Job Description: * ಇತ್ತೀಚೆಗೆ ಉತ್ತರ ಕೊರಿಯಾ ರಾಷ್ಟ್ರವು ಜಲಾಂತರ್ಗಾಮಿ ಉಡಾವಣೆ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಪರೀಕ್ಷಿಸಿದೆ. ಪ್ರಸ್ತುತ ಉತ್ತರ ಕೊರಿಯಾ ರಾಷ್ಟ್ರವು ಮತ್ತೇ UN ನಿರ್ಣಯವನ್ನು ಉಲ್ಲಂಘಿಸಿದೆ. ಇದೀಗ ವಿಶ್ವಸಂಸ್ಥೆಯು ಪರಮಾಣು ಸಾಧನಗಳು ಹಾಗೂ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಪರೀಕ್ಷೆಯಿಂದ ಉತ್ತರ ಕೊರಿಯಾ ರಾಷ್ಟ್ರವನ್ನು ನಿಷೇಧಿಸುವ ನಿರ್ಣಯವನ್ನು ಅಂಗೀಕರಿಸಿದೆ. * ಉತ್ತರ ಕೊರಿಯಾ ರಾಷ್ಟ್ರವು ಪರೀಕ್ಷಿಸಿದ ಈ ಕ್ಷಿಪಣಿಯು ಸುಮಾರು 310 ಮೈಲುಗಳಷ್ಟು ವ್ಯಾಪಿಸುವ ಸಮರ್ಥವನ್ನು ಹೊಂದಿದೆ. ಈ ಕ್ಷಿಪಣಿಯುನ್ನು ಜಪಾನ್ ಹಾಗೂ ಉತ್ತರ ಕೊರಿಯಾ ನಡುವಿನ ಸಮುದ್ರದಲ್ಲಿ ಪರೀಕ್ಷೆಯನ್ನು ನಡೆಸಲಾಯಿತು. ಇದೀಗ ಉತ್ತರ ಕೊರಿಯಾ ಈ ಕ್ಷಿಪಣಿಯನ್ನು ವಿಶ್ವದ ಅತ್ಯಂತ ಶಕ್ತಿಶಾಲಿ ಅಸ್ತ್ರವೆಂದು ಪರಿಗಣಿಸಿದೆ. * ಉತ್ತರ ಕೊರಿಯಾದ ಕ್ಷಿಪಣಿ ಪರೀಕ್ಷೆಗಳು USಗೆ ದೊಡ್ಡ ಕಳವಳಕಾರಿ ಸಂಗತಿಯಾಗಿದೆ. ಈ ಕ್ಷಿಪಣಿ ಶ್ರೇಣಿಗಳು US ನ ಪ್ರಮುಖ ನಗರಗಳನ್ನು ತಲುಪುವ ಸಾಮರ್ಥ್ಯವನ್ನು ಹೊಂದಿವೆ ಎಂದು ತಿಳಿಸಿದ್ದಾರೆ. ಇದೀಗ ಇದೊಂದು ಉತ್ತರ ಕೊರಿಯಾದ ಮೊದಲ ಖಂಡಾಂತರ ಕ್ಷಿಪಣಿಯಾಗಿದೆ. ಪ್ರಸ್ತುತ ಈ ಉತ್ತರ ಕೊರಿಯಾದ ಕ್ಷಿಪಣಿಗಳು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕಿಂತ '10' ಪಟ್ಟು ಎತ್ತರದ ಪ್ರದೇಶವನ್ನು ತಲುಪುವ ಸಾಮರ್ಥ್ಯ ಹೊಂದಿವೆ. ಹ್ವಾಸಾಂಗ್ - 15 ಬಾಹ್ಯಾಕಾಶದಲ್ಲಿ 4,500 ಕಿಲೋಮೀಟರ್‌ ವರೆಗೆ ಸಾಗುವ ಸಾಮರ್ಥ್ಯವನ್ನು ಹೊಂದಿದೆ, ಈ ಹ್ವಾಸಾಂಗ್ - 15'ನ್ನು ಇನ್ನೂ ಪರೀಕ್ಷಿಸಲಾಗಿಲ್ಲ. ಈ ಕ್ಷಿಪಣಿಯು ದ್ರವ ಇಂಧನ ಕ್ಷಿಪಣಿಯಾಗಿದೆ ಈ ಹಿಂದೆ 2020 ರಲ್ಲಿ ಇದನ್ನು ಪ್ರದರ್ಶನಕ್ಕೆ ಇಡಲಾಗಿತ್ತು ಇದು ಒಂದು ಕ್ಷಣ ವಿಶ್ವ ತಜ್ಞರನ್ನು ಆಶ್ಚರ್ಯಗೊಳಿಸಿತು, ಅದಷ್ಟೇ ಅಲ್ಲದೇ ಉತ್ತರ ಕೊರಿಯಾ ಹಲವಾರು ಅಪಾಯಕಾರಿ ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. * ಇದೀಗ ವಿಶ್ವಸಂಸ್ಥೆಯು(UN) ಉತ್ತರ ಕೊರಿಯಾ ದೇಶವನ್ನು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಪರೀಕ್ಷಿಸುವುದನ್ನು ನಿಷೇಧಿಸಿದೆ. ಆದರೂ UN ಉತ್ತರ ಕೊರಿಯಾಕ್ಕೆ ಕ್ರೂಸ್ ಕ್ಷಿಪಣಿಗಳನ್ನು ಪರೀಕ್ಷಿಸಲು ಅವಕಾಶ ಕಲ್ಪಿಸಿದೆ.