Job Description: * ಪ್ರಸ್ತುತ ಭಾರತೀಯ ನೌಕಾಪಡೆಯ 1971 ರ ಇಂಡೋ-ಪಾಕ್ ಯುದ್ಧದ ಅನುಭವಿಗಾರ ವೈಸ್ ಅಡ್ಮಿರಲ್ ಎಸ್‌.ಹೆಚ್ ಶರ್ಮಾ ಅವರು ಒಡಿಶಾ ರಾಜ್ಯದ ಭುವನೇಶ್ವರದಲ್ಲಿ ನಿಧನರಾಗಿದ್ದಾರೆ, ಇವರ ನಿಧನಕ್ಕೆ ಒಡಿಶಾ ರಾಜ್ಯದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಸಂತಾಪ ಸೂಚಿಸಿದ್ದಾರೆ. * ವೈಸ್ ಅಡ್ಮಿರಲ್ ಎಸ್‌.ಹೆಚ್ ಶರ್ಮಾ ಅವರು 2021 ರ ಡಿಸೆಂಬರ್ 1 ರಂದು ತಮ್ಮ 100 ನೇ ಹುಟ್ಟುಹಬ್ಬದ ಸಂಭ್ರಮವನ್ನು ಆಚರಿಸಿಕೊಂಡಿದ್ದರು. ಶರ್ಮಾ ಅವರು 1971 ರ ಯುದ್ಧದ ಸಂಧರ್ಭದಲ್ಲಿ ಈಸ್ಟರ್ನ್ ಫ್ಲೀಟ್ ಕಮಾಂಡಿಂಗ್ ಫ್ಲಾಗ್ ಆಫೀಸರ್ ಹಾಗೂ ಕಮಾಂಡಿಂಗ್-ಇನ್-ಚೀಫ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಈ 1971 ರ ಯುದ್ಧದಲ್ಲಿ ಭಾರತವು ಪಾಕಿಸ್ತಾನವನ್ನು ಸೋಲಿಸಿ ಬಾಂಗ್ಲಾದೇಶದ ರಚನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿತ್ತು. * ವೈಸ್ ಅಡ್ಮಿರಲ್ ಎಸ್‌.ಹೆಚ್ ಶರ್ಮಾ ಅವರು ಒಡಿಶಾ ರಾಜ್ಯದಲ್ಲಿನ ಸುಪ್ರಸಿದ್ಧ ಪುತ್ರರಲ್ಲಿ ಒಬ್ಬರಾಗಿದ್ದರು, ಇವರು ಇತ್ತೀಚೆಗೆ ದೆಹಲಿಯಲ್ಲಿ ನಡೆದ ಆಜಾದಿ ಕಾ ಅಮೃತ್ ಮಹೋತ್ಸವ ಆಚರಣೆಯಲ್ಲಿ ಪಾಲ್ಗೊಂಡಿದ್ದರು. * ಪ್ರಸ್ತುತ ಭಾರತೀಯ ನೌಕಾಪಡೆಯು ಭಾರತೀಯ ಸಶಸ್ತ್ರ ಪಡೆಗಳ ನೌಕಾ ಶಾಖೆಯಾಗಿದೆ, ಹಾಗೂ ಭಾರತದ ರಾಷ್ಟ್ರಪತಿಗಳು ಭಾರತೀಯ ನೌಕಾಪಡೆಯ ಸರ್ವೋಚ್ಚ ಕಮಾಂಡರ್ ಆಗಿರುತ್ತಾರೆ. ನಾಲ್ಕು-ಸ್ಟಾರ್ ಅಡ್ಮಿರಲ್ ನೌಕಾಪಡೆಯ ಮುಖ್ಯಸ್ಥರಾಗಿರುತ್ತಾರೆ ಇವರು ನೌಕಾಪಡೆಗೆ ಆದೇಶ ನೀಡುತ್ತಾರೆ. ಪ್ರಸ್ತುತ ರಾಷ್ಟ್ರದ ಕಡಲ ಗಡಿಗಳನ್ನು ರಕ್ಷಿಸುವುದು ನೌಕಾಪಡೆಯ ಪ್ರಾಥಮಿಕ ಉದ್ದೇಶವಾಗಿದೆ, ಹಾಗೂ ಯುದ್ಧ ಮತ್ತು ಶಾಂತಿಯಲ್ಲಿ ಭಾರತದ ಭೂಪ್ರದೇಶ ಪ್ರಜೆಗಳ ಅಥವಾ ಸಮುದ್ರ ಹಿತಾಸಕ್ತಿಗಳ ವಿರುದ್ಧದ ಬೆದರಿಕೆಗಳು ಅಥವಾ ಆಕ್ರಮಣಗಳನ್ನು ತಡೆಯಲು ಇದು ಕಾರ್ಯನಿರ್ವಹಿಸುತ್ತದೆ. * ಭಾರತೀಯ ನೌಕಾ ಪಡೆಯನ್ನು 1950 ರ ಜನವರಿ. 26 ರಂದು 'ಜಲದೇವನು ನಮಗೆ ಶುಭವಾಗಲಿ' ಎಂಬ ಧ್ಯೇಯವಾಕ್ಯದ ಅಡಿಯಲ್ಲಿ ಸ್ಥಾಪಿಸಲಾಗಿದೆ. ಇದರಪ್ರಧಾನ ಕಛೇರಿಯು ರಕ್ಷಣಾ ಸಚಿವಾಲಯ, ನವದೆಹಲಿಯಲ್ಲಿದೆ. ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ನೌಕಾ ಪಡೆಯಕಮಾಂಡರ್-ಇನ್-ಚೀಫ್ ಆಗಿದ್ದಾರೆ. * ಈ ಹಿಂದೆ 1971 ರಲ್ಲಿ ಇಂಡೋ-ಪಾಕಿಸ್ತಾನ ಯುದ್ಧದ ಸಂಧರ್ಭದಲ್ಲಿ ಆಪರೇಷನ್ ಟ್ರೈಡೆಂಟ್‌ನಲ್ಲಿ ಭಾರತೀಯ ನೌಕಾಪಡೆಯ ಪ್ರತಿದಾಳಿಯನ್ನು ಗೌರವಿಸಲು ಮತ್ತು ಸಾಧನೆಗಳನ್ನು ಗುರುತಿಸಲು ಪ್ರತಿ ವರ್ಷ ಡಿಸೆಂಬರ್ 4 ರಂದು ಭಾರತೀಯ ನೌಕಾಪಡೆಯ ದಿನವನ್ನು ಆಚರಿಸಲಾಗುತ್ತದೆ.