೈರಸ್ 'ರಿಯೊವಿರಿಡೆ' ಕುಟುಂಬಕ್ಕೆ ಸೇರಿದೆ. ಈ ವೈರಸ್ ಮುಖ್ಯವಾಗಿ ಕರುಳು ಹಾಗೂ ಕಿವಿರುಗಳ ಸಂಯೋಜಕ ಅಂಗಾಂಶದ ಮೇಲೆ ಪರಿಣಾಮ ಬೀರುತ್ತದೆ. * ಈ ಹಿಂದೆ 2007 ರಲ್ಲಿ ಚೀನಾದಲ್ಲಿ MCRV ಈ ಕಾಡು ಏಡಿ ಜಾತಿಯ ಕೃಷಿಯನ್ನು ನಿಷ್ಕ್ರಿಯಗೊಳಿಸಿದೆ. * ಆಂಧ್ರಪ್ರದೇಶದಲ್ಲಿ ಸುಮಾರು 25,000 ಎಕರೆಗಳ ವಿಸ್ತೀರ್ಣದಲ್ಲಿ ಕಾಡು ಏಡಿ ಬೆಳೆಯುತ್ತವೆ. ಪ್ರಸ್ತುತ ಕೃಷ್ಣಾ ಜಿಲ್ಲೆಯಲ್ಲಿ ಸರಿ ಸುಮಾರು 4,500 ಎಕರೆ ಪ್ರದೇಶವಿದೆ. ಈ ಕಾಡು ಏಡಿಯನ್ನು ನೆಲ್ಲೂರು, ಗುಂಟೂರು, ಪ್ರಕಾಶಂ, ಕೃಷ್ಣಾ ಮತ್ತು ಗೋದಾವರಿ ಜಿಲ್ಲೆಗಳಲ್ಲಿ ಬೆಳೆಸಲಾಗುತ್ತದೆ, ಹಾಗೂ ಈ ಆಂಧ್ರಪ್ರದೇಶ ಎಲ್ಲ ಪ್ರದೇಶಗಳಲ್ಲಿ ಬೆಳೆಸಲಾಗಿರುವ ಕಾಡು ಏಡಿಯನ್ನು ನೇರವಾಗಿ ಆಗ್ನೇಯ ಏಷ್ಯಾ ಪ್ರದೇಶಕ್ಕೆ ರಫ್ತು ಮಾಡಲಾಗುತ್ತದೆ, ಪ್ರಸ್ತುತ ಇದು ಯುರೋಪ್‌ನಲ್ಲಿ ದೊಡ್ಡ ಮಾರುಕಟ್ಟೆಯನ್ನು ಹೊಂದಿದೆ. ಈ ಹಿಂದೆ 2019 ರಿಂದ ಆಂಧ್ರ ರಾಜ್ಯದಲ್ಲಿ ಕಾಡು ಏಡಿಯ ಸಾಮೂಹಿಕ ಮರಣವಾಗುತ್ತಿದೆ, ಆಗಿನನಿಂದಲೂ ಸರಿ ಸುಮಾರು 60% ಕೃಷಿಯು ಮೇಲೆ ಪರಿಣಾಮ ಬೀರಿದೆ. * * ಕಾಡು ಏಡಿ : - ವೈಲ್ಡ್ ಏಡಿಯನ್ನು ವೈಜ್ಞಾನಿಕವಾಗಿ ಸ್ಕಿಲ್ಲಾ ಸೆರಾಟಾ ಎಂದು ಕರೆಯುತ್ತಾರೆ, ಹಾಗೂ ಪರಿಸರ ವಿಜ್ಞಾನದ ಪ್ರಮುಖ ಜಾತಿಯ ಏಡಿಗಳಾಗಿವೆ, ಹಾಗೂ ಇವುಗಳು ಆಫ್ರಿಕಾ, ಏಷ್ಯಾ ಮತ್ತು ಆಸ್ಟ್ರೇಲಿಯಾದ ನದೀಮುಖಗಳು ಹಾಗೂ ಮ್ಯಾಂಗ್ರೋವ್‌ ಪ್ರದೇಶಗಳಲ್ಲಿ ಕಂಡುಬರುತ್ತವೆ.