Job Description: * ಪ್ರಸ್ತುತ ದೇಶದ ಪ್ರತಿಭಾವಂತ ಸ್ಕ್ವಾಷ್ ಕ್ರೀಡಾಪಟು ಜೋಶ್ನಾ ಚಿನ್ನಪ್ಪ ಅವರಿಗೆ ಇದೀಗ ವಿಶ್ವ ಸ್ಕ್ವಾಷ್ ಆಟಗಾರರ ರಾಂಕ್ ಪಟ್ಟಿಯ ಟಾಪ್ 10 ರಲ್ಲಿ ಸ್ಥಾನವನ್ನು ಪಡೆದಿದ್ದಾರೆ, ಇದು ದೇಶಕ್ಕೆ ಗೌರವ ಹಾಗೂ ಹೆಮ್ಮೆಯ ಸಂಗತಿಯಾಗಿದೆ. * ಸ್ಕ್ವಾಷ್ ಕ್ರೀಡಾಪಟು ಜೋಶ್ನಾ ಚಿನ್ನಪ್ಪ ಅವರು ಈ ಹಿಂದೆ 2016 ರಲ್ಲಿ ವಿಶ್ವದ ಟಾಪ್ 10 ಸ್ಕ್ವಾಷ್ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದರು, ಇದೀಗ ಇವರು 2 ನೇ ಬಾರಿಗೆ ಈ ಸ್ಥಾನವನ್ನು ಪಡೆದುಕೊಂಡಿದ್ದಾರೆ. * ಜೋಷ್ನಾ ಚಿನಪ್ಪ ಅವರು1986 ರ ಸೆಪ್ಟೆಂಬರ್. 15 ರಂದು ಜನಿಸಿದ್ದಾರೆ, ಇವರೊಬ್ಬ ಭಾರತೀಯ ವೃತ್ತಿಪರ ಸ್ಕ್ವಾಷ್ ಆಟಗಾರ್ತಿಯಾಗಿದ್ದಾರೆ, ಅವರು ಈ ಹಿಂದೆ 2016 ರ ಜುಲೈನಲ್ಲಿ ವಿಶ್ವ ನಂ. 10 ರ ವೃತ್ತಿಜೀವನದ ಉನ್ನತ ವಿಶ್ವ ಶ್ರೇಯಾಂಕದಲ್ಲಿ ಸ್ಥಾನವನ್ನು ಪಡೆದಿದ್ದರು. ಹಾಗೂ ಇವರು 2005 ರಲ್ಲಿ 19 ವರ್ಷದೊಳಗಿನವರ ವಿಭಾಗದಲ್ಲಿ ಬ್ರಿಟಿಷ್ ಜೂನಿಯರ್ ಸ್ಕ್ವಾಷ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಹಾಗೂ ಕಿರಿಯ ಭಾರತೀಯ ಮಹಿಳಾ ರಾಷ್ಟ್ರೀಯ ಚಾಂಪಿಯನ್ ಆಗಿದ್ದಾರೆ. * ಈ ಹಿಂದೆ 2014 ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಜೋಶ್ನಾ ಅವರು ದೀಪಿಕಾ ಪಲ್ಲಿಕಲ್ ಕಾರ್ತಿಕ್ ಜೊತೆಗೆ ಸ್ಕ್ವಾಷ್ ಮಹಿಳೆಯರ ಡಬಲ್ಸ್'ನಲ್ಲಿ ಚಿನ್ನದ ಪದಕವನ್ನು ಜಯಿಸಿದ್ದರು, ಹಾಗೂ ಈ ಪಾದಕವು ಭಾರತಕ್ಕೆ ಮೊದಲ ಬಾರಿಗೆ ಕಾಮನ್‌ವೆಲ್ತ್ ಕ್ರೀಡಾಕೂಟದ ಪದಕವಾಗಿದೆ. ಮತ್ತೇ ಈ ಜೋಶ್ನಾ ಚಿನ್ನಪ್ಪ ಹಾಗೂ ದೀಪಿಕಾ ಪಲ್ಲಿಕಲ್ ಕಾರ್ತಿಕ್ ಜೋಡಿಯು 2018 ರ ಗೋಲ್ಡ್ ಕೋಸ್ಟ್ ಆವೃತ್ತಿಯಲ್ಲಿ ಬೆಳ್ಳಿ ಪದಕವನ್ನು ಜಯಿಸಿದ್ದಾರೆ. ಜೋಶ್ನಾ ಚಿನ್ನಪ್ಪ ಈ ಹಿಂದೆ 2017 ರ ಮಹಿಳಾ ಏಷ್ಯನ್ ವೈಯಕ್ತಿಕ ಸ್ಕ್ವಾಷ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕವನ್ನು ಜಯಿಸಿರುವ ಭಾರತದ ಮೊದಲ ಏಷ್ಯನ್ ಸ್ಕ್ವಾಷ್ ಚಾಂಪಿಯನ್ ಇವರಾಗಿದ್ದಾರೆ. * * ಸ್ಕ್ವಾಷ್ : - * ಇದೊಂದು ರಬ್ಬರ್ ಚೆಂಡಿನೊಂದಿಗೆ ನಾಲ್ಕು ಗೋಡೆಗಳ ಅಂಕಣದಲ್ಲಿ ಇಬ್ಬರು ಆಟಗಾರರು ಆಡುವ ರಾಕೆಟ್ ಮತ್ತು ಬಾಲ್ ಕ್ರೀಡೆಯಾಗಿದೆ. * ಪ್ರಪಂಚದಾದ್ಯಂತ 185 ದೇಶಗಳಲ್ಲಿ ನಿಯಮಿತವಾಗಿ ಸ್ಕ್ವ್ಯಾಷ್ ಆಟವನ್ನು ಆಡುವ ಸುಮಾರು 20 ಮಿಲಿಯನ್ ಆಟಗಾರರಿದ್ದಾರೆ, ಪ್ರಸ್ತುತ ಈ ಸ್ಕ್ವ್ಯಾಷ್(Squash)ನ ಆಡಳಿತ ಮಂಡಳಿಯು ವರ್ಲ್ಡ್ ಸ್ಕ್ವಾಷ್ ಫೆಡರೇಶನ್ (WSF), ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯಿಂದ ಗುರುತಿಸಲ್ಪಟ್ಟ ಆಟವಾಗಿದೆ.