Job Description: * ಪ್ರಸ್ತುತ ಅಲ್ಕಾ ಮಿತ್ತಲ್‌ ಅವರನ್ನು ಕೇಂದ್ರ ಸರ್ಕಾರಿ ಸ್ವಾಮ್ಯದ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ ನಿಯಮಿತ (ONGC)ಕ್ಕೆ ಮೊದಲ ಮಹಿಳಾ ವ್ಯವಸ್ಥಾಪಕ-ನಿರ್ದೇಶಕಿಯನ್ನಾಗಿ ನೇಮಕ ಮಾಡಲಾಗಿದೆ. ಈ ಮೊದಲು ಈ ಹುದ್ದೆಯನ್ನು ವಹಿಸಿಕೊಂಡಿದ್ದ ಸುಭಾಷ್‌ ಕುಮಾರ್‌ ಅವರು 2021 ಡಿ.31 ರಂದು ಈ ಹುದ್ದೆಯಿಂದ ನಿವೃತ್ತಿಯಾಗಿದ್ದಾರೆ. * ಈ ಹಿಂದೆ 2018 ರಲ್ಲಿ ಅಲ್ಕಾ ಮಿತ್ತಲ್‌ ಅವರು ONGC'ಯ ಮಾನವ ಸಂಪನ್ಮೂಲ ನಿರ್ದೇಶಕಿಯಾಗಿ ನೇಮಕವಾಗಿದ್ದಾರೆ. ಇದೀಗ ಈ ಹುದ್ದೆಯ ಅಧಿಕಾರವನ್ನು ವಹಿಸಿಕೊಂಡಿರುವ ಮೊದಲ ಮಹಿಳೆ ಇವರಾಗಿದ್ದಾರೆ. * ಕೆಲ ವರ್ಷಗಳ ಹಿಂದೆ ಅಂದರೆ 2014 ರ ಮಾರ್ಚ್‌ನಲ್ಲಿ ನಿಶಿ ವಾಸುದೇವ ಅವರು ಹಿಂದುಸ್ತಾನ್‌ ಪೆಟ್ರೋಲಿಯಂ(HP)ನ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡದ್ದಾರೆ, ಇದೀಗ ಅವರ ನಂತರ ಮತ್ತೊಬ್ಬ ಮಹಿಳೆ ಸರ್ಕಾರಿ ಸ್ವಾಮ್ಯದ ಕಂಪನಿಯ ಮುಖ್ಯಸ್ಥರ ಹುದ್ದೆಯನ್ನು ಅಲಂಕರಿಸಿದ್ದಾರೆ. * * ಪ್ರಸ್ತುತ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ONGC) : -* ಇದೊಂದು ಭಾರತೀಯ ಸರ್ಕಾರಿ ಸ್ವಾಮ್ಯದ ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲ ನಿಗಮವಾಗಿದೆ. ಇದು ತನ್ನ ಕಚೇರಿಯುನ್ನು ನವದೆಹಲಿಯಲ್ಲಿ ಹೊಂದಿದೆ, ಹಾಗು ಈ ಸಂಸ್ಥೆಯು ಭಾರತ ಸರ್ಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಅಡಿಯಲ್ಲಿದೆ. * ಈ ONGC ದೇಶದಲ್ಲಿನ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ತೈಲ ಮತ್ತು ಅನಿಲ ಪರಿಶೋಧನೆ ಮತ್ತು ಉತ್ಪಾದನಾ ನಿಗಮವಾಗಿದೆ. * ಭಾರತ ಸರ್ಕಾರವು ಈ ಹಿಂದೆ 2010 ರ ನವೆಂಬರ್ ನಲ್ಲಿ ONGC ಗೆ ಮಹಾರತ್ನ ಸ್ಥಾನಮಾನವನ್ನು ನೀಡಿ ಗೌರವಿಸಿದೆ. ಅಷ್ಟೇ ಅಲ್ಲದೇ ಭಾರತ ಸರ್ಕಾರವು 2019–20 ರ ಆರ್ಥಿಕ ವರ್ಷಕ್ಕೆ ನಡೆಸಿದ ಸಮೀಕ್ಷೆಯಲ್ಲಿ ಈ ಸಮಸ್ಥೆಯು ಭಾರತದಲ್ಲಿ ಅತಿ ಹೆಚ್ಚು ಲಾಭ ಗಳಿಸುವ PSU ಎಂದು ಸ್ಥಾನ ಪಡೆದುಕೊಂಡಿದೆ, ಹಾಗೂ ಪ್ಲ್ಯಾಟ್ಸ್‌ನ ಟಾಪ್ 250 ಜಾಗತಿಕ ಕಂಪನಿಗಳ ಪೈಕಿ ONGC 7 ನೇ ಸ್ಥಾನದಲ್ಲಿತ್ತು. * ಭಾರತ ಸರ್ಕಾರವು ONGC ನ್ನು 1956 ರ ಆಗಸ್ಟ್. 14 ರಂದು ಸ್ಥಾಪಿಸಿದೆ. ಪ್ರಸ್ತುತ ಇದು ದೇಶದಲ್ಲಿ 11,000 ಕೀ. ಮೀ.ಗಿಂತಲೂ ಅಧಿಕ ಪೈಪ್‌ಲೈನ್‌ಗಳನ್ನು ಹೊಂದಿದೆ ಹಾಗೂ ಕಾರ್ಯನಿರ್ವಹಿಸುತ್ತದೆ. ಹಾಗೂ 17 ದೇಶಗಳಲ್ಲಿ ಯೋಜನೆಗಳನ್ನು ಹೊಂದಿದೆ.