Job Description: * ಪ್ರಧಾನಿ ನರೇಂದ್ರ ಮೋದಿ ಅವರು ತ್ರಿಪುರಾ ರಾಜ್ಯದಲ್ಲಿನ ಮಹಾರಾಜ ವೀರ ವಿಕ್ರಂ ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್‌ ಕಟ್ಟಡವನ್ನು ಉದ್ಘಾಟಿಸಿದರು, ಹಾಗೂ ಅಲ್ಲಿನ "ಮುಖ್ಯಮಂತ್ರಿ ತ್ರಿಪುರಾ ಗ್ರಾಮ ಸಮೃದ್ಧಿ ಯೋಜನೆ" ಹಾಗೂ "ವಿದ್ಯಾಜ್ಯೋತಿ ಶಾಲೆಗಳ ಪ್ರಾಜೆಕ್ಟ್‌ ಮಿಷನ್‌-100"ಗಳಂತ ಯೋಜನೆಗಳಿಗೆ ಚಾಲನೆ ನೀಡಿ ಸಭೆಯಲ್ಲಿ ಮಾತನಾಡಿದರು. * ಪ್ರಸ್ತುತ ತ್ರಿಪುರಾ ರಾಜ್ಯವು ತನ್ನ ಸಂಪರ್ಕ ಜಾಲವನ್ನು ಇದೀಗ HIRA (H-ಹೆದ್ದಾರಿ, I-ಅಂತರ್ಜಾಲ, R-ರೈಲ್ವೆ A-ವಿಮಾನ)ಮಾದರಿಯಲ್ಲಿ ವಿನ್ಯಾಸಗೊಳಿಸಿ ಅಭಿವೃದ್ಧಿ ಪಡಿಸಿಕೊಂಡಿದೆ ಎಂದು ಮೋದಿ ಅವರು ತಿಳಿಸಿದ್ದಾರೆ. * ತ್ರಿಪುರಾ: ಇದೊಂದು ಈಶಾನ್ಯ ಭಾರತದ ರಾಜ್ಯವಾಗಿದೆ. ಹಾಗೂ ಇದು ಭಾರತ ದೇಶದ 3ನೇ-ಚಿಕ್ಕ ರಾಜ್ಯವಾಗಿದೆ, ಈ ರಾಜ್ಯವು ಸುಮಾರು 10,491.69 km2 ವಿಸ್ತೀರ್ಣವನ್ನು ಹೊಂದಿದೆ, ಪ್ರಸ್ತುತ ಈ ರಾಜ್ಯವು ಉತ್ತರ, ದಕ್ಷಿಣ, ಹಾಗೂ ಪಶ್ಚಿಮಕ್ಕೆ ಬಾಂಗ್ಲಾದೇಶದೊಂದಿಗೆ ಗಾಡಿಯನ್ನು ಹಂಚಿಕೊಂಡಿದೆ, ಹಾಗೂ ಪೂರ್ವಕ್ಕೆ ಭಾರತೀಯ ರಾಜ್ಯಗಳು ಅಸ್ಸಾಂ ಮತ್ತು ಮಿಜೋರಾಂ ರಾಜ್ಯಗಳೊಂದಿಗೆ ಗಡಿಯನ್ನು ಹೊಂದಿದೆ. ಈ ರಾಜ್ಯವು 2011 ರಲ್ಲಿ 3,671,032 ನಿವಾಸಿಗಳನ್ನು ಮಾತ್ರ ಹೊಂದಿತ್ತು, ಅಂದರೆ ದೇಶದ ಜನಸಂಖ್ಯೆಯ 0.3% ರಷ್ಟು ಎಂದರ್ಥ. * ಪ್ರಸ್ತುತ ಆಧುನಿಕ ತ್ರಿಪುರಾದ ಪ್ರದೇಶವನ್ನು ಈ ಹಿಂದೆ ಮಾಣಿಕ್ಯ ರಾಜವಂಶವು ಶತಮಾನಗಳ ಕಾಲ ಆಳ್ವಿಕೆ ನಡೆಸಿತು, ಹಾಗೂ ಬ್ರಿಟಿಷ್ ಸಾಮ್ರಾಜ್ಯದ ಸಂರಕ್ಷಿತ ಪ್ರದೇಶದ ಸ್ವತಂತ್ರ ರಾಜಪ್ರಭುತ್ವದ ಒಂದು ಭಾಗವಾಗಿತ್ತು, ಈ ಮೊದಲು ಈ ಸ್ವತಂತ್ರ ತ್ರಿಪುರಿ ಸಾಮ್ರಾಜ್ಯವನ್ನು ಹಿಲ್ ಟಿಪ್ಪೆರಾ ಎಂದು ಕರೆಯುತ್ತಿದ್ದರು, ಹಾಗೂ ಈ ಪ್ರದೇಶವು 1949 ರಲ್ಲಿ ಸ್ವತಂತ್ರ ಭಾರತವನ್ನು ಸೇರಿಕೊಂಡಿತು. * ತ್ರಿಪುರಾ ರಾಜ್ಯವು ಭಾರತದಲ್ಲಿ ಭೌಗೋಳಿಕವಾಗಿ ಪ್ರತ್ಯೇಕವಾದ ಸ್ಥಳದಲ್ಲಿದೆ, ಇದು ರಾಷ್ಟ್ರೀಯ ಹೆದ್ದಾರಿ 8 ನ್ನು ದೇಶದ ಉಳಿದ ಭಾಗಗಳೊಂದಿಗೆ ಸಂಪರ್ಕಿಸುತ್ತದೆ. ಹಾಗೂ ಈ ರಾಜ್ಯವು '5' ಪರ್ವತ ಶ್ರೇಣಿಗಳನ್ನು ಹೊಂದಿದೆ ಅವುಗಳು : ಬೋರೊಮುರಾ, ಅಥರಾಮುರಾ, ಲಾಂಗ್‌ಥರೈ, ಶಖಾನ್ ಹಾಗೂ ಜಂಪೂಯಿ ಬೆಟ್ಟಗಳಾಗಿವೆ. ಪ್ರಸ್ತುತ ಅಗರ್ತಲಾ ನಗರವು ತ್ರಿಪುರಾ ರಾಜ್ಯದ ರಾಜಧಾನಿಯಾಗಿದೆ. 2011 ರ ಜನಗಣತಿಯ ಪ್ರಕಾರ ತ್ರಿಪುರಾ ರಾಜ್ಯವು 87.75% ಸಾಕ್ಷರತೆಯ ಪ್ರಮಾಣವನ್ನು ಹೊಂದಿರುವ ಭಾರತದ ಅತ್ಯಂತ ಸಾಕ್ಷರತೆ ಹೊಂದಿರುವ ರಾಜ್ಯವಾಗಿದೆ.