Job Description: * ಪ್ರಸ್ತುತ ಆನೆಗಳನ್ನು ರೈಲು ಹಳಿಗಳಿಂದ ದೂರವಿಡುವ ಉದ್ದೇಶದಿಂದ ಪ್ಲಾನ್ ಬೀ(Plan Bee)ಯನ್ನು ಉತ್ತರ ಫ್ರಾಂಟಿಯರ್ ರೈಲ್ವೇ ಬಿಡುಗಡೆ ಮಾಡಿದೆ. ಈ ಯೋಜನೆಯು ಇತ್ತೀಚೆಗೆ ಭಾರತೀಯ ರೈಲ್ವೆಯಿಂದ ಅತ್ಯುತ್ತಮ ನಾವೀನ್ಯತೆ ಪ್ರಶಸ್ತಿಯನ್ನು ಪಡೆದಿದೆ. * * ಪ್ಲಾನ್ ಬೀ : - ಈ ಯೋಜನೆಯು ರೈಲ್ವೆ ಹಳಿಗಳ ಉದ್ದಕ್ಕೂ ಅನನ್ಯ ಸಾಧನಗಳನ್ನು ಸ್ಥಾಪಿಸುತ್ತದೆ, ಆ ಸಾಧನಗಳು ಜೇನುನೊಣಗಳ ರೀತಿಯ ಶಬ್ದಗಳನ್ನು ಸೃಷ್ಟಿಸುತ್ತವೆ. ಪ್ರಸ್ತುತ ಈ ಜೇನುನೊಣಗಳ ಝೇಂಕರಿಸುವ ಶಬ್ದಗಳಿಗೆ ಆನೆಗಳು ಕಿರಿಕಿರಿಗೊಳ್ಳುತ್ತವೆ ಹಾಗೂ ಇದರಿಂದ ದೂರವಿರಲು ಪ್ರಯತ್ನಿಸುತ್ತವೆ, ಈ ಜೇನುನೊಣಗಳ ಝೇಂಕರಿಸುವ ಧ್ವನಿಯನ್ನು ರೂಪಿಸುವ ಮೂಲಕ ಆನೆಗಳನ್ನು ಟ್ರ್ಯಾಕ್‌ನಿಂದ ದೂರವಿರುವ ಹಾಗೆ ಮಾಡುತ್ತವೆ. ಈ ಶಬ್ದವು 400 ಮೀ. ದೂರದಿಂದ ಕೇಳುತ್ತದೆ. * ಪ್ಲಾನ್ ಬೀ ಮೂಲಕ ರೈಲ್ವೆ ಹಳಿಗಳ ಉದ್ದಕ್ಕೂ ಸ್ಥಾಪಿಸುವ ಸಾಧನವನ್ನು ಮೊದಲು ಅಸ್ಸಾಂನ ಕಾಮಾಖ್ಯ ನಿಲ್ದಾಣದ ಬಳಿ ಸ್ಥಾಪನೆ ಮಾಡಲಾಗಿದೆ. ಇದೀಗ ಈ ಸಾಧನಗಳನ್ನು 56 ಕ್ಕೂ ಅಧಿಕ ಸ್ಥಳಗಳಲ್ಲಿ ಸ್ಥಾಪಿಸಲಾಗಿದೆ. ಈ ಎಲ್ಲ ಸ್ಥಳಗಳು ನಾರ್ತ್ ಫ್ರಾಂಟಿಯರ್ ರೈಲ್ವೇಸ್ ವ್ಯಾಪ್ತಿಗೆ ಬರುತ್ತವೆ, ಇಲ್ಲಿಯವರೆಗೆ ಈ ಪ್ಲಾನ್ ಬೀ ಯೋಜನೆಯು 950 ಆನೆಗಳ ಜೀವವನ್ನು ಉಳಿಸಿದೆ. * ಪ್ರಸ್ತುತ ಪರಿಸರ ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯದ ಪ್ರಕಾರ, 2009 ರಿಂದ 2021 ರ ನಡುವೆ 186 ಕ್ಕೂ ಅಧಿಕ ಆನೆಗಳು ರೈಲು ಅಪಘಾತಗಳಲ್ಲಿ ಮೃತಪಟ್ಟಿವೆ.